ಏಮ್ಸ್, ಟಾಟಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸರ್ ಗಂಗಾರಾಮ ಆಸ್ಪತ್ರೆಯ ಸಹಯೋಗ

ಹರಿದ್ವಾರ (ಉತ್ತರಾಖಂಡ) – ಶೀಘ್ರದಲ್ಲೇ, ಏಮ್ಸ್, ಟಾಟಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸರ್ ಗಂಗಾರಾಮ ಆಸ್ಪತ್ರೆಯ ಸಹಯೋಗದೊಂದಿಗೆ, ಪತಂಜಲಿ ಆಯುರ್ವೇದ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಗಳಿಗೆ ಆಧುನಿಕ ವಿಧಾನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುವುದು. ವಿಶೇಷವೆಂದರೆ, ಈ ಚಿಕಿತ್ಸೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿರುತ್ತವೆ.

ಈ ಉಪಕ್ರಮದ ಮೂಲಕ ವಿಶ್ವ ದರ್ಜೆಯ ಚಿಕಿತ್ಸೆಯನ್ನು ಒದಗಿಸಲು ಪ್ರಯತ್ನಿಸಲಾಗುವುದು ಎಂದು ಯೋಗಋಷಿ ರಾಮದೇವ ಬಾಬಾ ಅವರು ತಿಳಿಸಿದರು. ಇಲ್ಲಿ ಪತಂಜಲಿ ವಿಶ್ವವಿದ್ಯಾಲಯ, ಪತಂಜಲಿ ಸಂಶೋಧನಾ ಸಂಸ್ಥೆ ಮತ್ತು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ 2 ದಿನಗಳ ಅನಾಮಯಮ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದ ಕಾರ್ಯಕ್ರಮದಲ್ಲಿ ರಾಮದೇವ ಬಾಬಾ ಮಾತನಾಡುತ್ತಿದ್ದರು.
16 ರಾಜ್ಯಗಳಿಂದ 300ಕ್ಕೂ ಹೆಚ್ಚು ಪ್ರತಿನಿಧಿಗಳ ಸಹಭಾಗ

ಆಯುರ್ವೇದ ಮತ್ತು ಆಧುನಿಕ ಔಷಧಿಗಳ ಸಮನ್ವಯ ಮತ್ತು ಸಂಯೋಜಿಸುವ ಉದ್ದೇಶದಿಂದ ಹಾಗೆಯೇ ಜಾಗತಿಕ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಈ ಸಮ್ಮೇಳನದಲ್ಲಿ ದೇಶದಾದ್ಯಂತ ಸುಮಾರು 16 ರಾಜ್ಯಗಳ 200 ಶೈಕ್ಷಣಿಕ ಸಂಸ್ಥೆಗಳಿಂದ 300ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಇದು ‘ಆನ್‌ಲೈನ್’ ಮತ್ತು ‘ಆಫ್‌ಲೈನ್’ ಎರಡೂ ವಿಧಾನಗಳಲ್ಲಿತ್ತು. ಈ ಸಮ್ಮೇಳನದಲ್ಲಿ ದೇಶದ ವಿವಿಧ ಹೆಸರಾಂತ ವೈದ್ಯಕೀಯ ಮತ್ತು ಶೈಕ್ಷಣಿಕ ಸಂಸ್ಥೆಗಳ ತಜ್ಞರು ಮತ್ತು ಸಂಶೋಧಕರು ಕೂಡ ಭಾಗವಹಿಸಿದ್ದರು.
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
Mathura, Vrindavan : ಮಥುರಾ-ಬೃಂದಾವನ: ಬಹಿರಂಗ ಚರ್ಚೆಗೆ ಕರೆ ನೀಡಿದ ಯೋಗಿ ಆದಿತ್ಯನಾಥ್