|

ಚಂಡೀಗಢ (ಹರಿಯಾಣ) – ಹರಿಯಾಣದ ಸೋನಿಪತ್ ನಲ್ಲಿ ರೋಹತಕ್ ಭ್ರಷ್ಟಾಚಾರ ನಿಗ್ರಹ ದಳವು ಸಂದೀಪ ಎಂಬ ಶಾಲಾ ಗುಮಾಸ್ತನನ್ನು 30 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದೆ. ಈ ಹಣವನ್ನು ದೆಹಲಿ ಪೊಲೀಸ್ ನ ವಿಶೇಷ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಜೈನ್ ಪರವಾಗಿ ಪಡೆಯಲಾಗುತ್ತಿತ್ತು.
1. ಸೋನಿಪತ್ ನಿವಾಸಿ ವಿಪಿನ್ ಅವರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು. ಅವರ ಸಂಬಂಧಿಕರ ಮೇಲೆ ದೆಹಲಿಯ ಅಲಿಪುರ್ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳು ದಾಖಲಾಗಿದ್ದವು ಎಂದು ಅವರು ದೂರಿನಲ್ಲಿ ತಿಳಿಸಿದ್ದರು. ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಜೈನ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದ್ದು, ಆ ಪ್ರಕರಣಗಳಿಂದ ಸಂಬಂಧಿಕರನ್ನು ಕೈಬಿಡಲು ಅಥವಾ ಅವರಿಗೆ ರಿಯಾಯಿತಿ ನೀಡಲು 1 ಕೋಟಿ ರೂಪಾಯಿ ಲಂಚ ಕೇಳುತ್ತಿದ್ದರು ಎಂದು ದೂರು ನೀಡಿದ್ದರು.
2. ಈ ದೂರಿನ ಆಧಾರದ ಮೇಲೆ ದಳವು ಬಲೆ ಬೀಸಿತು ಮತ್ತು ವಿಪಿನ್ ಅವರನ್ನು ಸುನೀಲ ಜೈನ್ ಸೂಚನೆಯ ಮೇರೆಗೆ ಸೋನಿಪತ್ ನ ‘ಥ್ರೀ-ಜಿ’ ಶಾಲೆಗೆ ಕಳುಹಿಸಿತು. ಅಲ್ಲಿ ಗುಮಾಸ್ತ ಸಂದೀಪ ಇದ್ದನು, ಅವನಿಗೆ 30 ಲಕ್ಷ ರೂಪಾಯಿ ನೀಡಿದಾಗ, ದಳವು ಕಾರ್ಯಾಚರಣೆ ನಡೆಸಿ ಸಂದೀಪನನ್ನು ಬಂಧಿಸಿತು.
3. ‘ಥ್ರೀ-ಜಿ’ ಶಾಲೆಯು ಸುನೀಲ ಜೈನ್ ಅವರ ಸಂಬಂಧಿಕರಿಗೆ ಸೇರಿದ್ದು. ಈಗ ಪೊಲೀಸ್ ಇನ್ಸ್‌ಪೆಕ್ಟರ್ ಸುನೀಲ ಜೈನ್ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.
ಸಂಪಾದಕೀಯ ನಿಲುವುಕಾನೂನಿನ ರಕ್ಷಕರಾಗಿರುವ ಪೊಲೀಸರೇ ಕಾನೂನಿನ ಭಕ್ಷಕರಾಗಿದ್ದಾರೆ. ಇಂತಹ ಭ್ರಷ್ಟ ಪೊಲೀಸರಿಗೆ ಗಲ್ಲು ಶಿಕ್ಷೆ ನೀಡಲು ಸರಕಾರ ನ್ಯಾಯಾಲಯದಲ್ಲಿ ವಾದಿಸಬೇಕು. ಆಗ ಮಾತ್ರ ಭ್ರಷ್ಟಾಚಾರ ಮಾಡುವ ಮೊದಲು ನೂರು ಬಾರಿ ಆಲೋಚಿಸುತ್ತಾರೆ. |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!