2040ರವರೆಗೆ ಕೇರಳ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ!

ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ ಸಂಸ್ಥೆಯ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಅವರ ಹೇಳಿಕೆ

ತಿರುವನಂತಪುರಂ (ಕೇರಳ) – ‘ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ’ (ಎಸ್‌.ಎನ್‌.ಡಿ.ಪಿ) ಎಂಬ ಸಮಾಜ ಸೇವಾ ಸಂಸ್ಥೆ ಮತ್ತು ಈಝಾವಾ ಸಮುದಾಯದ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಅವರು 2040ರವರೆಗೆ ಕೇರಳ ಮುಸ್ಲಿಂ ಬಹುಸಂಖ್ಯಾತ ರಾಜ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ. ಅವರ ಈ ಹೇಳಿಕೆಯು ಕೇರಳದ ರಾಜಕೀಯದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಆಶ್ಚರ್ಯಕರ ಸಂಗತಿಯೆಂದರೆ, ಈ ಚರ್ಚೆಯಲ್ಲಿ ಭಾಜಪ ಎಲ್ಲಿಯೂ ಭಾಗಿಯಾಗಿಲ್ಲ.

1. ನಟೇಶನ್ ಅವರು ಮಾತನಾಡಿ, ಮುಸ್ಲಿಂ ಸಮುದಾಯವು ರಾಜ್ಯದಲ್ಲಿ ಅಜೇಯ ಶಕ್ತಿಯಾಗಿ ಮಾರ್ಪಟ್ಟಿದೆ ಎಂದು ಹೇಳಿದರು. ಕೆಲವು ಮುಸ್ಲಿಂ ಧಾರ್ಮಿಕ ಮುಖಂಡರು, ವಿಶೇಷವಾಗಿ ಕಂತಾಪುರಂ ಮತ್ತು ಎ.ಪಿ. ಅಬೂಬಕ್ಕರ್ ಮುಸಲಿಯಾರ್ ಇವರು ಸರಕಾರದ ಮೇಲೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಂಡಿದ್ದಾರೆ. ಯಾವುದೇ ನಿರ್ಧಾರ ಅಥವಾ ಸುಧಾರಣೆಯನ್ನು ಜಾರಿಗೊಳಿಸುವ ಮೊದಲು ಮಲಪ್ಪುರಂನ (ಮುಸ್ಲಿಂ ಬಹುಸಂಖ್ಯಾತ ಜಿಲ್ಲೆ) ಅನುಮತಿ ಪಡೆಯಬೇಕಾದ ಪರಿಸ್ಥಿತಿ ಇದೆ. ‘ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್’ ಹಿಂದೆ ಉತ್ತರ ಕೇರಳಕ್ಕೆ ಮಾತ್ರ ಸೀಮಿತವಾಗಿತ್ತು; ಆದರೆ ಈಗ ಅದು ಮಧ್ಯ ಕೇರಳದ ವಿಧಾನಸಭಾ ಸ್ಥಾನಗಳ ಮೇಲೆ ಕಣ್ಣಿಟ್ಟಿದೆ. ಅದು ಈಗ ಚುನಾವಣೆಗಳನ್ನು ಗೆದ್ದು ಮುಖ್ಯಮಂತ್ರಿ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.

2. ನಟೇಶನ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸೂಚನೆಯ ಮೇರೆಗೆ ಧ್ರುವೀಕರಣದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

2011ರ ಜನಗಣತಿಯ ಪ್ರಕಾರ ಕೇರಳದ ಜನಸಂಖ್ಯೆಯ ಚಿತ್ರಣ

ಒಟ್ಟು ಜನಸಂಖ್ಯೆ: 3 ಕೋಟಿ 34 ಲಕ್ಷ

ಹಿಂದೂಗಳು: 54.73%

ಮುಸ್ಲಿಮರು: 26.56%

ಕ್ರೈಸ್ತರು: 18.38%

 

ಸಂಪಾದಕೀಯ ನಿಲುವು

ಕೇರಳ ಮಾತ್ರವಲ್ಲ, ಬಂಗಾಳ ಮತ್ತು ಜಾರ್ಖಂಡ್ ರಾಜ್ಯಗಳೂ ಮುಸ್ಲಿಂ ಬಹುಸಂಖ್ಯಾತವಾದರೆ ಆಶ್ಚರ್ಯವಪಡಬಾರದು!