ಫಲಕದಲ್ಲಿ ‘ರಾತ್ರಿ ಪಾರ್ಟಿ ಮಾಡಲು ಹೋಗಬೇಡಿ, ಸಾಮೂಹಿಕ ಅತ್ಯಾಚಾರವಾಗಬಹುದು’ ಎಂದು ಬರೆಯಲಾಗಿತ್ತು!

ಕರ್ಣಾವತಿ (ಗುಜರಾತ್) – ಇಲ್ಲಿನ ರಸ್ತೆಗಳಲ್ಲಿ ‘ರಾತ್ರಿ ಪಾರ್ಟಿ ಮಾಡಲು ಹೋಗಬೇಡಿ, ಅತ್ಯಾಚಾರ ಅಥವಾ ಸಾಮೂಹಿಕ ಅತ್ಯಾಚಾರವಾಗಬಹುದು’, ‘ಸ್ನೇಹಿತರೊಂದಿಗೆ ಕತ್ತಲೆಯಲ್ಲಿ, ನಿರ್ಜನ ಸ್ಥಳಗಳಿಗೆ ಹೋಗಬೇಡಿ. ಸಾಮೂಹಿಕ ಅತ್ಯಾಚಾರವಾಗಬಹುದು’ ಎಂಬ ಫಲಕಗಳನ್ನು ಹಾಕಲಾಗಿತ್ತು. ಇದರ ನಂತರ, ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಈ ಫಲಕಗಳ ಬಗ್ಗೆ ರಾಜ್ಯದ ಬಿಜೆಪಿ ಸರಕಾರದ ಮೇಲೆ ಟೀಕೆ ಮಾಡಿದ ಕಾರಣ ಅವುಗಳನ್ನು ತೆಗೆದುಹಾಕಲಾಯಿತು.
ಈ ಸಂಬಂಧ ಸಂಚಾರ ಪೊಲೀಸ್ ಉಪ ಆಯುಕ್ತ ಸಫಿನ್ ಹಸನ್, ಈ ಫಲಕಗಳಿಗೂ ಕರ್ಣಾವತಿ ನಗರ ಪೊಲೀಸರಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ. ಸಂಚಾರ ಪೊಲೀಸರು ಒಂದು ಸ್ವಯಂಸೇವಾ ಸಂಸ್ಥೆಗೆ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಫಲಕಗಳನ್ನು ಹಾಕಲು ಅನುಮತಿ ನೀಡಿದ್ದಾರೆ. ಈ ಸಂಸ್ಥೆಗೆ ಕೇವಲ ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಬಟ್ಟೆಯ ಫಲಕಗಳು ಮತ್ತು ಭಿತ್ತಿಪತ್ರಗಳನ್ನು ಹಾಕಲು ಅನುಮತಿ ಇತ್ತು; ಆದರೆ ಮಹಿಳೆಯರ ಸುರಕ್ಷತೆಯ ಬಗ್ಗೆ ಇಂತಹ ಫಲಕಗಳನ್ನು ಹಾಕುವುದು ಸಂಪೂರ್ಣವಾಗಿ ತಪ್ಪು. ಪೊಲೀಸ್ ಆಯುಕ್ತರು ಇದನ್ನು ಗಮನಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!