ಐತಿಹಾಸಿಕ ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ 5 ಬಾಂಗ್ಲಾದೇಶದ ನುಸುಳುಕೋರರ ಬಂಧನ

ನಕಲಿ ದಾಖಲೆಗಳನ್ನು ಬಳಸಿ ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು

ನವ ದೆಹಲಿ – ಐತಿಹಾಸಿಕ ಕೆಂಪು ಕೋಟೆಗೆ ನುಗ್ಗಲು ಯತ್ನಿಸಿದ ಐವರು ಬಾಂಗ್ಲಾದೇಶದ ನುಸುಳುಕೋರರನ್ನು ಬಂಧಿಸಲಾಗಿದೆ. ಇವರೆಲ್ಲರೂ 20 ರಿಂದ 25 ವರ್ಷ ವಯಸ್ಸಿನವರಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ದೆಹಲಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಪೊಲೀಸರು ಇವರನ್ನು ವಿಚಾರಣೆ ಮಾಡುತ್ತಿದ್ದಾರೆ. ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಕೆಂಪು ಕೋಟೆಯ ಸುತ್ತ ಭದ್ರತೆಯನ್ನು ಬಿಗಿಗೊಳಿಸಿದಾಗಲೂ ಈ ಘಟನೆ ನಡೆದಿದೆ. ಈ ಘಟನೆಯ ನಂತರ, ಭದ್ರತಾ ವ್ಯವಸ್ಥೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ 7 ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ಇದು ದೆಹಲಿ ಪೊಲೀಸರು, ಗುಪ್ತಚರ ಇಲಾಖೆ ಮತ್ತು ಆಡಳಿತಕ್ಕೆ ನಾಚಿಕೆಗೇಡಿನ ಸಂಗತಿ. ನಾಳೆ ಈ ನುಸುಳುಕೋರರು ವಿಧ್ವಂಸಕ ಕೃತ್ಯ ಎಸಗಿದ್ದರೆ ಅದರ ಜವಾಬ್ದಾರಿಯನ್ನು ಯಾರು ಹೊರುತ್ತಿದ್ದರು? ಈಗಲಾದರೂ ಅಮೆರಿಕಾ ಮತ್ತು ಪಾಕಿಸ್ತಾನದಂತೆ ಸರಕಾರ ನುಸುಳುಕೋರರನ್ನು ಹೊರಹಾಕಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆಯೇ?