ಹರಿದ್ವಾರ: ಅನುಮತಿಯಿಲ್ಲದೆ ಪ್ರಾರಂಭವಾಗಿದ್ದ ಮಸೀದಿ ನಿರ್ಮಾಣವನ್ನು ಮುಖ್ಯಮಂತ್ರಿಗಳಿಂದ ಸ್ಥಗಿತ ! :Haridwar Mosque

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ಅಕ್ರಮ ಮಸೀದಿ ನಿರ್ಮಾಣ

ಹರಿದ್ವಾರ (ಉತ್ತರಾಖಂಡ) – ಇಲ್ಲಿ ಮಸೀದಿಯ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ದೊಡ್ಡ ವಿವಾದ ಭುಗಿಲೆದ್ದಿದೆ. ಹರಿದ್ವಾರ ಜಿಲ್ಲೆಯ ಲಕ್ಸರ್ ತಾಲೂಕಿನ ಸುಲ್ತಾನಪುರ ಗ್ರಾಮದಲ್ಲಿ ದೊಡ್ಡ ಮಸೀದಿಯ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಈ ಮಸೀದಿಯ ನಿರ್ಮಾಣಕ್ಕಾಗಿ ಆಡಳಿತದಿಂದ ಅನುಮತಿ ಪಡೆಯಲಾಗಿರಲಿಲ್ಲ. ಆದ್ದರಿಂದ, ಮುಖ್ಯಮಂತ್ರಿ ಪುಷ್ಕರ ಸಿಂಗ ಧಾಮಿ ಅವರು ಈ ಮಸೀದಿಯ ಅಕ್ರಮ ನಿರ್ಮಾಣವನ್ನು ನಿಲ್ಲಿಸುವಂತೆ ಆದೇಶಿಸಿದರು.

1. ಮುಖ್ಯಮಂತ್ರಿ ಧಾಮಿ ಅವರು ಜಿಲ್ಲಾಧಿಕಾರಿ ಮಯೂರ ದೀಕ್ಷಿತ ಅವರಿಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆದೇಶಿಸಿದರು. ಈ ಹಿಂದೆ ಕೂಡ ಧಾಮಿ ಸರಕಾರವು ಹಲವು ಅಕ್ರಮ ಮದರಸಾಗಳು ಮತ್ತು ಮಜಾರಗಳ ಮೇಲೆ ಕ್ರಮ ಕೈಗೊಂಡಿದೆ. ಸ್ಥಳೀಯ ನಾಗರಿಕರು ಈ ಕೆಲಸವು ನಿಯಮಬಾಹಿರ ಎಂದು ಆರೋಪಿಸಿದ್ದರಿಂದ ವಿವಾದ ಪ್ರಾರಂಭವಾಯಿತು.

2. ಹರಿದ್ವಾರದ ಜಿಲ್ಲಾಧಿಕಾರಿ ಮಯೂರ ದೀಕ್ಷಿತ ಅವರು, ಸಂಬಂಧಪಟ್ಟ ಅಧಿಕಾರಿಗಳು ಮಸೀದಿ ನಿರ್ವಹಣಾ ಸಮಿತಿಯೊಂದಿಗೆ ಸಭೆ ನಡೆಸಿ ವಿಚಾರಣೆ ನಡೆಸಿದ್ದಾರೆ ಎಂದು ತಿಳಿಸಿದರು. ಈ ಪ್ರಕರಣದಲ್ಲಿ ಉಪಜಿಲ್ಲಾಧಿಕಾರಿಗಳು ಎಲ್ಲಾ ದಾಖಲೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಸಂಪಾದಕೀಯ ನಿಲುವು

ಇಂತಹ ನಿರ್ಮಾಣ ಕಾರ್ಯ ಕೈಕೊಳ್ಳಲು ಧೈರ್ಯ ಮಾಡುವವರಿಗೆ ಭಯ ಹುಟ್ಟಿಸುವಂತಹ ಶಿಕ್ಷೆ ಆಗುವ ಆವಶ್ಯಕತೆಯಿದೆ !