ಶಿವಧರ್ಮ ಫೌಂಡೇಶನ್ ಸಂಸ್ಥಾಪಕ ದೀಪಕ್ ಕಾಟೆ ಅವರಿಂದ ಎಚ್ಚರಿಕೆ

ಠಾಣೆ, ಜುಲೈ 30 (ವಾರ್ತೆ) – ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜರು ಸ್ವರಾಜ್ಯ ರಕ್ಷಕರಾಗಿದ್ದರು. ಅವರ ಬಲಿದಾನ, ಅವರ ಧರ್ಮಾಭಿಮಾನ, ಅವರ ನಿಷ್ಠೆಯಿಂದಾಗಿ ಇಂದು ನಾವು ಹೆಮ್ಮೆಯಿಂದ ‘ಮರಾಠಾ’ ಎಂದು ನಿಂತಿದ್ದೇವೆ. ಮಹಾರಾಜರ ಹೆಸರನ್ನು ಏಕವಚನದಲ್ಲಿ ಉಚ್ಚರಿಸುವುದು ನಮ್ಮ ಅಸ್ತಿತ್ವಕ್ಕೆ ಧಕ್ಕೆ ತಂದಂತೆ. ಸಂಭಾಜಿ ಬ್ರಿಗೇಡ್ ಸಂಘಟನೆಯು ನಿಜವಾಗಿಯೂ ಮಹಾರಾಜರನ್ನು ಗೌರವಿಸುವುದಾದರೆ, ಅದು ತನ್ನ ಹೆಸರನ್ನು ಬದಲಾಯಿಸಿ ‘ಧರ್ಮವೀರ ಛತ್ರಪತಿ ಸಂಭಾಜಿ ಮಹಾರಾಜ್ ಬ್ರಿಗೇಡ್’ ಎಂದು ಇಡಬೇಕು, ಇಲ್ಲದಿದ್ದರೆ ಮಹಾರಾಷ್ಟ್ರದಲ್ಲಿ ಕ್ರಾಂತಿಯಾಗಲಿದೆ ಎಂದು ಶಿವಧರ್ಮ ಫೌಂಡೇಶನ್‌ನ ಸಂಸ್ಥಾಪಕ ದೀಪಕ್ ಕಾಟೆ ಅವರು ಸಂಭಾಜಿ ಬ್ರಿಗೇಡ್‌ಗೆ ಎಚ್ಚರಿಕೆ ನೀಡಿದ್ದಾರೆ. ಜುಲೈ 29 ರಂದು ಇಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಕಾಟೆ ಮಾತನಾಡುತ್ತಿದ್ದರು.
“ಮಹಾಪುರುಷರ ಹೆಸರನ್ನು ರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ; ಆದರೆ ಬ್ರಿಗೇಡ್‌ನ ಪದಾಧಿಕಾರಿಗಳು ಇದನ್ನು ರಾಜಕೀಯ ಲಾಭದ ದೃಷ್ಟಿಯಿಂದ ನೋಡುತ್ತಿದ್ದಾರೆ” ಎಂದು ಕಾಟೆ ಆರೋಪಿಸಿದರು. ಅಕ್ಕಲಕೋಟೆಯ ಕಾರ್ಯಕ್ರಮವೊಂದಕ್ಕೆ ಸಂಭಾಜಿ ಬ್ರಿಗೇಡ್‌ನ ರಾಜ್ಯಾಧ್ಯಕ್ಷ ಪ್ರವೀಣ್ ಗಾಯಕ್ವಾಡ್ ಹೋಗುತ್ತಿದ್ದಾಗ ದೀಪಕ್ ಕಾಟೆ ಮತ್ತು ಅವರ ಸಹೋದ್ಯೋಗಿಗಳು ಅವರನ್ನು ತಡೆದಿದ್ದರು. ಪ್ರವೀಣ್ ಅವರನ್ನು ಹಿಂದಕ್ಕೆ ತಳ್ಳಿ, ಅವರ ಮುಖಕ್ಕೆ ಮಸಿ ಬಳಿದರು. ಈ ಘಟನೆಯ ನಂತರ, ಕಾಟೆ ಮತ್ತೊಮ್ಮೆ ಸಂಭಾಜಿ ಬ್ರಿಗೇಡ್‌ಗೆ ಎಚ್ಚರಿಕೆ ನೀಡಿದ್ದಾರೆ.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!