
ಭೋಪಾಲ್ (ಮಧ್ಯಪ್ರದೇಶ) – ಮಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಿಂದ ನಿರಪರಾಧಿಯಾಗಿ ಬಿಡುಗಡೆಯಾದ ನಂತರ, ಭಾಜಪದ ಮಾಜಿ ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಠಾಕೂರ್ ಅವರು ತಮ್ಮ ಸ್ವಂತ ಊರಾದ ಭೋಪಾಲ್‌ಗೆ ಮರಳಿದರು. ಆ ಸಮಯದಲ್ಲಿ, ‘ಭಾರತ್ ಮಾತಾ ಕಿ ಜೈ’ ಘೋಷಣೆಗಳೊಂದಿಗೆ ಪುಷ್ಪವೃಷ್ಟಿ ಮಾಡಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಾಧ್ವಿ ಪ್ರಜ್ಞಾ, ಭಯೋತ್ಪಾದನೆಗೆ ಬಣ್ಣವಿಲ್ಲ ಎಂದು ಯಾರು ಹೇಳುತ್ತಾರೆ? ಭಯೋತ್ಪಾದನೆಗೆ ಹಸಿರು ಬಣ್ಣವಿದೆ. ಹಸಿರು ಬಣ್ಣದ ಧ್ವಜದ ಅಡಿಯಲ್ಲಿ ಭಯೋತ್ಪಾದನೆಯನ್ನು ಹರಡಲಾಗುತ್ತದೆ. ಈ ಜನರು ಹಸಿರು ಬಣ್ಣವನ್ನು ಬಳಸಿ ಪಹಲ್ಗಾಮ್‌ನಲ್ಲಿ ಏನು ಮಾಡಿದರು ಎಂಬುದು ಎಲ್ಲರ ಮುಂದಿದೆ. ಅಲ್ಲಿ ಭಯೋತ್ಪಾದಕರು ಜನರನ್ನು ಕೇಳಿದರು, ‘ನೀನು ಹಿಂದೂವೇ?’ ಮತ್ತು ನಂತರ ಬಟ್ಟೆಗಳನ್ನು ತೆಗೆದು ಪರೀಕ್ಷಿಸಿ ಗುಂಡು ಹಾರಿಸಿದರು. ‘ಮುಸ್ಲಿಂ ಭಯೋತ್ಪಾದನೆ’ ಎಂಬುದು ಖಚಿತ.
ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಿರಲು ಸಾಧ್ಯವಿಲ್ಲ!
ಸಾಧ್ವಿ ಪ್ರಜ್ಞಾಸಿಂಗ್ ಹೇಳಿದರು, ಮಲೇಗಾಂವ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 17 ವರ್ಷಗಳ ದೈಹಿಕ ಮತ್ತು ಮಾನಸಿಕ ಕಿರುಕುಳವನ್ನು ಸಹಿಸಿಕೊಳ್ಳಬೇಕಾಯಿತು; ಆದರೆ ಕೊನೆಗೆ ಸತ್ಯವೇ ಗೆದ್ದಿತು. ಕಾಂಗ್ರೆಸ್ ‘ಕೇಸರಿ ಭಯೋತ್ಪಾದನೆ’ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿತು; ಆದರೆ ಅದು ಉಳಿಯಲಿಲ್ಲ. ಹಿಂದೂಗಳು ಎಂದಿಗೂ ಭಯೋತ್ಪಾದಕರಾಗಿರಲು ಸಾಧ್ಯವಿಲ್ಲ; ಏಕೆಂದರೆ ಹಿಂದೂಗಳು ಸಹಿಷ್ಣುಗಳು. ‘ವಸುಧೈವ ಕುಟುಂಬಕಂ’ ಇದೇ ನಮ್ಮ ಬೋಧನೆ. ಕಾಂಗ್ರೆಸ್ ಅಧರ್ಮ ಮಾನಸಿಕತೆಗೆ ಉತ್ತೇಜನ ನೀಡಿತು ಮತ್ತು ಹಿಂದೂಗಳನ್ನು ಅವಮಾನಿಸಲು ಸಂಚು ರೂಪಿಸಿತು. ಕಾಂಗ್ರೆಸ್ ಭಯೋತ್ಪಾದಕರಿಗಾಗಿ ಕಣ್ಣೀರು ಹಾಕುತ್ತದೆ ಮತ್ತು ಹಿಂದೂಗಳಿಗೆ ತೊಂದರೆ ನೀಡುತ್ತದೆ. ದಿಗ್ವಿಜಯ್ ಸಿಂಗ್ ಸಂಪೂರ್ಣವಾಗಿ ದಿಗ್ಭ್ರಮೆಗೊಂಡಿದ್ದಾರೆ. ಅವರ ಹೆಸರೇ ಅಶುಭವಾಗಿದೆ.
‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ!’ -(ಅಂತೆ) – ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್ಸಾಧ್ವಿ ಪ್ರಜ್ಞಾ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಆಲ್ ಇಂಡಿಯಾ ಇಮಾಮ್ ಅಸೋಸಿಯೇಷನ್’ ಅಧ್ಯಕ್ಷ ಮೌಲಾನಾ ಸಾಜಿದ್ ರಶೀದಿ ಅವರು ಸಾಧ್ವಿ ಅವರ ಹೇಳಿಕೆ ‘ಇಸ್ಲಾಮೋಫೋಬಿಯಾ’ (ಇಸ್ಲಾಂ ದ್ವೇಷ) ಎಂದು ಹೇಳಿದ್ದಾರೆ. ರಶೀದಿ ಅವರು, ಭಯೋತ್ಪಾದನೆಯನ್ನು ಯಾವುದೇ ಧರ್ಮದೊಂದಿಗೆ ಜೋಡಿಸುವುದು ತಪ್ಪು ಮಾತ್ರವಲ್ಲ, ಸಮಾಜವನ್ನು ವಿಭಜಿಸುವಂಥದ್ದು ಎಂದು ಹೇಳಿದರು. ಇತರ ಧರ್ಮದ ಜನರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಗಾಗಿ ಬೇಹುಗಾರಿಕೆ ನಡೆಸುವಾಗ ಸಿಕ್ಕಿಬಿದ್ದಾಗ, ಅವರನ್ನು ‘ಹಿಂದೂ ಭಯೋತ್ಪಾದಕರು’ ಅಥವಾ ‘ಕೇಸರಿ ಭಯೋತ್ಪಾದಕರು’ ಎಂದು ಕರೆಯುತ್ತಾರೆಯೇ? (ಅಂತಹ ದೇಶದ್ರೋಹಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಹಿಂದೂಗಳ ಬೇಡಿಕೆಯಾಗಿದೆ; ಆದರೆ ಜಿಹಾದಿಗಳು ಸಿಕ್ಕಿಬಿದ್ದಾಗ, ಎಷ್ಟು ಸಂಘಟನೆಗಳು ಅಥವಾ ಮೌಲಾನಾ ರಶೀದಿ ಮತ್ತು ಅವರ ಸಂಘಟನೆ ಅಂತಹವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಬೇಡಿಕೆ ಇಡುತ್ತವೆ? – ಸಂಪಾದಕರು) ಭಯೋತ್ಪಾದಕರಿಗೆ ಯಾವುದೇ ಧರ್ಮವಿಲ್ಲ, ಅವರು ಮಾನವೀಯತೆಯ ಶತ್ರುಗಳು. (ಇಸ್ಲಾಮಿಕ್ ಸ್ಟೇಟ್, ಲಷ್ಕರ್-ಎ-ತೋಯ್ಬಾ, ಜೈಶ್-ಎ-ಮೊಹಮ್ಮದ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಸಿಮಿ ಇತ್ಯಾದಿ ಜಿಹಾದಿ ಸಂಘಟನೆಗಳ ಬಗ್ಗೆ ರಶೀದಿ ಎಂದಾದರೂ ಹೀಗೆ ಮಾತನಾಡಿದ್ದಾರೆಯೇ? – ಸಂಪಾದಕರು) ಸಂಪಾದಕೀಯ ನಿಲುವುಕಾಂಗ್ರೆಸ್ ‘ಹಿಂದೂ ಭಯೋತ್ಪಾದನೆ’ ಮತ್ತು ‘ಕೇಸರಿ ಭಯೋತ್ಪಾದನೆ’ ಎಂಬ ಪದಗಳನ್ನು ಬಳಸಲು ಪ್ರಾರಂಭಿಸಿದಾಗ, ಮುಸ್ಲಿಂ ಸಂಘಟನೆಗಳು ಅದನ್ನು ವಿರೋಧಿಸಿ ‘ಭಯೋತ್ಪಾದನೆಗೆ ಯಾವುದೇ ಧರ್ಮವಿಲ್ಲ’ ಎಂದು ಏಕೆ ಹೇಳಲಿಲ್ಲ? ದೇಶದಲ್ಲಿ ಕಳೆದ 35 ವರ್ಷಗಳಿಂದ ಜಿಹಾದಿ ಭಯೋತ್ಪಾದನೆ ನಡೆಯುತ್ತಿದ್ದರೂ, ಅದಕ್ಕೆ ವಿರುದ್ಧವಾಗಿ ಒಂದು ಮುಸ್ಲಿಂ ಸಂಘಟನೆಯಾದರೂ ರಸ್ತೆಗೆ ಇಳಿದು ಪ್ರತಿಭಟಿಸಿದೆಯೇ? ಒಂದಾದರೂ ಜಿಹಾದಿ ಭಯೋತ್ಪಾದಕ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿದೆಯೇ? ಬದಲಾಗಿ, ಆ ಸಂಘಟನೆಗಳ ಮೇಲಿನ ನಿಷೇಧವನ್ನೇ ವಿರೋಧಿಸಿವೆ! |
ಸಾಧ್ವಿ ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ! – ಕಾಂಗ್ರೆಸ್
ಕಾಂಗ್ರೆಸ್‌ನ ಮಧ್ಯಪ್ರದೇಶ ವಕ್ತಾರ ಭೂಪೇಂದ್ರ ಗುಪ್ತಾ ಅವರು ಸಾಧ್ವಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನ್ಯಾಯಾಲಯಗಳು ಈಗಾಗಲೇ ಸ್ಪಷ್ಟಪಡಿಸಿವೆ, ಭಯೋತ್ಪಾದನೆಗೆ ಯಾವುದೇ ಬಣ್ಣವಿಲ್ಲ. ಸಾಧ್ವಿ ಪ್ರಜ್ಞಾಸಿಂಗ್ ಅವರ ಹೇಳಿಕೆ ಅತ್ಯಂತ ದುರದೃಷ್ಟಕರವಾಗಿದೆ. ಅವರು ಮತ್ತೊಮ್ಮೆ ಸಮಾಜದಲ್ಲಿ ಬಿರುಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
ಕಾಂಗ್ರೆಸ್ ‘ಹಿಂದೂ ಭಯೋತ್ಪಾದನೆ’ ಎಂದು ಹೇಳಿದರೆ ಅದು ವಾಸ್ತವ ಮತ್ತು ಸಾಧ್ವಿ ಪ್ರಜ್ಞಾಸಿಂಗ್ ‘ಮುಸ್ಲಿಂ ಭಯೋತ್ಪಾದನೆ’ ಎಂದು ಹೇಳಿದರೆ ಅದು ಬಿರುಕು ಮೂಡಿಸುವ ಪ್ರಯತ್ನ, ಇದು ಕಾಂಗ್ರೆಸ್‌ನ ದ್ವಿಮುಖ ನೀತಿ ಮಾತ್ರವಲ್ಲ, ಹಿಂದೂ ದ್ವೇಷ ಮತ್ತು ಮುಸ್ಲಿಂ ಪ್ರೇಮವಾಗಿದೆ!
‘ದೇವಸ್ಥಾನ ಇನಾಮು ನಿರ್ಮೂಲನಾ ಕರಡು ಕಾಯ್ದೆ 2026’ ಕ್ಕೆ ತಡೆ!
ಉತ್ತರಪ್ರದೇಶದಲ್ಲಿನ ನೇಪಾಳ ಗಡಿಯ ಸಮೀಪವಿರುವ ‘ಗುಪ್ತ ಚರ್ಚ್’ ಮೂಲಕ ಹಿಂದೂಗಳ ಮತಾಂತರ ಮಾಡಲಾಗುತ್ತಿದೆ !
ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!
ಸಂತ್ರಸ್ತ ಯುವತಿಯರಿಗೆ ಜಾಕಿರ್ ನಾಯ್ಕ್ ಮತ್ತು ಪಾಕಿಸ್ತಾನಿ ಮೌಲ್ವಿ ತಾರಿಕ್ ಜಮೀಲ್ ಅವರ ವಿಡಿಯೋಗಳನ್ನು ತೋರಿಸಲಾಗುತ್ತಿತ್ತು !
‘ವಿಪ್ರೋ’ದಲ್ಲಿ ಮಹಿಳಾ ಉದ್ಯೋಗಿಗಳ ಕಲ್ಯಾಣ, ಘನತೆ ಮತ್ತು ಗೌರವಕ್ಕೆ ಅತ್ಯುನ್ನತ ಪ್ರಾಮುಖ್ಯತೆ ನೀಡಲಾಗುತ್ತದೆ’(ಅಂತೆ))
ಭಯೋತ್ಪಾದಕ ದಾಳಿ ನಡೆಸುವ ಸಂಚು : ತುಮಕೂರು ಮೂಲದ ಅಲ್ಲಾ ಬಕ್ಷ್ ಎಂಬುವನ ಬಂಧನ