ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು

ಅಡಿಲೇಡ್ (ಆಸ್ಟ್ರೇಲಿಯಾ) – ಇಲ್ಲಿನ ಕಿಂಟೋರ್ ಅವೆನ್ಯೂ ಪ್ರದೇಶದಲ್ಲಿ ಚರಣಜೀತ ಸಿಂಗ್ ಎಂಬ ಭಾರತೀಯ ಯುವಕನ ಮೇಲೆ ಮಾರಣಾಂತಿಕ ದಾಳಿ ನಡೆದಿದೆ. ಈ ದಾಳಿಯಲ್ಲಿ ಚರಣಜೀತ ರಸ್ತೆಯಲ್ಲೇ ಮೂರ್ಛೆ ಬಿದ್ದನು. ದಾಳಿಕೋರರು “ಇಲ್ಲಿಂದ ಹೊರಡಿ, ಇಂಡಿಯನ್” ಎಂದು ಜನಾಂಗೀಯ ನಿಂದನೆಗಳನ್ನು ಮಾಡುತ್ತಾ ಹಲ್ಲೆ ನಡೆಸಿದ್ದಾರೆ. ಈ ದಾಳಿಯನ್ನು ಜನಾಂಗೀಯ ದ್ವೇಷದಿಂದ ನಡೆಸಲಾಗಿದೆ.
ಏನು ಸಂಭವಿಸಿದೆ?
23 ವರ್ಷದ ಚರಣಜೀತ ಸಿಂಗ್ ತನ್ನ ಕಾರಿನಲ್ಲಿದ್ದಾಗ, ಕೆಲವು ಜನರು ಅವನೊಂದಿಗೆ ವಾಗ್ವಾದ ನಡೆಸಿದ್ದಾರೆ. ನಂತರ ಈ ಜನರು ಇದ್ದಕ್ಕಿದ್ದಂತೆ ಜನಾಂಗೀಯ ಪದಗಳನ್ನು ಬಳಸಿ, ನಿಂದಿಸುತ್ತಾ ಹಲ್ಲೆ ಮಾಡಲು ಪ್ರಾರಂಭಿಸಿದ್ದಾರೆ. ಈ ದಾಳಿಯಲ್ಲಿ ಚರಣಜೀತ ತಲೆಗೆ ಆಳವಾದ ಗಾಯವಾಗಿದ್ದು, ಮುಖದ ಮೂಳೆ ಮುರಿದಿದೆ. ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬ ಯುವಕನನ್ನು ಬಂಧಿಸಿದ್ದಾರೆ. ಈ ಘಟನೆಯ ನಂತರ ಇಲ್ಲಿನ ಭಾರತೀಯ ಸಮುದಾಯಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಮಾಧ್ಯಮಗಳ ಮೂಲಕ ಒತ್ತಾಯಿಸಲಾಗಿದೆ.
ಈ ಘಟನೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ! – ದಕ್ಷಿಣ ಆಸ್ಟ್ರೇಲಿಯಾದ ಮುಖ್ಯಮಂತ್ರಿ ಪೀಟರ್ ಮಲಿನಾಉಸಕಸ

ದಕ್ಷಿಣ ಆಸ್ಟ್ರೇಲಿಯಾದ ಮುಖ್ಯಮಂತ್ರಿ ಪೀಟರ್ ಮಲಿನಾಉಸಕಸ ಅವರು ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ಈ ಘಟನೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ ಮತ್ತು ನಮ್ಮ ಸಮಾಜದ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ಭಾರತಕ್ಕೆ ಮರಳಬೇಕು ಅನಿಸುತ್ತಿದೆ! – ಚರಣಜೀತ ಸಿಂಗ್

ಈ ಘಟನೆಯ ಕುರಿತು ಪ್ರತಿಕ್ರಿಯಿಸಿದ ಚರಣಜೀತ ಸಿಂಗ್, “ಈ ಘಟನೆ ನನ್ನನ್ನು ಆಳವಾಗಿ ಬೆಚ್ಚಿ ಬೀಳಿಸಿದೆ. ಇಂತಹ ಘಟನೆಗಳು ನಡೆದಾಗ, ನನಗೆ ಮತ್ತೆ ಭಾರತಕ್ಕೆ ಮರಳಬೇಕು ಎಂದು ಅನಿಸುತ್ತದೆ. ದೇಹದ ಕೆಲವು ಭಾಗಗಳನ್ನು ಬದಲಾಯಿಸಬಹುದು; ಆದರೆ ಚರ್ಮದ ಬಣ್ಣವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತದ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ಟೀಕಿಸುವ ವಿದೇಶಿಯರು ತಮ್ಮ ದೇಶದಲ್ಲಿನ ಜನಾಂಗೀಯ ದ್ವೇಷದ ಬಗ್ಗೆ ಎಂದಿಗೂ ಮಾತನಾಡುವುದಿಲ್ಲ ಎಂಬುದನ್ನು ಗಮನಿಸಬೇಕು! |
ಹುಡುಗಿಯ ಮೃತದೇಹವು ಕೆರೆಯಲ್ಲಿ ತೇಲುತ್ತಿದ್ದ ಸ್ಥಿತಿಯಲ್ಲಿ ಪತ್ತೆ!
ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !
ಯುಕ್ರೇನ್-ರಷ್ಯಾ ಯುದ್ಧದಲ್ಲಿ ಭಾರತೀಯ ಸೈನಿಕರನ್ನು ಶಾಂತಿ ಕಾರ್ಯಾಚರಣೆಗಾಗಿ ಕಳುಹಿಸುವ ಉಪರಾಷ್ಟ್ರಪತಿ ಜೆ.ಡಿ. ವ್ಯಾನ್ಸ್ ಅವರ ಪ್ರಸ್ತಾವನೆ : Indian Peace Keeping for Ukraine
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ವಿಚಾರದಲ್ಲಿ ಪಾಕಿಸ್ತಾನದಿಂದ ಕಾಶ್ಮೀರ ಗಡಿಯಲ್ಲಿ 35 ಡ್ರೋನ್ ವಿರೋಧಿ ಘಟಕಗಳ ನಿಯೋಜನೆ! : Indus Water Treaty Crisis
‘ಮಾನವಾಧಿಕಾರ ಉಲ್ಲಂಘನೆಯಾದರೆ ಭಾರತದ ಮೇಲೆ ಟೀಕಿಸಲು ಹಿಂಜರಿಯುವುದಿಲ್ಲ!'(ವಂತೆ) : US Lawmakers
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ