ಬಂಗಾಳದಲ್ಲಿ ಭಾಜಪ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ

ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಆರೋಪ

ಕೋಲಕಾತಾ – ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ಕೂಚ ಬಿಹಾರ ಜಿಲ್ಲೆಯಲ್ಲಿ ದಾಳಿ ಮಾಡಲಾಗಿದೆ. ಪ್ರತಿಭಟನೆಯ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಅವರ ಬೆಂಗಾವಲು ವಾಹನದ ಮೇಲೆ ದಾಳಿ ಮಾಡಿದರು; ಆದರೆ, ಈ ಆರೋಪಗಳು ಪೂರ್ವನಿಯೋಜಿತ ಪಿತೂರಿ ಎಂದು ತೃಣಮೂಲ ಕಾಂಗ್ರೆಸ್ ಹೇಳಿದೆ.

1. ಸುವೇಂದು ಅಧಿಕಾರಿ ಅವರು ಕೂಚಬಿಹಾರ ಪೊಲೀಸ ಅಧೀಕ್ಷಕರ ಕಚೇರಿಯ ಹೊರಗೆ ಭಾಜಪ ಪ್ರತಿಭಟನೆಯನ್ನು ಮುನ್ನಡೆಸಲು ಉತ್ತರ ಬಂಗಾಳ ಜಿಲ್ಲೆಗೆ ತೆರಳಿದ್ದರು. ಈ ವೇಳೆ ಅವರಿಗೆ ಘೋಷಣೆಗಳನ್ನು ಎದುರಿಸಬೇಕಾಯಿತು. ಅಲ್ಲದೆ, ಖಗರಾಬಾಡಿ ಪ್ರದೇಶದಲ್ಲಿ ಅವರ ಬೆಂಗಾವಲು ವಾಹನಕ್ಕೆ ಕಪ್ಪು ಬಾವುಟಗಳನ್ನು ತೋರಿಸಲಾಯಿತು.

2. ಭಾಜಪ ನಾಯಕರು ಮಾಹಿತಿ ನೀಡಿದ ಪ್ರಕಾರ, ಕಪ್ಪು ಬಾವುಟಗಳನ್ನು ಹಿಡಿದ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಖಗರಾಬಾಡಿ ಚೌಕದಲ್ಲಿ ಜಮಾಯಿಸಿದ್ದರು. ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನ ಆ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಈ ಕಾರ್ಯಕರ್ತರು ‘ಹಿಂದಕ್ಕೆ ಹೋಗಿ’ ಎಂದು ಘೋಷಣೆಗಳನ್ನು ಕೂಗಿದರು ಮತ್ತು ಅವರ ಕಾರಿನ ಮೇಲೆ ಚಪ್ಪಲಿಗಳನ್ನು ಎಸೆದರು.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಅಲ್ಲಿ ಕೇಂದ್ರ ಸರಕಾರವು ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರಬೇಕು ಎಂದು ಅಪೇಕ್ಷೆ!