ಬೆಂಗಳೂರು : ಹಗಲು ಹೊತ್ತಿನಲ್ಲಿ ಮಹಿಳೆಯನ್ನು ಅಪ್ಪಿಕೊಂಡು, ತುಟಿಯನ್ನು ಕಚ್ಚುತ್ತಿದ್ದ ಮಹಮ್ಮದ್ ಮಾರುಫ್‌ನ ಬಂಧನ

ಬೆಂಗಳೂರು – ಮಹಮ್ಮದ್ ಮಾರುಫ್ ಷರೀಫ್ ಎಂಬಾತ ಹಗಲು ಹೊತ್ತಿನಲ್ಲಿ ಯುವತಿಯೊಬ್ಬಳನ್ನು ಹಿಂಬಾಲಿಸಿ, ಸಾರ್ವಜನಿಕ ಸ್ಥಳದಲ್ಲಿ ಆಕೆಯನ್ನು ಬಲವಂತವಾಗಿ ಅಪ್ಪಿಕೊಂಡು, ತುಟಿಯನ್ನು ಕಚ್ಚಿದ್ದಾನೆ. ಈ ಘಟನೆ ನಗರದ ಗೋವಿಂದಪುರ ಪ್ರದೇಶದಲ್ಲಿ ನಡೆದಿದೆ. ಮಹಮ್ಮದ್‌ನನ್ನು ಬಂಧಿಸಲಾಗಿದೆ. ಮಹಿಳೆ ಕೆಲವು ವಸ್ತುಗಳನ್ನು ಖರೀದಿಸಲು ಅಂಗಡಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಈ ಘಟನೆಯಿಂದಾಗಿ, ಬೆಂಗಳೂರಿನಲ್ಲಿ ಮಹಿಳೆಯರ ಸುರಕ್ಷತೆಯ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

ಇದಕ್ಕೂ ಮೊದಲು, ಕಳೆದ ತಿಂಗಳು ಜೂನ್ ೬ ರಂದು, ಕುಕ್ಟೌನ್‌ನ ಮಿಲ್ಟನ್ ಪಾರ್ಕ್ ಬಳಿ ಸಾರ್ವಜನಿಕ ಕಿರುಕುಳದ ೨ ಘಟನೆಗಳು ವರದಿಯಾಗಿದ್ದವು. ಒಂದು ಘಟನೆಯಲ್ಲಿ, ಕುಟುಂಬದೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು. ಇನ್ನೊಂದು ಘಟನೆಯಲ್ಲಿ, ಉದ್ಯಾನವನದಲ್ಲಿ ಮಹಿಳೆಯೊಬ್ಬರನ್ನು ಬಲವಂತವಾಗಿ ಅಪ್ಪಿಕೊಂಡು, ಅವರ ತುಟಿಗಳನ್ನು ಚುಂಬಿಸಲಾಗಿತ್ತು.

ಸಂಪಾದಕೀಯ ನಿಲುವು

ಮತಾಂಧರಿಗೆ ಕಾನೂನಿನ ಭಯವಿಲ್ಲದ ಕಾರಣವೇ ಅವರು ಬಹಿರಂಗವಾಗಿ ಅಪರಾಧ ಮಾಡಲು ಧೈರ್ಯ ಮಾಡುತ್ತಾರೆ. ಇದು ಪೊಲೀಸರಿಗೆ ನಾಚಿಕೆಗೇಡು!