ಮಸೀದಿಗಳಲ್ಲಿನ ಧ್ವನಿವರ್ಧಕಗಳನ್ನು ತೆಗೆದುಹಾಕಿ; ಇಲ್ಲದಿದ್ದರೆ ಕ್ರಮ ಎದುರಿಸಿ! – ಮಹಾರಾಷ್ಟ್ರ ಪೊಲೀಸ್ ಮಹಾನಿರ್ದೇಶಕರ ಎಚ್ಚರಿಕೆ

ಮುಂಬಯಿ – ಮಸೀದಿಗಳಲ್ಲಿನ ಧ್ವನಿವರ್ಧಕಗಳು ಮತ್ತು ಅವುಗಳ ಧ್ವನಿಯ ಮಿತಿಗೆ ಸಂಬಂಧಿಸಿದಂತೆ ಉಚ್ಚ ನ್ಯಾಯಾಲಯದ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದು ಕಂಡುಬಂದರೆ, ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಿ. ಮೊದಲು ಎಚ್ಚರಿಕೆ ನೀಡಿ ಮತ್ತು ಮತ್ತೆ ಉಲ್ಲಂಘಿಸಿದರೆ, ಪ್ರಕರಣ ದಾಖಲಿಸಿ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಎಲ್ಲ ಪೊಲೀಸ್ ಠಾಣೆಗಳಿಗೆ ಆದೇಶಿಸಿದ್ದಾರೆ. ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಕಲಂ 136 ರ ಅಡಿಯಲ್ಲಿ ಅಂತಹ ಪ್ರಕರಣವನ್ನು ದಾಖಲಿಸಿದ ನಂತರ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಬೇಕು ಮತ್ತು ತನಿಖೆ ನಡೆಸಿ ನ್ಯಾಯಾಲಯದಲ್ಲಿ ಆರೋಪಪತ್ರವನ್ನು ಸಲ್ಲಿಸಬೇಕು ಎಂದು ಈ ಆದೇಶದಲ್ಲಿ ತಿಳಿಸಲಾಗಿದೆ.

ಸಂಪಾದಕೀಯ ನಿಲುವು

  • ನ್ಯಾಯಾಲಯ ಈಗಾಗಲೇ ಆದೇಶ ನೀಡಿದೆ, ಹಾಗಾದರೆ ಇನ್ನೂ ಪೊಲೀಸ್ ಮಹಾನಿರ್ದೇಶಕರು ಕೇವಲ ಎಚ್ಚರಿಕೆ ಮಾತ್ರ ಏಕೆ ನೀಡುತ್ತಿದ್ದಾರೆ? ಮಸೀದಿಗಳ ಬದಲಿಗೆ ದೇವಾಲಯಗಳ ಮೇಲೆ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯದ ಆದೇಶ ಇದ್ದಿದ್ದರೆ, ಅದೇ ರಾತ್ರಿ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂದು ನಿರಂತರವಾಗಿ ಮಲತಾಯಿ ವರ್ತನೆ ಅನುಭವಿಸುತ್ತಿರುವ ಹಿಂದೂಗಳಿಗೆ ಅನಿಸುತ್ತದೆ!
  • ಇನ್ನೂ ಎಚ್ಚರಿಕೆ ನೀಡಲಾಗುತ್ತಿದೆ ಎಂದರೆ, ರಾಜ್ಯದಲ್ಲಿ ಕಾನೂನಿಗಿಂತ ಭಯದ ಆಳ್ವಿಕೆ ಇದೆ ಎಂದು ಯಾರಾದರೂ ಹೇಳಿದರೆ ತಪ್ಪೇನು?