ಜಾರ್ಖಂಡ್ ಸರಕಾರದಿಂದ ವೈದ್ಯಕೀಯ ಯೋಜನೆಗೆ ಮದರ್ ತೆರೇಸಾ ಹೆಸರು! – Jharkhand Govt Scheme Name Change

ಅಟಲ್ ಬಿಹಾರಿ ವಾಜಪೇಯಿ ಹೆಸರು ಕೈಬಿಟ್ಟಿದ್ದರಿಂದ ಭಾಜಪದಿಂದ ವಿರೋಧ!

ರಾಂಚಿ (ಜಾರ್ಖಂಡ) – ಜಾರ್ಖಂಡ್‌ ನ ಹೇಮಂತ್ ಸೋರೆನ್ ಸರಕಾರವು ‘ಅಟಲ್ ಮೊಹಲ್ಲಾ ಕ್ಲಿನಿಕ್’ ಹೆಸರನ್ನು ಬದಲಾಯಿಸಿ ‘ಮದರ್ ತೆರೇಸಾ ಅಡ್ವಾನ್ಸ್ ಕ್ಲಿನಿಕ್’ ಎಂದು ಇಟ್ಟಿದೆ. ಭಾಜಪ ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿದ್ದು, ಇದು ದೇಶದ ಮಾಜಿ ಪ್ರಧಾನಮಂತ್ರಿ ಮತ್ತು ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಮಾಡಿದ ಅಪಮಾನ ಎಂದು ಹೇಳಿದೆ.

ಹೇಮಂತ್ ಸೋರೆನ್ ಸರಕಾರವು ಜಾರ್ಖಂಡ್‌ ನ ಆತ್ಮವನ್ನು ಅವಮಾನಿಸಿದೆ ಮತ್ತು ಇಂತಹ ನಿರ್ಧಾರಗಳನ್ನು ಜನತೆ ಎಂದಿಗೂ ಕ್ಷಮಿಸುವುದಿಲ್ಲ. ಈ ನಿರ್ಧಾರವು ಕ್ಷುಲ್ಲಕ ರಾಜಕಾರಣದ ಸಂಕೇತವಾಗಿದೆ, ಎಂದು ಹೇಳಿದೆ.

ಜಾರ್ಖಂಡ್‌ನಲ್ಲಿ 2019 ರಲ್ಲಿ ಪ್ರಾರಂಭಿಸಲಾದ ‘ಅಟಲ್ ಮೊಹಲ್ಲಾ ಕ್ಲಿನಿಕ್’ ಯೋಜನೆಯು ನಗರ ಕೊಳೆಗೇರಿಗಳಲ್ಲಿ ಉಚಿತ ಮತ್ತು ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆಯನ್ನು ಒದಗಿಸುತ್ತದೆ.

ಇದು ಮತಾಂತರದ ಇತಿಹಾಸವಿರುವ ಸಂಸ್ಥೆಗೆ ಗೌರವ! – ಭಾಜಪ

ಭಾಜಪ ವಕ್ತಾರ ಪ್ರತೂಲ ಷಾಹ

ಭಾಜಪ ವಕ್ತಾರ ಪ್ರತೂಲ ಷಾಹ ಅವರು, ಬ್ರಿಟಿಷ್ ಲೇಖಕರಾದ ಕ್ರಿಸ್ಟೋಫರ್ ಹಿಚೆನ್ಸ್ ಮತ್ತು ಅರೂಪ್ ಚಟರ್ಜಿ ತಮ್ಮ ಪುಸ್ತಕಗಳಲ್ಲಿ ಮದರ್ ತೆರೇಸಾ ಅವರ ಸಂಸ್ಥೆಯಾದ ‘ಮಿಷನರೀಸ್ ಆಫ್ ಚಾರಿಟಿ’ ಮೇಲೆ ಮತಾಂತರದ ಗಂಭೀರ ಆರೋಪಗಳನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. 2021 ರಲ್ಲಿ ಈ ಸಂಸ್ಥೆಯ ‘ಫೆರಾ’ (ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ) ಪರವಾನಗಿಯನ್ನು ನವೀಕರಿಸಲಾಗಿಲ್ಲ; ಏಕೆಂದರೆ ತನಿಖಾ ಸಂಸ್ಥೆಗಳಿಗೆ ಮತಾಂತರಕ್ಕೆ ಸಂಬಂಧಿಸಿದ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳ ಪುರಾವೆಗಳು ದೊರೆತಿದ್ದವು.

‘ವೈದ್ಯಕೀಯ ಸೇವೆಗಳ ಆಧುನೀಕರಣದ ದೃಷ್ಟಿಯಿಂದ ಹೆಸರಿನಲ್ಲಿ ಬದಲಾವಣೆ !’ – ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಸ್ಪಷ್ಟೀಕರಣ

ವೈದ್ಯಕೀಯ ಸೇವೆಗಳ ಆಧುನೀಕರಣಕ್ಕೂ ಮತ್ತು ಹೆಸರಿಗೂ ಏನು ಸಂಬಂಧ? ಇದರಿಂದ ಏನು (ದೃ) ಪ್ರಯೋಜನವಾಗಲಿದೆ? ಈ ಹೆಸರು ಬದಲಾವಣೆಯು ಕೇವಲ ಕ್ರಿಶ್ಚಿಯನ್ನರನ್ನು ಸಂತೋಷಪಡಿಸಲು ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ!

ಜುಲೈ 24, 2025 ರಂದು ರಾಜಧಾನಿ ರಾಂಚಿಯಲ್ಲಿ ನಡೆದ ಸರಕಾರದ ಸಚಿವ ಸಂಪುಟ ಸಭೆಯಲ್ಲಿ ಮೇಲಿನ ಹೆಸರು ಬದಲಾವಣೆಯ ಪ್ರಸ್ತಾಪವನ್ನು ಅನುಮೋದಿಸಲಾಯಿತು.

ಜಾರ್ಖಂಡ್‌ ನ ಆರೋಗ್ಯ ಸಚಿವ ಇರ್ಫಾನ್ ಅನ್ಸಾರಿ ಅವರು ವೈದ್ಯಕೀಯ ಸೇವೆಗಳ ಆಧುನೀಕರಣದ ದೃಷ್ಟಿಯಿಂದ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

 

ಸಂಪಾದಕೀಯ ನಿಲುವು

ಭಾರತದ ಮಾಜಿ ಪ್ರಧಾನಮಂತ್ರಿಗಳ ಹೆಸರಿನಲ್ಲಿ ಆರಂಭಿಸಲಾದ ಯೋಜನೆಯ ಹೆಸರನ್ನು ಬದಲಾಯಿಸಿ, ಅದಕ್ಕೆ ಓರ್ವ ವಿದೇಶಿ ಮತ್ತು ಮತಾಂತರದ ಆರೋಪವಿರುವ ವ್ಯಕ್ತಿಯ ಹೆಸರನ್ನು ಇಡುವುದು ಜಾರ್ಖಂಡ್‌ ನ ಹೇಮಂತ್ ಸೋರೆನ್ ಸರಕಾರದ ಹಿಂದೂ ದ್ವೇಷವೇ ಆಗಿದೆ!