ಗೂಗಲ್ ಮ್ಯಾಪ್ ತೋರಿಸಿದ ರಸ್ತೆಯಲ್ಲಿ ಹೋಗಿದ್ದ ಮಹಿಳೆ ಕಾರು ಸಹಿತ ಕಾಲುವೆಗೆ ಬಿದ್ದರು !- Google Map Wrong Direction

ನವಿ ಮುಂಬಯಿ – ಗೂಗಲ್ ಮ್ಯಾಪ್ ತೋರಿಸಿದ ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರು ತಮ್ಮ ಕಾರಿನೊಂದಿಗೆ ನೇರವಾಗಿ ಬೇಲಾಪುರದ ಕಾಲುವೆ ಬಿದ್ದಳು. ಕರಾವಳಿ ಭದ್ರತಾ ಪೊಲೀಸರು ಮಹಿಳೆಯನ್ನು ರಕ್ಷಿಸಿದ್ದಾರೆ. ಈ ಘಟನೆ ಮಧ್ಯರಾತ್ರಿ 1 ಗಂಟೆಗೆ ಸಂಭವಿಸಿದೆ. ಕಾಲುವೆಗೆ ಬಿದ್ದ ನಂತರ ಮಹಿಳೆಯನ್ನು ದೋಣಿಯ ಸಹಾಯದಿಂದ ಪೊಲೀಸರು ರಕ್ಷಿಸಿದ್ದು, ‘ಕ್ರೇನ್’ ನ ಸಹಾಯದಿಂದ ಅವಳ ವಾಹನವನ್ನು ಹೊರತೆಗೆಯಲಾಯಿತು. ದಾರಿ ಗೊತ್ತಿಲ್ಲದವರು ಗೂಗಲ್ ಮ್ಯಾಪ್ ಬಳಸುತ್ತಾರೆ. ಇದರ ಮೂಲಕ ಜನರಿಗೆ ತಲುಪಬೇಕಾದ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತದೆ.

ಸಂಪಾದಕೀಯ ನಿಲುವು

ಗೂಗಲ್ ಮ್ಯಾಪ್ ಬಳಸುವಾಗ ಎಚ್ಚರ ಮತ್ತು ಜಾಗರೂಕತೆ ಅಗತ್ಯ!