ಉತ್ತರಪ್ರದೇಶದಲ್ಲಿ ಶಿಥಿಲಗೊಂಡ ಶಾಲಾ ಕಟ್ಟಡಗಳನ್ನು ಕೆಡವಲು ಆದೇಶ! – UP Yogi Adityanath Order

ಲಕ್ಷ್ಮಣಪುರಿ (ಉತ್ತರಪ್ರದೇಶ) – ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶಿಥಿಲಗೊಂಡ ಮತ್ತು ಅಪಾಯಕಾರಿ ಶಾಲಾ ಕಟ್ಟಡಗಳನ್ನು ತಕ್ಷಣವೇ ಕೆಡವಲು ಆದೇಶಿಸಿದ್ದಾರೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಸರಕಾರ ಸ್ಪಷ್ಟಪಡಿಸಿದೆ. ಮಕ್ಕಳ ಜೀವಕ್ಕೆ ಅಪಾಯ ಉಂಟುಮಾಡುವ ಕಟ್ಟಡಗಳಲ್ಲಿ ಯಾವುದೇ ಬೋಧನೆ ನಡೆಯುವುದಿಲ್ಲ. ವಿದ್ಯಾರ್ಥಿಗಳಿಗೆ ಬೇರೆಡೆ ಪಾಠ ಹೇಳಿಕೊಡಲಾಗುತ್ತದೆ.

ಈ ಆದೇಶದ ಇತರ ಅಂಶಗಳು

1. ಎಲ್ಲಾ ಜಿಲ್ಲೆಗಳು ಅಪಾಯಕಾರಿ ಶಾಲಾ ಕಟ್ಟಡಗಳನ್ನು ತಕ್ಷಣವೇ ಪರಿಶೀಲಿಸಿ, ತಾಂತ್ರಿಕ ಸಮಿತಿಗೆ ವರದಿ ಸಲ್ಲಿಸಬೇಕು. ತಾಂತ್ರಿಕ ಪರಿಶೀಲನೆಯ ನಂತರ ಕಟ್ಟಡಗಳನ್ನು ಕೆಡವಲು ಕ್ರಮ ಕೈಗೊಳ್ಳಲಾಗುವುದು.

2. ವಿದ್ಯಾರ್ಥಿಗಳಿಗೆ ಶಿಕ್ಷಣ ಪಂಚಾಯತ್ ಭವನ, ಗ್ರಾಮ ಸಚಿವಾಲಯ, ಸುರಕ್ಷಿತ ಕೊಠಡಿಗಳು ಅಥವಾ ಇತರ ಶಾಲೆಗಳಲ್ಲಿ ಸ್ಥಳಾಂತರಸಲಾಗುವುದು.

3. ಎಲ್ಲಾ ಸಂಬಂಧಿತ ಅಧಿಕಾರಿಗಳು ನಿಗದಿತ ಸಮಯದಲ್ಲಿ ಹೊಸ ಕಟ್ಟಡಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು.

ಹಲವು ಶಾಲಾ ಕಟ್ಟಡಗಳು ಅತ್ಯಂತ ಶಿಥಿಲಾವಸ್ಥೆಯಲ್ಲಿವೆ! – ಶ್ಯಾಮ ಕಿಶೋರ್ ತಿವಾರಿ

ನಿರ್ಮಾಣ ಕ್ಷೇತ್ರದ ತಜ್ಞರಾದ ಶ್ಯಾಮ ಕಿಶೋರ್ ತಿವಾರಿ ಇವರು, ಅನೇಕ ಶಾಲಾ ಕಟ್ಟಡಗಳು ಅತ್ಯಂತ ಶಿಥಿಲಗೊಂಡಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಜೀವಕ್ಕೆ ಅಪಾಯಕಾರಿಯಾಗಿವೆ ಎಂದು ತಿಳಿಸಿದ್ದಾರೆ. ಆದ್ದರಿಂದ, ಈಗ ಸಮಯಕ್ಕೆ ಸರಿಯಾಗಿ ಮತ್ತು ದೃಢವಾದ ಕ್ರಮ ಕೈಗೊಳ್ಳುವುದು ಅವಶ್ಯಕ.