RSS Chief Mohan Bhagwat : ಕಟ್ಟರ್ ಹಿಂದೂ ಎಂದರೆ ಎಲ್ಲರನ್ನೂ ಸ್ವೀಕರಿಸುವುದಾಗಿದೆ ! – ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ

ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ ಅವರ ಹೇಳಿಕೆ

ಪರಮಪೂಜ್ಯ ಸರ್ಸಂಗಚಾಲಕ್ ಡಾ.ಮೋಹನ್‌ಜಿ ಭಾಗವತ್

ಕೊಚ್ಚಿ (ಕೇರಳ) – ಕಟ್ಟರ್ ಹಿಂದೂ ಆಗಿರುವುದು ಎಂದರೆ ಇತರರನ್ನು ವಿರೋಧಿಸುವುದು ಎಂದರ್ಥವಲ್ಲ, ಬದಲಿಗೆ ಎಲ್ಲರನ್ನೂ ಸ್ವೀಕರಿಸುವುದು. ಹಿಂದೂ ಧರ್ಮವು ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುವ ಧರ್ಮವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ.ಪೂ. ಸರಸಂಘಚಾಲಕ ಡಾ. ಮೋಹನಜೀ ಭಾಗವತ್ ಅವರು ಹೇಳಿದರು. ಅವರು ಇಲ್ಲಿ ರಾಷ್ಟ್ರೀಯ ಶಿಕ್ಷಣ ಪರಿಷತ್ತಿನ ‘ಜ್ಞಾನ ಸಭೆ’ಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪ.ಪೂ. ಭಾಗವತ್ ಅವರು ಮಾತು ಮುಂದುವರಿಸಿ,

. ಸಾಮಾನ್ಯವಾಗಿ ಜನರು ತಮ್ಮ ಧರ್ಮದ ಬಗ್ಗೆ ದೃಢವಾಗಿರುವವರು ಇತರರನ್ನು ವಿರೋಧಿಸುತ್ತಾರೆ ಎಂದು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ನಾವು ಹಿಂದೂಗಳು; ಆದರೆ ಹಿಂದೂ ಆಗಿರುವುದರ ಸಾರವೆಂದರೆ ನಾವು ಎಲ್ಲರನ್ನೂ ಸ್ವೀಕರಿಸುತ್ತೇವೆ.

. ಶಿಕ್ಷಣದಲ್ಲಿ ಬದಲಾವಣೆಗಳ ಅವಶ್ಯಕತೆಯಿದ್ದು, ಮೆಕಾಲೆ ಹೇರಿದ ವಸಾಹತುಶಾಹಿ ಶಿಕ್ಷಣ ಇಂದಿನ ಭಾರತಕ್ಕೆ ಸೂಕ್ತವಲ್ಲ.

. ಈ ಜಗತ್ತಿನಲ್ಲಿ ಎರಡು ರೀತಿಯ ಜ್ಞಾನವಿದೆ – ವಿದ್ಯಾ (ನಿಜವಾದ ಜ್ಞಾನ) ಮತ್ತು ಅವಿದ್ಯಾ (ಅಜ್ಞಾನ). ಜೀವನದ ಭೌತಿಕ ಮತ್ತು ಆಧ್ಯಾತ್ಮಿಕ ಅಂಶಗಳಲ್ಲಿ ಎರಡೂ ಮುಖ್ಯ ಕೊಡುಗೆಯನ್ನು ಹೊಂದಿವೆ ಮತ್ತು ಭಾರತವು ಎರಡರ ಸಮತೋಲನಕ್ಕೆ ಪ್ರಾಮುಖ್ಯತೆ ನೀಡುತ್ತದೆ.

. ಭಾರತ ಆಧ್ಯಾತ್ಮಿಕ ಭೂಮಿಯಾಗಿದ್ದು, ದೇಶದ ರಾಷ್ಟ್ರೀಯತೆಯು ಪವಿತ್ರ ಮತ್ತು ಶುದ್ಧ ಭಾವನೆಗಳೊಂದಿಗೆ ಸಂಬಂಧ ಹೊಂದಿದೆ.

. ನಿಜವಾದ ವಿದ್ವಾಂಸರು ಕೇವಲ ಚಿಂತನೆ ಮಾಡುವುದಿಲ್ಲ, ಬದಲಿಗೆ ತಮ್ಮ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರುತ್ತಾರೆ.

. ನಾವು ಮತ್ತೆ ಚಿನ್ನದ ಪಕ್ಷಿಯಾಗದೆ ಸಿಂಹವಾಗಬೇಕು. ಜಗತ್ತಿಗೆ ಶಕ್ತಿ ಮಾತ್ರ ಅರ್ಥವಾಗುತ್ತದೆ ಮತ್ತು ಭಾರತವು ಒಂದು ಶಕ್ತಿಶಾಲಿ ದೇಶವಾಗಿರುವುದು ಅವಶ್ಯಕ.