ರಾಜ್ಯ ಸರಕಾರದಿಂದ ಮುಂಬಯಿ ಹೈಕೋರ್ಟ್‌ಗೆ ಅಫಿಡವಿಟ್

ಮುಂಬಯಿ – ಪರಿಸರ ಸಮತೋಲನವನ್ನು ಕಾಪಾಡಿಕೊಂಡು, ನಿರ್ದಿಷ್ಟ ಎತ್ತರದ ಮನೆಯ ಗಣೇಶ ಮೂರ್ತಿಗಳನ್ನು ಕೃತಕ ಕೊಳಗಳಲ್ಲಿ ಮತ್ತು ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ದೊಡ್ಡ ಮೂರ್ತಿಗಳನ್ನು ಸಂಪ್ರದಾಯದಂತೆ ಸಮುದ್ರದಲ್ಲಿ ವಿಸರ್ಜಿಸಲಾಗುವುದು. ಜೊತೆಗೆ ಪರಿಸರಕ್ಕೆ ಸಂಬಂಧಿಸಿದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ರಾಜ್ಯ ಸರಕಾರವು ಜುಲೈ 23 ರಂದು ಮುಂಬಯಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ. ಸರಕಾರದ ಈ ಕ್ರಮದಿಂದ ದೊಡ್ಡ ಗಣೇಶ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜಿಸಲು ದಾರಿ ಸುಗಮವಾಗಿದೆ.
1. ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ಮೇಲಿನ ನಿಷೇಧದಿಂದ ಲಕ್ಷಾಂತರ ಮೂರ್ತಿಕಾರರ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಾಗಿತ್ತು. ಇದರಿಂದ ಈ ಉದ್ಯಮದ ಆರ್ಥಿಕತೆಗೆ ತೊಂದರೆಯಾಗಬಹುದು ಎಂದು ರಾಜ್ಯದ ಸಾಂಸ್ಕೃತಿಕ ಸಚಿವ ಆಶಿಶ ಶೇಲಾರ್ ಅವರು ರಾಜ್ಯದ ‘ರಾಜೀವ್ ಗಾಂಧಿ ವಿಜ್ಞಾನ ಮತ್ತು ತಂತ್ರಜ್ಞಾನ ಆಯೋಗ’ಕ್ಕೆ ಅಧ್ಯಯನ ಮಾಡುವಂತೆ ವಿನಂತಿಸಿದ್ದರು.
2. ಈ ಆಯೋಗವು ಡಾ. ಅನಿಲ ಕಾಕೋಡ್ಕರ್ ಅವರ ಅಧ್ಯಕ್ಷತೆಯಲ್ಲಿ ‘ಅಧ್ಯಯನ ಗುಂಪು’ ರಚಿಸಿ, ಪಿಒಪಿ ಮತ್ತು ಇದರಿಂದ ಪರಿಸರದ ಮೇಲೆ ಆಗುವ ಪರಿಣಾಮಗಳ ಕುರಿತು ಅಧ್ಯಯನ ನಡೆಸಿ ಕೆಲವು ಶಿಫಾರಸುಗಳನ್ನು ಮತ್ತು ಸಲಹೆಗಳನ್ನು ಸರಕಾರಕ್ಕೆ ನೀಡಿತ್ತು.
3. ಈ ವರದಿಯನ್ನು ಕೇಂದ್ರ ಪರಿಸರ ಇಲಾಖೆ ನ್ಯಾಯಾಲಯದಲ್ಲಿ ಮಂಡಿಸಿದ ನಂತರ, ನ್ಯಾಯಾಲಯವು ಪಿಒಪಿ ಬಳಕೆಯ ಮೇಲಿನ ನಿಷೇಧವನ್ನು ರದ್ದುಗೊಳಿಸಿತ್ತು. ಅಲ್ಲದೆ, ದೊಡ್ಡ ಗಣೇಶ ಮೂರ್ತಿಗಳನ್ನು ಎಲ್ಲಿ ವಿಸರ್ಜಿಸಬೇಕು ಎಂಬುದರ ಕುರಿತು ರಾಜ್ಯ ಸರಕಾರಕ್ಕೆ ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಸರಕಾರವು ಡಾ. ಕಾಕೋಡ್ಕರ್ ಅವರ ಸಮಿತಿಯ ಆಧಾರದ ಮೇಲೆ ದೊಡ್ಡ ಮೂರ್ತಿಗಳ ವಿಸರ್ಜನೆಗಾಗಿ ಅಧ್ಯಯನ ನಡೆಸಿ ಮುಂಬಯಿ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತು.
4. ಮುಖ್ಯ ನ್ಯಾಯಮೂರ್ತಿ ಅಲೋಕ ಅರಾಧೆ ಮತ್ತು ನ್ಯಾಯಮೂರ್ತಿ ಸಂದೀಪ ಮಾರ್ನೆ ಅವರ ವಿಭಾಗೀಯ ಪೀಠದ ಮುಂದೆ ಈ ವಿಚಾರಣೆ ನಡೆಯಿತು. ರಾಜ್ಯದ ಮಹಾಧಿವಕ್ತ ಬಿರೇಂದ್ರ ಸರಾಫ ಅವರು ರಾಜ್ಯ ಸರಕಾರದ ನೀತಿಯನ್ನು ಮಂಡಿಸಿದರು.
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!