|

ನವದೆಹಲಿ – ಏಪ್ರಿಲ್ 22 ರಂದು ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾರತೀಯರು ಕೊಲ್ಲಲ್ಪಟ್ಟರು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಜುಲೈ 29 ರಂದು ಮಧ್ಯಾಹ್ನ ಸಂಸತ್ತಿನಲ್ಲಿ ಹೇಳಿಕೆ ನೀಡಿದರು. ‘ಆಪರೇಷನ್ ಸಿಂದೂರ್’ ಕುರಿತು ಚರ್ಚೆ ನಡೆಯುತ್ತಿದ್ದಾಗ ಅವರು ಮಾತನಾಡುತ್ತಿದ್ದರು. ಭಾಷಣದಲ್ಲಿ ಗಾಂಧಿಯವರು ಪಹಲ್ಗಾಮ್ ದಾಳಿಯಲ್ಲಿ ಸಾವನ್ನಪ್ಪಿದ 26 ಪ್ರವಾಸಿಗರ ಹೆಸರುಗಳನ್ನು ಉಲ್ಲೇಖಿಸಿದರು. ಈ ಸಮಯದಲ್ಲಿ ಅವರು ಎಲ್ಲರನ್ನೂ ‘ಭಾರತೀಯರು’ ಎಂದು ಕರೆದರು. ಆದರೆ, ಈ ವೇಳೆ ಭಾಜಪ ಸಂಸದರು ಇದನ್ನು ವಿರೋಧಿಸಿ ‘ಅವರೆಲ್ಲರೂ ಹಿಂದೂಗಳಾಗಿದ್ದರು’ ಎಂದು ಹೇಳಿದರು. ಅದಕ್ಕೆ ಗಾಂಧಿಯವರು ‘ಅವರು ಭಾರತೀಯರು’ ಎಂದು ಹೇಳಿ ಪ್ರತ್ಯುತ್ತರ ನೀಡಿದರು. ಇದರಿಂದ ಸಂಸತ್ತಿನಲ್ಲಿ ಸ್ವಲ್ಪ ಸಮಯದವರೆಗೆ ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ನಡುವೆ ‘ಹಿಂದೂ’ ಮತ್ತು ‘ಭಾರತೀಯ’ ಎಂಬ ಸಂಘರ್ಷ ಕಂಡುಬಂದಿತು.
ಪ್ರಿಯಾಂಕಾ ಗಾಂಧಿ ಮಾತು ಮುಂದುವರೆಸಿ,

1. ಪಹಲ್ಗಾಮ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಹೀಗಿದ್ದರೂ ಬೈಸಾರನ್ ನಲ್ಲಿ ಒಬ್ಬನೇ ಒಬ್ಬ ಸೈನಿಕನಿರಲಿಲ್ಲ. ಸುತ್ತಾಡಲು ಹೋಗಿದ್ದ ಪ್ರವಾಸಿಗರು ಸಂಪೂರ್ಣವಾಗಿ ಸರಕಾರದ ಸುರಕ್ಷತೆಯ ಮೇಲೆ ಅವಲಂಬಿತರಾಗಿದ್ದರು. ಆದರೆ ಸರಕಾರ ಅವರನ್ನು ಗಾಳಿಗೆ ತೂರಿತು.
2. ಪಾಕಿಸ್ತಾನಕ್ಕೆ ಶರಣಾಗುವುದನ್ನು ಹೊರತುಪಡಿಸಿ ಬೇರೆ ದಾರಿಯಿರಲಿಲ್ಲ. ಹಾಗಿದ್ದರೂ ಯುದ್ಧವನ್ನು ಏಕೆ ನಿಲ್ಲಿಸಲಾಯಿತು? ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕದನ ವಿರಾಮವನ್ನು ಏಕೆ ಘೋಷಿಸಿದರು?
3. ಈ ಸರಕಾರಕ್ಕೆ ಕೇವಲ ಶ್ರೇಯಸ್ಸು ಬೇಕು, ಆದರೆ ಶ್ರೇಯಸ್ಸಿನ ಜೊತೆಗೆ ಜವಾಬ್ದಾರಿಯನ್ನೂ ಹೊರಬೇಕಾಗುತ್ತದೆ.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!