ಜಬಲಪುರ (ಮಧ್ಯಪ್ರದೇಶ) ಇಲ್ಲಿ ಅಫ್ಘಾನ್ ನುಸುಳುಕೋರನ ಬಂಧನ

  • ನಕಲಿ ದಾಖಲೆಗಳನ್ನು ಬಳಸಿ ತನ್ನ ಅಫ್ಘಾನ್ ಸ್ನೇಹಿತರನ್ನು ಭಾರತಕ್ಕೆ ಕರೆತಂದಿದ್ದನು!

  • ಭಾರತೀಯ ಮಹಿಳೆಯನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿದ್ದನು

ಜಬಲಪುರ (ಮಧ್ಯಪ್ರದೇಶ) – ನಗರದಲ್ಲಿ ಕಳೆದ 10 ವರ್ಷಗಳಿಂದ ಅಡಗಿದ್ದ ಅಫ್ಘಾನ್ ಪ್ರಜೆಯನ್ನು ರಾಜ್ಯ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಒಂದು ವಾರದಿಂದ ಅವನ ಮೇಲೆ ನಿಗಾ ಇಟ್ಟಿದ್ದರು. ಅವನನ್ನು ನಗರದ ಛೋಟಿ ಓಮಟಿ ಪ್ರದೇಶದಲ್ಲಿ ಬಂಧಿಸಲಾಯಿತು. ಈ ಅಫ್ಘಾನ್ ಪ್ರಜೆಯ ಹೆಸರು ಸೊಹಬತ್ ಖಾನ್ ಆಗಿದೆ.

1. ಸೊಹಬತ್ ಖಾನ್ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು ಮತ್ತು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಅವನ ಬಳಿ ಇದ್ದ ಹಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

2. ಖಾನ್ 2015ರಲ್ಲಿ ಕೆಲಸದ ನಿಮಿತ್ತ ಬಂಗಾಳದ ಮೂಲಕ ಭೋಪಾಲ್ ಮತ್ತು ನಂತರ ಜಬಲಪುರಕ್ಕೆ ಬಂದಿದ್ದನು. ನಂತರ ಸೊಹಬತ್ ಜಬಲ್‌ಪುರದ ಛೋಟಿ ಓಮಟಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಮಹಿಳೆಯೊಂದಿಗೆ ಸ್ನೇಹ ಬೆಳೆಸಿ, ಆಕೆಯನ್ನು ಮದುವೆಯಾಗಿ ಅವಳೊಂದಿಗೆ ವಾಸಿಸಲು ಪ್ರಾರಂಭಿಸಿದ್ದನು.

3. ಸೊಹಬತ್ ಖಾನ್ ತನ್ನ ಅಫ್ಘಾನ್ ಸ್ನೇಹಿತರನ್ನು ಭಾರತಕ್ಕೆ ಕರೆತರಲು ನಕಲಿ ಪಾಸ್‌ಪೋರ್ಟ್‌ಗಳನ್ನು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದನು. ಈ ರೀತಿಯಾಗಿ ಅವನು ಅನೇಕ ಅಫ್ಘಾನಿಯರನ್ನು ಭಾರತಕ್ಕೆ ಕರೆತಂದಿದ್ದಾನೆ.

4. ಸೊಹಬತ್ ಖಾನ್‌ ಗೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಲು ಸಹಾಯ ಮಾಡಿದ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

5. ಮಧ್ಯಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ 20ಕ್ಕೂ ಹೆಚ್ಚು ಅಫ್ಘಾನ್ ಯುವಕರು ಇದ್ದಾರೆ ಎಂಬ ಮಾಹಿತಿ ಕೂಡ ಪೊಲೀಸರಿಗೆ ಲಭಿಸಿದೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶ, ರೋಹಿಂಗ್ಯಾ, ಪಾಕಿಸ್ತಾನಿಗಳ ನಂತರ ಈಗ ಅಫ್ಘಾನಿಸ್ತಾನದವರೂ ಭಾರತಕ್ಕೆ ನುಸುಳುತ್ತಿರುವುದು ನಾಚಿಕೆಗೇಡಿನ ಸಂಗತಿ.
  • ನುಸುಳುಕೋರರನ್ನು ಬಂಧಿಸುವುದರ ಜೊತೆಗೆ ನಕಲಿ ದಾಖಲೆಗಳನ್ನು ಸಿದ್ಧಪಡಿಸಿ ಅವರಿಗೆ ಸಹಾಯ ಮಾಡಿದವರನ್ನು ಕೂಡ ಜೀವಾವಧಿ ಜೈಲಿನಲ್ಲಿ ಇಡುವುದು ಅವಶ್ಯಕ!