ಮುಂಬಯಿ ನಗರದಲ್ಲಿ ಅತಿ ಹೆಚ್ಚು 1 ಲಕ್ಷ 20 ಸಾವಿರದ 600 ಟನ್ ಕಸ ಉತ್ಪಾದನೆ!
ಶ್ರೀ ಸಚಿನ್ ಕೌಲ್ಕರ್, ಪ್ರತಿನಿಧಿ, ಸನಾತನ ಪ್ರಭಾತ

ಮುಂಬಯಿ – ರಾಜ್ಯ ಸರಕಾರ ರಾಜ್ಯದಲ್ಲಿ ವಾಯು ಮತ್ತು ಜಲ ಮಾಲಿನ್ಯವನ್ನು ಕಡಿಮೆ ಮಾಡಲು ವಿವಿಧ ಹಂತಗಳಲ್ಲಿ ಕ್ರಮಗಳನ್ನು ಕೈಗೊಂಡಿದ್ದರೂ, 2023-24ನೇ ಸಾಲಿನಲ್ಲಿ ಒಟ್ಟು 4 ಲಕ್ಷ 27 ಸಾವಿರದ 926 ಟನ್ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗಿದೆ. ಇದರಲ್ಲಿ ಮುಂಬಯಿ ನಗರ ಮುಂಚೂಣಿಯಲ್ಲಿದ್ದು, ಇಲ್ಲಿನ ಕಸದ ಪ್ರಮಾಣ ಅತ್ಯಧಿಕ ಅಂದರೆ 1 ಲಕ್ಷ 20 ಸಾವಿರದ 600 ಟನ್‌ನಷ್ಟಿದೆ. ಇತ್ತೀಚೆಗೆ ನಡೆದ ಮುಂಗಾರು ಅಧಿವೇಶನದಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2023-24ನೇ ಸಾಲಿನ ವಾರ್ಷಿಕ ವರದಿಯನ್ನು ಸಲ್ಲಿಸಿದ್ದು, ಈ ಮಾಹಿತಿ ನೀಡಿದೆ.
📊 Maharashtra Pollution Control Report
♻️ Plastic Waste 2023–24:
▪️ Total: 4.27 lakh tonnes
🚮 Collected: 3.61 lakh tonnes
🔁 Recycled: 3.21 lakh tonnes
❌ Uncollected: 66,699 tonnes🏙️ Mumbai alone generated 1.2 lakh tonnes!
📢 Noise Pollution:
🔊 Ganeshotsav 2023 saw peak… pic.twitter.com/KLm35TfgNW— Sanatan Prabhat (@SanatanPrabhat) July 27, 2025
ವರದಿಯಲ್ಲಿ ಹೇಳಿರುವುದೇನೆಂದರೆ…

1. ರಾಜ್ಯದ ಒಟ್ಟು 418 ಸ್ಥಳೀಯ ಸಂಸ್ಥೆಗಳಿಂದ ಈ ವರ್ಷ 4 ಲಕ್ಷ 27 ಸಾವಿರದ 926 ಟನ್ ಪ್ಲಾಸ್ಟಿಕ್ ಕಸ ಉತ್ಪಾದನೆಯಾಗಿದೆ. ಅದರಲ್ಲಿ 3 ಲಕ್ಷ 61 ಸಾವಿರದ 337 ಟನ್ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಲಾಗಿದೆ, ಮತ್ತು 3 ಲಕ್ಷ 21 ಸಾವಿರದ 840 ಟನ್ ಕಸವನ್ನು ಮರುಬಳಕೆ ಮಾಡಲಾಗಿದೆ. 66 ಸಾವಿರದ 699 ಟನ್ ಕಸ ಸಂಗ್ರಹವಾಗಿಲ್ಲ. 10 ಸಾವಿರದ 614 ಟನ್ ಕಸವನ್ನು ಸಹ-ಸಂಸ್ಕರಣೆಗಾಗಿ ಕಳುಹಿಸಲಾಗಿದೆ.
2. ಮುಂಬಯಿ ಮಹಾನಗರ ಪಾಲಿಕೆಯಲ್ಲಿ 2023-24ನೇ ಸಾಲಿನಲ್ಲಿ ಉತ್ಪಾದನೆಯಾದ ಕಸದಲ್ಲಿ 80 ಸಾವಿರದ 287 ಟನ್ ಕಸವನ್ನು ಸಂಗ್ರಹಿಸಲಾಗಿದೆ. ಸಂಗ್ರಹವಾದ ಒಟ್ಟು ಕಸದಲ್ಲಿ 75 ಸಾವಿರದ 470 ಟನ್ ಕಸವನ್ನು ಮರುಬಳಕೆಗಾಗಿ ಕಳುಹಿಸಲಾಗಿದೆ.
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari
ವಂಚನೆ ಅಥವಾ ಬ್ಲ್ಯಾಕ್ ಮೇಲ್ ಮೂಲಕ ದೈಹಿಕ ಸಂಬಂಧವಾದರೆ, ಅದನ್ನು ‘ಬಲಾತ್ಕಾರ’ ಎಂದು ಪರಿಗಣಿಸಲಾಗುವುದು! – ಮದ್ರಾಸ್ ಉಚ್ಚ ನ್ಯಾಯಾಲಯ
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ