ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳಿವೆ! – ಮುಂಬಯಿ ಉಚ್ಚ ನ್ಯಾಯಾಲಯ : IR Against Pune Teacher

  • ‘ಆಪರೇಷನ್ ಸಿಂದೂರ’ ಬಗ್ಗೆ ವ್ಯಂಗ್ಯ ಮಾಡಿದ ಪ್ರಕರಣ

  • ಪುಣೆಯ ಶಿಕ್ಷಕಿಯ ವಿರುದ್ಧದ FIR ರದ್ದುಗೊಳಿಸಲು ಮುಂಬಯಿ ಉಚ್ಚ ನ್ಯಾಯಾಲಯದಿಂದ ನಿರಾಕರಣೆ

ಮುಂಬಯಿ – ಪುಣೆಯ ಫರಾಹ್ ದಿಬಾ ಎಂಬ ಶಿಕ್ಷಕಿಯ ವಿರುದ್ಧ ‘ಆಪರೇಷನ್ ಸಿಂದೂರ’ ಕುರಿತು ವ್ಯಂಗ್ಯ ಮಾಡಿದ ಆರೋಪದ ಮೇಲೆ FIR ದಾಖಲಿಸಲಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಅವರು ಮುಂಬಯಿ ಉಚ್ಚ ನ್ಯಾಯಾಲಯ ಮೆಟ್ಟಿಲೇರಿದ್ದರು; ಆದರೆ “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳಿವೆ. ದೇಶ ವಿರೋಧಿ ಮತ್ತು ದೇಶದಲ್ಲಿ ಒಡಕು ಮೂಡಿಸುವ ಅಥವಾ ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಪಾಯವನ್ನುಂಟುಮಾಡುವ ಸಂದೇಶಗಳನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ” ಎಂದು ಹೇಳಿ ನ್ಯಾಯಮೂರ್ತಿ ಅಜಯ ಗಡ್ಕರಿ ಮತ್ತು ನ್ಯಾಯಮೂರ್ತಿ ರಾಜೇಶ ಪಾಟೀಲ ಅವರ ವಿಭಾಗೀಯ ಪೀಠವು ಅವರ ಅರ್ಜಿಯನ್ನು ವಜಾಗೊಳಿಸಿದೆ ಮತ್ತು FIR ರದ್ದುಗೊಳಿಸಲು ನಿರಾಕರಿಸಿದೆ. ಇದರ ನಂತರ, ಅವರು ಕೆಲಸ ಮಾಡುತ್ತಿದ್ದ ಶಾಲೆಯಿಂದಲೂ ಅವರನ್ನು ಅಮಾನತುಗೊಳಿಸಿದೆ.

. ಪುಣೆಯ ಮೊಹಮ್ಮದ್ವಾಡಿ ಪ್ರದೇಶದ ‘ಮಾರ್ಗೋಸಾ ಹೈಟ್ಸ್’ ಕಟ್ಟಡದ ಸದಸ್ಯರು ‘ವಾಟ್ಸಾಪ್’ ಗುಂಪಿನಲ್ಲಿ ‘ಆಪರೇಷನ್ ಸಿಂದೂರ’ ಬಗ್ಗೆ ಚರ್ಚಿಸುತ್ತಿದ್ದಾಗ, ಫರಾಹ್ ನಗುವಿನ ‘ಎಮೋಜಿ’ಯನ್ನು (ಭಾವನೆ) ಕಳುಹಿಸಿದ್ದರು ಮತ್ತು ಅವರು ಈ ಅಭಿಯಾನದ ಬಗ್ಗೆ ಆಕ್ಷೇಪಾರ್ಹ ಸ್ಥಿತಿ (ಇತರರು ನೋಡಲು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಖಾತೆಯಲ್ಲಿ ಹಂಚಿಕೊಂಡ ಚಿತ್ರ ಅಥವಾ ಬರಹ) ಪೋಸ್ಟ್ ಮಾಡಿದ್ದರು.

. ಫರಾಹ್ ಅವರ ಈ ಕೃತ್ಯದಿಂದ ಸೊಸೈಟಿಯ ಜನರು ಆಕ್ರೋಶಗೊಂಡರು. ಅವರು ಅವರ ವಿರುದ್ಧ FIR ದಾಖಲಿಸುವಂತೆ ಪ್ರತಿಭಟನೆ ನಡೆಸಿದರು. ನಂತರ ಅವರ ವಿರುದ್ಧ FIR ದಾಖಲಿಸಲಾಯಿತು.

ಇಂತಹ ಸಂದೇಶಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ! – ನ್ಯಾಯಾಲಯ

ಅರ್ಜಿದಾರರು ಸುಶಿಕ್ಷಿತರಾಗಿದ್ದು, ಶಿಕ್ಷಕಿಯಾಗಿದ್ದಾರೆ. ಇಂತಹವರು ಸಾಮಾಜಿಕ ಮಾಧ್ಯಮದಲ್ಲಿ ಏನನ್ನಾದರೂ ಪ್ರಸಾರ ಮಾಡುವಾಗ ಯೋಚಿಸಬೇಕು. ಅವರು ಭಾರತೀಯ ಸೇನೆ, ಪ್ರಧಾನ ಮಂತ್ರಿ ಮತ್ತು ದೇಶದ ವಿರುದ್ಧ ಪೋಸ್ಟ್‌ಗಳನ್ನು ಮಾಡಿದ್ದಾರೆ. ಇದು ಬಹಳ ಗಂಭೀರ ವಿಷಯ. ಈ ಪ್ರಕರಣದಲ್ಲಿ ಪೊಲೀಸರು ಇನ್ನೂ ಆರೋಪಪತ್ರವನ್ನು ಸಲ್ಲಿಸಿಲ್ಲ. ಆದ್ದರಿಂದ, FIR ರದ್ದುಗೊಳಿಸುವುದು ಸರಿಯಲ್ಲ. ನ್ಯಾಯಾಲಯವು ಅವರಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಿತ್ತು; ಆದರೆ ಅವರು ತೀರ್ಪು ನೀಡುವಂತೆ ಒತ್ತಾಯಿಸಿದರು.