|

ಪುಣೆ – ಆಗಸ್ಟ್ 1 ರಂದು ಬೆಳಿಗ್ಗೆ, ದೌಂಡ್ ತಾಲೂಕಿನ ಯವತ್‌ನಲ್ಲಿ ಒಬ್ಬ ಮುಸಲ್ಮಾನ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ನಂತರ, ಮಧ್ಯಾಹ್ನ 12 ಗಂಟೆಯ ಬಳಿಕ ಯವತ್‌ನ ವಾರದ ಮಾರುಕಟ್ಟೆಯನ್ನು ಬಂದ್ ಮಾಡಲಾಯಿತು. ಯವತ್‌ನಲ್ಲಿ ಕೆಲವು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಉದ್ರಿಕ್ತ ಗುಂಪೊಂದು ಮಸೀದಿಯೊಂದನ್ನು ಧ್ವಂಸಗೊಳಿಸಿತು. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದರು. ಆಕ್ಷೇಪಾರ್ಹ ಪೋಸ್ಟ್ ಹಾಕಿದ ಸೈಯದ್ ಎಂಬ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಯವತ್ ಪೊಲೀಸ್ ಇನ್ಸ್‌ಪೆಕ್ಟರ್ ನಾರಾಯಣ ದೇಶಮುಖ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್ ಮಾಡಿದ ಯುವಕ ಯವತ್ ಪ್ರದೇಶದ ಸಹಕಾರ್ ನಗರದಲ್ಲಿ ವಾಸಿಸುತ್ತಿದ್ದು, ಸ್ಥಳೀಯರು ಸಹಕಾರ್ ನಗರಕ್ಕೆ ಹೋಗಿ ಆತನ ಮನೆಯನ್ನೂ ಧ್ವಂಸಗೊಳಿಸಿದ್ದಾರೆ. ಪೊಲೀಸರ ಸಮಯೋಚಿತ ಹಸ್ತಕ್ಷೇಪದಿಂದ ಮುಂದಿನ ಅನಾಹುತ ತಪ್ಪಿದೆಯಾದರೂ, ಯವತ್ ಪ್ರದೇಶದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
💥 Yavat PuneDistrict: A provocative post by fanatic Syed sparked unrest – his house was vandalised, a mosque damaged, and several bikes set ablaze.
👮♂️ Syed has been arrested.
🛑 In Pune district, repeated attacks on Deity idols & national icons raise a serious concern; Have… pic.twitter.com/Ndr2D4efHp
— Sanatan Prabhat (@SanatanPrabhat) August 2, 2025
ಯವತ್‌ನಲ್ಲಿನ ಅಪರಾಧಿಗಳ ವಿರುದ್ಧ ಸೂಕ್ತ ಕ್ರಮ – ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್
ಒಬ್ಬ ಶಾಸಕರ (ಸಂಗ್ರಾಮ್ ಜಗತಾಪ್, ಎನ್‌ಸಿಪಿ) ಸಭೆ ನಡೆದಿದ್ದರಿಂದ ಒಬ್ಬ ವ್ಯಕ್ತಿ ಸ್ಟೇಟಸ್ (ಇತರರು ನೋಡಲು ಸಾಮಾಜಿಕ ಮಾಧ್ಯಮದಲ್ಲಿಡಲಾಗುವ ಚಿತ್ರ) ಇರಿಸಿದ್ದಾರೆ, ಇದು ಸರಿಯಲ್ಲ. ಎರಡೂ ಸಮುದಾಯದ ಜನರು ಮುಖಾಮುಖಿಯಾದರು. ಇದರಿಂದ ಉದ್ವಿಗ್ನತೆ ಉಂಟಾಗಿದೆ. ಯಾರೂ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ಯವತ್‌ನಲ್ಲಿನ ಅಪರಾಧಿಗಳ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಆಗಿ ಹೇಳಿದರು.
Maharashtra: Two groups clash over objectionable social media post in Pune’s Yavat area
Chief Minister Devendra Fadnavis says, “We have just received information about the riots in Yavat, where tension arose due to an outsider posting an objectionable status, which led people to… pic.twitter.com/pPQOmya29K
— IANS (@ians_india) August 1, 2025
ಇತ್ತೀಚೆಗೆ ಮತಾಂಧರಿಂದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ವಿರೂಪ!
ಜುಲೈ 26 ರ ರಾತ್ರಿ ಯವತ್‌ನ ನೀಲಕಂಠೇಶ್ವರ ಮಹಾದೇವ ದೇವಸ್ಥಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಮತಾಂಧನೊಬ್ಬ ಭಗ್ನಗೊಳಿಸಿ ವಿರೂಪಗೊಳಿಸಿದ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ಅಮಿತ್ ಪಾಪಾ ಸೈಯದ್ ಎಂಬ ಮತಾಂಧನನ್ನು ಜುಲೈ 30 ರಂದು ಬಂಧಿಸಲಾಗಿದೆ ಎಂದು ಪೊಲೀಸರು ಜುಲೈ 31 ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಆ ನಂತರ, ಆಗಸ್ಟ್ 1 ರಂದು ಮತ್ತೆ ಆಕ್ಷೇಪಾರ್ಹ ಪೋಸ್ಟ್ ಹಾಕಲಾಗಿದೆ.
ಸಂಪಾದಕೀಯ ನಿಲುವು
|
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
ಹಸು ಹಿಂದೂಗಳಿಗೆ ಪವಿತ್ರ: ಅದರ ಹತ್ಯೆಯಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಬಹುದು! – ಗುಜರಾತ್ ಹೈಕೋರ್ಟ್
ಶನಿಶಿಂಗಣಾಪುರದ ಶ್ರೀ ಶನಿದೇವರ ಮೂರ್ತಿಯ ಸಂರಕ್ಷಣೆಗಾಗಿ ವಜ್ರಲೇಪನ ಮಾಡಲಾಗುವುದು !
ಹಿಂದೂ ವಿವಾಹ ಕಾಯ್ದೆಯಡಿ ವಿವಾಹ ಮಾನ್ಯವಾಗಲು ಕೇವಲ ವಿವಾಹ ಪ್ರಮಾಣಪತ್ರವಿದ್ದರೆ ಸಾಲದು !
ವಾರಾಣಸಿ: ದಾಲ್ಮಂಡಿ ರಸ್ತೆ ಅಗಲೀಕರಣ ಯೋಜನೆಯಡಿ ೫ ಮಸೀದಿಗಳ ಮೇಲೆ ಕ್ರಮ
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್