|

ಸಾಗರ (ಮಧ್ಯಪ್ರದೇಶ) – ಸಂತ ಸಮರ್ಥ ದಾದಾ ಗುರು ಮಹಾರಾಜ್ ಇವರು ಕಳೆದ 4 ವರ್ಷ 9 ತಿಂಗಳಿಂದ ನಿರಾಹಾರರಾಗಿದ್ದಾರೆ. ಅವರು ಒಂದು ಅಗಳನ್ನೂ ತಿಂದಿಲ್ಲ. ಅವರು ಪ್ರತಿದಿನ ಕೇವಲ 1 ಲೀಟರ್ ನರ್ಮದಾ ಜಲವನ್ನು ಸೇವಿಸುತ್ತಾರೆ. ಇಷ್ಟೇ ಅಲ್ಲದೆ, ಕಳೆದ 4 ವರ್ಷಗಳಲ್ಲಿ ಅವರು ಬರೋಬ್ಬರಿ 4 ಲಕ್ಷ ಕಿಲೋಮೀಟರ್ ಪಾದಯಾತ್ರೆಯನ್ನೂ ಮಾಡಿದ್ದಾರೆ. ಅವರು ಗಂಟೆಗಟ್ಟಲೆ ನೀರು ಸಹ ಕುಡಿಯದೆ ಪ್ರವಚನ ಮಾಡುತ್ತಾರೆ. ಅಷ್ಟೇ ಅಲ್ಲ, ಅವರ ಮಾತಿನಲ್ಲಿ ವಿಲಕ್ಷಣ ಶಕ್ತಿಯಿದೆ.
1. ಸಮರ್ಥ ದಾದಾ ಗುರು ಮಹಾರಾಜ್ ನರ್ಮದಾ ತೀರದಲ್ಲಿ ಧ್ಯಾನ ಮತ್ತು ಸಾಧನೆ ಮಾಡುತ್ತಾರೆ. ಅವರು 2 ಬಾರಿ ನರ್ಮದಾ ಪರಕ್ರಮವನ್ನೂ ಪೂರ್ಣಗೊಳಿಸಿದ್ದಾರೆ.
2. ಅವರ ತಪಸ್ಸು ಆಧುನಿಕ ವಿಜ್ಞಾನಕ್ಕೆ ಒಂದು ದೊಡ್ಡ ರಹಸ್ಯ ಮತ್ತು ಸವಾಲಾಗಿದೆ ಎಂದು ಹೇಳಬೇಕು. ಅದಕ್ಕಾಗಿಯೇ ಮಧ್ಯಪ್ರದೇಶದ ಭಾಜಪ ಮುಖ್ಯಮಂತ್ರಿ ಮೋಹನ ಯಾದವ್ ಅವರ ಸರಕಾರವು ಅವರ ಮೇಲೆ ಸಂಶೋಧನೆ ಆರಂಭಿಸಿದೆ.
ನರ್ಮದಾ ಸಂರಕ್ಷಣೆಗಾಗಿ ವ್ರತ
ಸಮರ್ಥ ದಾದಾ ಗುರು ಮಹಾರಾಜರ ಈ ಕಠಿಣ ತಪಸ್ಸಿನ ಉದ್ದೇಶ – ನರ್ಮದಾ ನದಿಯ ಸಂರಕ್ಷಣೆ ಮತ್ತು ಸಂವರ್ಧನೆ! ಅವರ ಪ್ರಕಾರ, ‘ಮಾತಾ ನರ್ಮದಾ’ ಕೇವಲ ನದಿಯಲ್ಲ, ಅವಳು ಜೀವದಾಯಿನಿ ಭಗವತಿ ಮತ್ತು ಅವಳ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಧರ್ಮ ಕರ್ತವ್ಯವಾಗಿದೆ. ಗಂಗಾ, ಯಮುನಾ, ನರ್ಮದಾ, ಗೋದಾವರಿ ಮತ್ತು ಕಾವೇರಿ ಕೇವಲ ನದಿಗಳಲ್ಲ, ಅವು ನಮಗೆ ತಾಯಿಯ ಸ್ವರೂಪವಾಗಿವೆ. ಅವುಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
ಸಂಪಾದಕೀಯ ನಿಲುವುಈ ಅಲೌಕಿಕ ಸಾಮರ್ಥ್ಯವನ್ನು ಆಧ್ಯಾತ್ಮಿಕ ಸಾಧನೆಯ ಮೂಲಕ ಮಾತ್ರ ಪಡೆಯಬಹುದು. ಇಂತಹ ವಿಷಯಗಳು ವಿಜ್ಞಾನದ ವ್ಯಾಪ್ತಿಯ ಆಚೆಗಿದೆ. ಆದ್ದರಿಂದ ಈಗ ಸರಕಾರವು ಹೊಸ ಶೈಕ್ಷಣಿಕ ನೀತಿಯಲ್ಲಿ ಸಾಧನೆಗೂ ಅಸಾಧಾರಣ ಪ್ರಾಮುಖ್ಯತೆ ನೀಡಿ ಮಕ್ಕಳನ್ನು ಸರ್ವಾಂಗೀಣವಾಗಿ ರೂಪಿಸಬೇಕು! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!