ಬ್ರಿಟಿಷ್ ಜನರ ಧ್ವನಿ ಅಡಗಿಸುವ ಪ್ರಯತ್ನ ಎಂದು ಆರೋಪ

ಲಂಡನ್ (ಬ್ರಿಟನ್) – ‘ಜಂಟಿ ಮಾನವ ಹಕ್ಕುಗಳ ಸಮಿತಿ’ ಎಂಬ ಬ್ರಿಟಿಷ್ ಸಂಸದೀಯ ಸಮಿತಿಯು ದಮನಕಾರಿ ದೇಶಗಳ ಪಟ್ಟಿಯನ್ನು ಪ್ರಕಟಿಸಿದೆ. ‘ಟ್ರ್ಯಾನ್ಸ್‌ನ್ಯಾಷನಲ್ ರಿಪ್ರೆಷನ್ ಇನ್ ದಿ ಯುಕೆ’ ಎಂಬ ಶೀರ್ಷಿಕೆಯ ವರದಿಯಲ್ಲಿ ೧೨ ದೇಶಗಳ ಹೆಸರಿದ್ದು, ಇದರಲ್ಲಿ ಭಾರತವೂ ಸೇರಿದೆ. ಇದರಲ್ಲಿ ಚೀನಾ, ರಷ್ಯಾ ಮತ್ತು ಟರ್ಕಿಯ ಹೆಸರುಗಳು ಮೊದಲ ಸ್ಥಾನದಲ್ಲಿವೆ. ಭಾರತವು ಈ ವಿಷಯದ ಬಗ್ಗೆ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.
೧. ಕೆಲವು ವಿದೇಶಿ ಸರಕಾರಗಳು ಬ್ರಿಟನ್‌ನಲ್ಲಿ ವಾಸಿಸುವ ಜನರನ್ನು ಬೆದರಿಸಲು ಮತ್ತು ಅವರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಬ್ರಿಟನ್‌ನಲ್ಲಿ ವಾಸಿಸುವ ಜನರನ್ನು ಗುರಿಯಾಗಿಸುವ ಘಟನೆಗಳು ಹೆಚ್ಚುತ್ತಿವೆ. ಯುಕೆಯಲ್ಲಿ ವಿದೇಶಿ ಸರಕಾರಗಳ ಚಟುವಟಿಕೆಗಳು ಮಾನವ ಹಕ್ಕುಗಳಿಗೆ ಅಪಾಯಕಾರಿ. ಬ್ರಿಟಿಷ್ ಸರಕಾರವು ಇದರ ಮೇಲೆ ಕ್ರಮ ತೆಗೆದುಕೊಳ್ಳಬೇಕು.
೨. ವರದಿಯಲ್ಲಿ, ಭಾರತಕ್ಕೆ ಸಂಬಂಧಿಸಿದ ಪುರಾವೆಗಳಲ್ಲಿ ‘ಸಿಖ್ ಫಾರ್ ಜಸ್ಟಿಸ್’ ಎಂಬ ಖಲಿಸ್ತಾನಿ ಭಯೋತ್ಪಾದಕ ಸಂಘಟನೆಯ ಉಲ್ಲೇಖವಿದೆ ಎಂದು ಹೇಳಲಾಗಿದೆ. ಈ ಸಂಘಟನೆಯನ್ನು ಭಾರತವು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯಡಿ ‘ಕಾನೂನುಬಾಹಿರ ಸಂಘಟನೆ’ ಎಂದು ಘೋಷಿಸಿದೆ.
ಸಂಪಾದಕೀಯ ನಿಲುವುಇದಕ್ಕೆ ಕಳ್ಳನಿಗೊಂದು ಪಿಳ್ಳೆ ನೆವ ಎನ್ನುತ್ತಾರೆ! ಈ ಸಮಿತಿಯು ಪಾಕಿಸ್ತಾನವನ್ನು ‘ಭಯೋತ್ಪಾದಕ ರಾಷ್ಟ್ರ’ ಎಂದು ಘೋಷಿಸುವ ಧೈರ್ಯವೇಕೆ ಮಾಡುವುದಿಲ್ಲ? |
ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆಯ ನುಸುಳುವಿಕೆ ನಡೆದಿಲ್ಲ! – ಭಾರತೀಯ ಸೇನೆಯ ಸ್ಪಷ್ಟನೆ
ಶ್ರೀರಾಮ ಮಂದಿರದ ದಾನ ಕಳ್ಳತನದ ದೊಡ್ಡ ಹೆಸರುಗಳನ್ನು ಬಹಿರಂಗಪಡಿಸಿದರೆ, ಅವರು ನನ್ನನ್ನು ಕೊಲ್ಲುವರು! – ಪಂಡಿತ್ ಧೀರೇಂದ್ರಕೃಷ್ಣ ಶಾಸ್ತ್ರಿ
‘ಯಾರು ನೀರನ್ನು ತಡೆಯುತ್ತಾರೋ, ಅವರ ಕೈಗಳನ್ನು ಮುರಿಯುತ್ತೇವೆ !’
ಪಾಕಿಸ್ತಾನವನ್ನು ಮತ್ತೆ ‘ಎಫ್ಎಟಿಎಫ್’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ
ಪಾಕಿಸ್ತಾನದಲ್ಲಿ 125 ವರ್ಷ ಹಳೆಯ ಗುರುದ್ವಾರವನ್ನು ನೆಲಸಮಗೊಳಿಸಲು ಯತ್ನ : Pakistan Gurdwara
ಕರಾಚಿ ದಾಳಿಯ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಭಾರತ! : India rejects Pakistan’s allegation