Swami Avimukteshwaranand : ಮಹಾರಾಷ್ಟ್ರ ಸರಕಾರವು ಒಂದು ತಿಂಗಳೊಳಗೆ ಗೋಮಾತೆಗಾಗಿ ಆಚಾರ ಸಂಹಿತೆಯನ್ನು ಘೋಷಿಸಬೇಕು! – ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ

ಮುಂಬಯಿ – ಮಹಾರಾಷ್ಟ್ರ ಸರಕಾರವು ಗೋಮಾತೆಗೆ ‘ರಾಜ್ಯಮಾತೆ’ಯ ಸ್ಥಾನಮಾನವನ್ನು ನೀಡಿದೆ; ಆದರೆ ಈ ಬಗ್ಗೆ ರಾಜ್ಯ ಶಿಷ್ಟಾಚಾರವನ್ನು ಇನ್ನೂ ಘೋಷಿಸಿಲ್ಲ. ರಾಜ್ಯ ಶಿಷ್ಟಾಚಾರವನ್ನು ಘೋಷಿಸುವವರೆಗೂ, ಗೋಮಾತೆಗೆ ರಾಜ್ಯಮಾತೆಯ ಸ್ಥಾನಮಾನ ಕೇವಲ ಕಾಗದದ ಮೇಲೆಯೇ ಮಾತ್ರ ಇರುತ್ತದೆ. ಮಹಾರಾಷ್ಟ್ರ ಸರಕಾರವು ಒಂದು ತಿಂಗಳೊಳಗೆ ರಾಜ್ಯಮಾತೆಯ ಕುರಿತಾದ ರಾಜ್ಯ ಶಿಷ್ಟಾಚಾರ ಮತ್ತು ಗೋಮಾತೆಯ ಆಚಾರ ಸಂಹಿತೆಯನ್ನು ಘೋಷಿಸಬೇಕು ಎಂದು ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಆಗಸ್ಟ್ 3 ರಂದು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಚಾತುರ್ಮಾಸದ ನಿಮಿತ್ತ, ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಮುಂಬಯಿಯ ಬೊರಿವಲಿಯಲ್ಲಿ ಎರಡು ದಿನಗಳ ‘ಗೋ ಸಂಸದ್’ ಅನ್ನು ಆಯೋಜಿಸಿದ್ದಾರೆ. ಈ ಸಂದರ್ಭದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಬೇಡಿಕೆಯನ್ನು ಮಂಡಿಸಿದರು. ಗೋಮಾತೆಯನ್ನು ರಾಷ್ಟ್ರಮಾತೆ ಎಂದು ಘೋಷಿಸಲು ಭಾರತೀಯ ಸಂಸತ್ತಿಗೆ ಸಮಾನಾಂತರವಾಗಿ ‘ಗೋ ಸಂಸದ್’ ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಒಂದೊಂದು ‘ರಾಮಾ ಗೋಧಾಮ’ ಸ್ಥಾಪಿಸಲಾಗುವುದು. ಪ್ರತಿಯೊಂದು ರಾಮಾ ಗೋಧಾಮದಲ್ಲಿ 108 ಗೋಮಾತೆಗಳು ಇರುತ್ತವೆ. ರಾಮಾ ಗೋಧಾಮದಲ್ಲಿ ಗೋಮಾತೆಗಳು ಸಂತೋಷದಿಂದ ವಿಹರಿಸುತ್ತವೆ. ಅವು ಹಾಲಿನೊಂದಿಗೆ ಆಶೀರ್ವಾದವನ್ನೂ ನೀಡುತ್ತವೆ. ರಾಮಾ ಗೋಧಾಮಗಳು ರಾಷ್ಟ್ರದ ಉನ್ನತಿಯ ಸಂಕೇತಗಳಾಗಿವೆ. ಇದರಿಂದಾಗಿ ಸನಾತನ ಧರ್ಮವು ಮತ್ತೆ ಸ್ಥಿರತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿಯೂ ರಾಮಾ ಗೋಧಾಮ ಯೋಜನೆಗಳು ಪ್ರಾರಂಭವಾಗಲಿವೆ. ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ 4 ಸಾವಿರದ 123 ರಾಮಾ ಗೋಧಾಮಗಳನ್ನು ಸ್ಥಾಪಿಸಲಾಗುವುದು ಎಂದು ಈ ಸಂದರ್ಭದಲ್ಲಿ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರು ಹೇಳಿದರು.

ಸಂಪಾದಕೀಯ ನಿಲುವು

ಗೋಮಾತೆಯ ಸಂರಕ್ಷಣೆಗಾಗಿ ಪ್ರಯತ್ನಗಳು ನಡೆಯುತ್ತಿರುವಾಗ, ಗೋ ಕಳ್ಳಸಾಗಣೆಯನ್ನು ತಡೆಯಲು ಸರಕಾರವು ಒಂದು ದೃಢವಾಗಿರಬೇಕು ಎಂಬುದು ಹಿಂದೂಗಳ ಅಪೇಕ್ಷೆ !