ಗಂಡನ ಮನೆಯವರಿಂದ ರಚಿಸಲಾದ ಷಡ್ಯಂತ್ರ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ರಾಜ್ಯದ ಓರೈಯಾ ಜಿಲ್ಲೆಯಲ್ಲಿರುವ ಕಮಲೇಶ ಎಂಬ ವಿಧವೆಯ ಪತಿಯು 2021 ರಲ್ಲಿ ನಿಧನರಾದರು, ಅನಂತರ ಗಂಡನ ಮನೆಯವರು ಆಕೆಯನ್ನು ಮನೆಯಿಂದ ಹೊರಹಾಕಿದರು. ಆಕೆಗೆ ಇದ್ದ ಒಬ್ಬ ಮಗಳೂ ಕಾಲಾಂತರದಲ್ಲಿ ಸಾವನ್ನಪ್ಪಿದಳು. ಆಕೆಯ ಕೃಷಿ ಭೂಮಿಯನ್ನು ಕಬಳಿಸಲು, ಗಂಡನ ಮನೆಯವರು ಸರಕಾರಿ ದಾಖಲೆಗಳಲ್ಲಿ ಬದಲಾವಣೆ ಮಾಡಿ, ಮೃತ ಪತಿಗೆ ನಕಲಿ ಎರಡನೇ ವಿವಾಹವಾಗಿರುವುದನ್ನು ತೋರಿಸಿದರು. ಅಲ್ಲದೆ, ಅವರ ನಕಲಿ ಪತ್ನಿ ‘ಗುಡ್ಡಿ ದೇವಿ’ಗೆ 3 ಮಕ್ಕಳಿದ್ದಾರೆ ಎಂದು ತೋರಿಸಲಾಯಿತು; ಆದರೆ ಈ ಎಲ್ಲದರಲ್ಲೂ ಈ ನಕಲಿ ಪತ್ನಿಯು 8 ವರ್ಷದವಳಾಗುವ ವರೆಗೆ ಶಿವಪೂಜನ, ಸೋನು ಮತ್ತು ಪಪ್ಪು ಎಂಬ ಹೆಸರಿನ 3 ಮಕ್ಕಳು ಜನಿಸಿರುವುದನ್ನು ತೋರಿಸಲಾಗಿದೆ.
1. ಪಂಚಾಯತ ಕಾರ್ಯದರ್ಶಿಯ ಒಪ್ಪಂದದೊಂದಿಗೆ, ಮರಣ ಪ್ರಮಾಣಪತ್ರ ಮತ್ತು ಕುಟುಂಬದ ಅಧಿಕೃತ ದಾಖಲೆಗಳಲ್ಲಿ ಈ ನಕಲಿ ಹೆಸರುಗಳನ್ನು ನೋಂದಾಯಿಸಲಾಯಿತು; ಆದರೆ ಅದರಲ್ಲಿ ಗುಡ್ಡಿ ದೇವಿಯ ಜನ್ಮ ದಿನಾಂಕವು ಜನವರಿ 1, 1984, ದೊಡ್ಡ ಮಗನ ಜನ್ಮವು ಜೂನ್ 1, 1989, ಎರಡನೆಯವನ ಜೂನ್ 1, 1990 ಮತ್ತು ಮೂರನೆಯವನ ಮೇ 1, 1992 ಎಂದು ತೋರಿಸಲಾಗಿದೆ. ಅಂದರೆ, ದಾಖಲೆಗಳ ಪ್ರಕಾರ, ಗುಡ್ಡಿದೇವಿ ಕೇವಲ 5 ವರ್ಷದವಳಿದ್ದಾಗ ತಾಯಿಯಾದಳು ಮತ್ತು 8 ವರ್ಷದವಳಿದ್ದಾಗಲೇ ಆಕೆಗೆ 3 ಮಕ್ಕಳು ಜನಿಸಿದರು.
2. ಈ ಸಂಪೂರ್ಣ ವಂಚನೆಯ ಪ್ರಕರಣದಲ್ಲಿ ಕಮಲೇಶಳು 12 ಜನರ ವಿರುದ್ಧ ದೂರು ದಾಖಲಿಸಿದ್ದಾಳೆ. ಪೊಲೀಸರು ಈ ಘಟನೆಯ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಹಣಕ್ಕಾಗಿ ಮನುಷ್ಯನು ಯಾವ ಮಟ್ಟಕ್ಕೆ ಇಳಿಯಬಹುದು ಎಂಬುದಕ್ಕೆ ಇದೊಂದು ಉದಾಹರಣೆ ! ನೈತಿಕತೆಯ ಕೊರತೆ ಮತ್ತು ಸಾಧನಾರಹಿತ ಶಿಕ್ಷಣದಿಂದ ಸಮಾಜವು ರಸಾತಳಕ್ಕೆ ಇಳಿಯುತ್ತಿದೆ ಎಂಬುದು ಇದರಿಂದ ತೋರುತ್ತದೆ ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!