ಬಂಗಾಳದಲ್ಲಿ ಮತಾಂಧರ ಹಿಂದೂ ವಿರೋಧಿ ಹಿಂಸಾಚಾರ ಪ್ರದರ್ಶನದ ಮೂಲಕ ಬಹಿರಂಗ! Murshidabad Violence

ನವದೆಹಲಿ – ಬಂಗಾಳದ ಮುರ್ಷಿದಾಬಾದನಲ್ಲಿ ಏಪ್ರಿಲ್ 2025 ರಲ್ಲಿ ಮತಾಂಧ ಮುಸ್ಲಿಮರು ವಕ್ಫ್ ಕಾಯ್ದೆ ವಿಚಾರವಾಗಿ ನಡೆಸಿದ ಗಲಭೆಯ ಹಿಂಸಾಚಾರದ ಛಾಯಾಚಿತ್ರಗಳ ಪ್ರದರ್ಶನವನ್ನು ಇಲ್ಲಿನ ‘ಕಾನ್‌ಸ್ಟಿಟ್ಯೂಷನ್ ಕ್ಲಬ್’ನಲ್ಲಿ ಆಯೋಜಿಸಲಾಗಿತ್ತು. ‘ಆರ್ಗನೈಸರ್’ ಎಂಬ ಮಾಧ್ಯಮ ಸಂಸ್ಥೆ ಆಯೋಜಿಸಿದ ಈ ಪ್ರದರ್ಶನದ ಉದ್ದೇಶ, ಈ ಹಿಂಸೆಯ ವಾಸ್ತವವನ್ನು ಸಾರ್ವಜನಿಕರ ಮುಂದೆ ಇಡುವುದು ಮತ್ತು ಸಂತ್ರಸ್ತರಿಗೆ ನ್ಯಾಯ ದೊರಕಿಸಲು ರಾಷ್ಟ್ರೀಯ ಚರ್ಚೆಯನ್ನು ಪ್ರಾರಂಭಿಸುವುದು ಆಗಿದೆ. ಪತ್ರಕರ್ತ ನಿಶಾಂತ ಆಜಾದ್ ಅವರು ಜೀವದ ಹಂಗು ತೊರೆದು ಈ ಘಟನೆಯ ವರದಿ ಮಾಡಿದ್ದರು. ಆ ಸಮಯದಲ್ಲಿ ತೆಗೆದ ಛಾಯಾಚಿತ್ರಗಳನ್ನು ಈ ಪ್ರದರ್ಶನದಲ್ಲಿ ಸೇರಿಸಲಾಗಿದೆ. ಅವರ ಧೈರ್ಯಶಾಲಿ ಕಾರ್ಯವನ್ನು ಎಲ್ಲೆಡೆಯಿಂದ ಪ್ರಶಂಸಿಸಲಾಗಿದೆ.

ಹಿಂದೂ ದೇವತೆಗಳ ಮೂರ್ತಿಗಳ ವಿಡಂಬನೆ ಮತ್ತು ಮೂರ್ತಿಕಾರರ ಹತ್ಯೆ

ಈ ಪ್ರದರ್ಶನದಲ್ಲಿನ ಚಾಯಾಚಿತ್ರಗಳಲ್ಲಿ ಹರಗೋವಿಂದ ದಾಸ ಮತ್ತು ಚಂದನ ದಾಸ ಎಂಬ ಮೂರ್ತಿಕಾರ ತಂದೆ-ಮಗನ ವಿಧವೆ ಪತ್ನಿ ಮತ್ತು ಚಿಕ್ಕ ಮಕ್ಕಳ ನೋವಿನ ದೃಶ್ಯಗಳಿವೆ. ಅನೇಕ ಹಿಂದೂ ದೇವಸ್ಥಾನಗಳು ಮತ್ತು ದೇವತೆಗಳ ಮೂರ್ತಿಗಳ ಭಗ್ನಾವಶೇಷಗಳು, ಹಾಗೆಯೇ ಮತಾಂಧ ಮುಸ್ಲಿಮರು ಸುಟ್ಟುಹಾಕಿದ ವಾಹನಗಳ ಛಾಯಾಚಿತ್ರಗಳೂ ಇವೆ.

ಗಲಭೆಯ ಹಿಂದೆ ತೃಣಮೂಲ ಕಾಂಗ್ರೆಸ ನಾಯಕ ಇನಾಮುಲ್ ಹಕ್ ಅವರ ಕೈವಾಡ! – ಭಾಜಪ ಶಾಸಕಿ ಅಗ್ನಿಮಿತ್ರಾ ಪಾಲ್

ಆಸನ್ಸೋಲ್ (ದಕ್ಷಿಣ) ವಿಧಾನಸಭಾ ಕ್ಷೇತ್ರದ ಭಾಜಪ ಶಾಸಕಿ ಅಗ್ನಿಮಿತ್ರಾ ಪಾಲ್ ಅವರು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ಮುರ್ಷಿದಾಬಾದನಲ್ಲಿ ಒಂಬತ್ತು ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಲಾಗಿದೆ. ಇದು ಶ್ರೀ ದುರ್ಗಾಮಾತೆ ಮತ್ತು ಶ್ರೀ ಕಾಳಿಮಾತೆಯ ಆರಾಧನೆ ನಡೆಯುವ ಭೂಮಿಯಾಗಿದೆ; ಆದರೆ ಅವರದೇ ಮೂರ್ತಿಗಳನ್ನು ವಿರೂಪಗೊಳಿಸಲಾಗಿದೆ. ಇಲ್ಲಿನ ಕೆರೆಗಳಿಗೆ ವಿಷ ಬೆರೆಸಲಾಗಿದೆ. ಹರಗೋವಿಂದ ದಾಸ್ ಮತ್ತು ಚಂದನ ದಾಸ್ ಅವರ ಬರ್ಬರ ಹತ್ಯೆ ಕೇವಲ ಅವರು ಹಿಂದೂಗಳಾಗಿದ್ದರಿಂದ ಸಂಭವಿಸಿದೆ. ಇದು ಆಕಸ್ಮಿಕವಾಗಿ ನಡೆದ ಘಟನೆಯಲ್ಲ. ಈ ಹಿಂಸಾಚಾರವು ತೃಣಮೂಲ ಕಾಂಗ್ರೆಸ ನಾಯಕ ಇನಾಮುಲ್ ಹಕ್ ಅವರ ಪಿತೂರಿಯ ಭಾಗವಾಗಿತ್ತು, ಎಂದು ಹೇಳಿದರು.

ಬಂಗಾಳ ಈಗ ಬಾಂಗ್ಲಾದೇಶವಾಗುವ ಅಂಚಿನಲ್ಲಿದೆ! – ಮಾಜಿ ಸಂಸದ ಮತ್ತು ಹಿರಿಯ ಪತ್ರಕರ್ತ ಸ್ವಪ್ನ ದಾಸಗುಪ್ತಾ

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಂಸದ ಮತ್ತು ಹಿರಿಯ ಪತ್ರಕರ್ತ ಸ್ವಪ್ನ ದಾಸಗುಪ್ತಾ ಅವರು, ಬಂಗಾಳ ಈಗ ಬಾಂಗ್ಲಾದೇಶವಾಗುವ ಅಂಚಿನಲ್ಲಿದೆ ಎಂದು ಹೇಳಿದರು. ನಾವು ಈಗಲೂ ಮೌನವಾಗಿದ್ದರೆ, ಭವಿಷ್ಯದಲ್ಲಿ ಬಂಗಾಳದ ಅಸ್ತಿತ್ವವನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ‘ಆರ್ಗನೈಸರ್’ ನ ಸಂಪಾದಕ ಪ್ರಫುಲ ಕೇತಕರ್ ಅವರು ಮಾತನಾಡಿ, ಇದು ಕೇವಲ ಭಾಜಪ ಮತ್ತು ತೃಣಮೂಲ ಕಾಂಗ್ರೆಸ್ ನಡುವಿನ ಸಂಘರ್ಷದ ವಿಷಯವಲ್ಲ. ಇದು ರಾಷ್ಟ್ರೀಯ ಸುರಕ್ಷತೆ ಮತ್ತು ಪ್ರಜಾಪ್ರಭುತ್ವದ ಪ್ರಶ್ನೆಯಾಗಿದೆ. ಇದರಲ್ಲಿ ಮಹಿಳೆಯರು ಮತ್ತು ಪರಿಶಿಷ್ಟ ಜಾತಿಯವರು ಹೆಚ್ಚು ಪೀಡಿತರಾಗಿದ್ದಾರೆ, ಎಂದು ಹೇಳಿದರು.

ಸುಂದರ್ಬನದಲ್ಲಿ ಹಿಂದೂಗಳಿಂದ ಮುಸ್ಲಿಂ ‘ದೇವಿ’ ಬೋನಬಿಬಿಯ ಪೂಜೆ! – ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಶ್ರೀ. ಕಂಚನ ಗುಪ್ತಾ

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹಿರಿಯ ಸಲಹೆಗಾರ ಶ್ರೀ. ಕಂಚನ ಗುಪ್ತಾ ಅವರು ಅತ್ಯಂತ ಮಹತ್ವದ ಅಂಶವನ್ನು ಮಂಡಿಸಿದರು. ಅವರು ಮಾತನಾಡಿ ಸುಂದರಬನ ಪ್ರದೇಶದಲ್ಲಿ ಹಿಂದೂಗಳು ಮುಸ್ಲಿಂ ‘ದೇವಿ’ ಬೋನಬಿಬಿ ಅವರನ್ನು ಪೂಜಿಸಲು ಪ್ರಾರಂಭಿಸಿದ್ದಾರೆ, ಇದು ಜನಸಂಖ್ಯಾ ಬದಲಾವಣೆಯ ತೀವ್ರ ಪರಿಣಾಮವಾಗಿದೆ, ಎಂದು ಹೇಳಿದರು. ತಬ್ಲಿಘಿ ಜಮಾತ್ ಸುಂದರಬನ ಸಿಲಿಗುರಿ ಮತ್ತು ಜಾರ್ಖಂಡ್ ಪ್ರದೇಶಗಳಲ್ಲಿ ನಿರಂತರವಾಗಿ ಶಿಬಿರಗಳನ್ನು ನಡೆಸುತ್ತಿದೆ.

ಬಾಂಗ್ಲಾದೇಶದಿಂದ ಸಮುದ್ರ ಮಾರ್ಗದ ಮೂಲಕ ನುಸುಳುಕೋರರು ಬರುತ್ತಿದ್ದಾರೆ. ಮಮತಾ ಬ್ಯಾನರ್ಜಿ ಈಗ ‘ಬಂಗಾಳಿ ವರ್ಸಸ್ ಭಾಜಪ ಆಡಳಿತದ ರಾಜ್ಯ’ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸುತ್ತಿದ್ದಾರೆ. ಬಂಗಾಳಿ ಭಾಷೆಯ ಮೇಲೆ ಉರ್ದು ಪ್ರಭಾವ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಅವರ ಅಧಿಕೃತ ‘ಲೆಟರ್‌ಹೆಡ್‌’ಗಳಲ್ಲಿ ಬಂಗಾಳಿಯ ಬದಲಿಗೆ ಉರ್ದು ಮತ್ತು ಇಂಗ್ಲಿಷ್ ಹೆಚ್ಚು ಪ್ರಮುಖವಾಗಿವೆ. ಇದು ನಿಮ್ಮ (ಮಮತಾ ಬ್ಯಾನರ್ಜಿ ಅವರ) ಬಂಗಾಳಿ ಅಸ್ಮಿತೆಯೇ? ಎಂದು ಪ್ರಶ್ನಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿಶ್ವ ಹಿಂದೂ ಪರಿಷತ್ತಿನ ವಕ್ತಾರ ವಿನೋದ ಬನ್ಸಲ್ ಅವರು, ಈಗ ಬಂಗಾಳಿ ಹಿಂದೂಗಳು ಪಲಾಯನ ಮಾಡದೆ ಪರಾಕ್ರಮದ ಮಾರ್ಗವನ್ನು ಅನುಸರಿಸಬೇಕು ಎಂದು ಹೇಳಿದರು. ಅವರು ತಮ್ಮ ಅಸ್ತಿತ್ವ ಮತ್ತು ಹಕ್ಕುಗಳಿಗಾಗಿ ಸಂಘಟಿತರಾಗಬೇಕಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

ಹಿಂದೂಗಳ ಮೇಲಿನ ದಾಳಿಗಳ ಇಂತಹ ಪ್ರದರ್ಶನಗಳನ್ನು ದೇಶಾದ್ಯಂತ ಆಯೋಜಿಸಬೇಕು ಮತ್ತು ಹಿಂದೂಗಳನ್ನು ಜಾಗೃತಗೊಳಿಸಬೇಕು!