ಮಾಲ್ಡೀವ್ಸ್ ನಲ್ಲಿ ಪ್ರಧಾನಿ ಮೋದಿ: 2 ದಿನಗಳ ಭೇಟಿ

ಮಾಲ್ಡೀವ್ಸ್ ಅಧ್ಯಕ್ಷರಿಂದ ವಿಮಾನ ನಿಲ್ದಾಣದಲ್ಲಿ ಸ್ವಾಗತ

ಮಾಲೆ (ಮಾಲ್ಡೀವ್ಸ್) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜುಲೈ 25ರಂದು ಮಾಲ್ಡೀವ್ಸ್‌ ಗೆ 2 ದಿನಗಳ ಭೇಟಿಗಾಗಿ ತಲುಪಿದ್ದಾರೆ. ಅಲ್ಲಿನ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಿದರು. ಇಬ್ಬರೂ ನಾಯಕರು ಅಪ್ಪಿಕೊಂಡರು. ಇದು ಪ್ರಧಾನಿ ಮೋದಿಯವರ ಮೂರನೇ ಮಾಲ್ಡೀವ್ಸ್ ಭೇಟಿಯಾಗಿದೆ. ಮೋದಿಯವರು ಮೊಹಮ್ಮದ್ ಮುಯಿಝು ಅವರ ಆಹ್ವಾನದ ಮೇರೆಗೆ ಇಲ್ಲಿಗೆ ಬಂದಿದ್ದಾರೆ.

ಇದಕ್ಕೂ ಮೊದಲು, ಮುಯಿಝು ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ‘ಇಂಡಿಯಾ ಔಟ್’ (‘ಭಾರತವನ್ನು ಹೊರಹಾಕಿ’) ಎಂಬ ಘೋಷಣೆಯನ್ನು ಮಾಡಿದ್ದರು. ಚುನಾವಣೆ ಗೆದ್ದ ನಂತರ ಉಭಯ ದೇಶಗಳ ಸಂಬಂಧಗಳಲ್ಲಿ ಕಹಿ ಉಂಟಾಯಿತು. ಭಾರತೀಯರು ಮಾಲ್ಡೀವ್ಸ್ ಪ್ರವಾಸೋದ್ಯಮವನ್ನು ಬಹಿಷ್ಕರಿಸಿದ್ದರು; ಆದರೆ ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಸುಧಾರಿಸಿವೆ.