ಅಮೆರಿಕದಲ್ಲಿ ಟೇಕಾಫ್‌ ಆಗುವ ಮೊದಲೇ ವಿಮಾನಕ್ಕೆ ಬೆಂಕಿ

ಡೆನ್ವರ್ (ಅಮೆರಿಕ) – ಜುಲೈ 26 ರಂದು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೊಡ್ಡ ಅಪಘಾತವೊಂದು ತಪ್ಪಿದೆ. ‘ಲ್ಯಾಂಡಿಂಗ್ ಗೇರ್’ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ಅಮೆರಿಕದ ವಿಮಾನದ ಹಿಂಭಾಗದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟ ಹೊಗೆ ಆವರಿಸಿತು. ಇದರಿಂದಾಗಿ ವಿಮಾನದ ಹಾರಾಟವನ್ನು ರದ್ದುಗೊಳಿಸಬೇಕಾಯಿತು. ಈ ವಿಮಾನ ಮಿಯಾಮಿ ಕಡೆಗೆ ಹೋಗುತ್ತಿತ್ತು.

ವಿಮಾನದಲ್ಲಿ ಒಟ್ಟು 173 ಪ್ರಯಾಣಿಕರು ಮತ್ತು 6 ಸಿಬ್ಬಂದಿ ಇದ್ದರು. ಎಲ್ಲರನ್ನು ತುರ್ತು ‘ಸ್ಲೈಡ್‌’ಗಳ ಮೂಲಕ ಹೊರತರಲಾಯಿತು. ಈ ಘಟನೆಯಲ್ಲಿ ಆರು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಲ್ಲಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.