ಅನೇಕ ಕಾವಡ್ ಯಾತ್ರಾರ್ಥಿಗಳಿಗೆ ಗಾಯ

ಪ್ರಯಾಗರಾಜ್ (ಉತ್ತರ ಪ್ರದೇಶ) – ಪ್ರಯಾಗರಾಜ್‌ನ ಮೌಐಮಾ ತಾಲೂಕಿನ ಸರಾಯ ಖ್ವಾಜಾ ಗ್ರಾಮದಲ್ಲಿ ಶುಕ್ರವಾರ, ಜುಲೈ 18 ರಂದು ಕಾವಡ್ ಯಾತ್ರೆಯ ಮೇಲೆ ಮತಾಂಧ ಮುಸ್ಲಿಮರು ಕತ್ತಿಗಳು ಮತ್ತು ದೊಣ್ಣೆಗಳೊಂದಿಗೆ ದಾಳಿ ಮಾಡಿದ್ದಾರೆ. ಇಲ್ಲಿ ನಮಾಜ್ ನಡೆಯುತ್ತಿದ್ದಾಗ ಕಾವಡ್ ಯಾತ್ರೆಯಲ್ಲಿ ಡಿಜೆ (ದೊಡ್ಡ ಸಂಗೀತ ವ್ಯವಸ್ಥೆ) ನುಡಿಸುವುದರಿಂದ ವಿವಾದ ಉಂಟಾಯಿತು ಮತ್ತು ಅದರಿಂದ ಈ ದಾಳಿ ಸಂಭವಿಸಿತು. ಪೊಲೀಸರು 15 ಜನ ಗುರುತಿಸಿದವರ ವಿರುದ್ಧ ಮತ್ತು 65 ಜನ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಬೇಲಾಲ್ ಅಲಿಯಾಸ್ ಬಬ್ಬು, ತುಫೈಲ್ ಅಹ್ಮದ್, ಮೊಹಮ್ಮದ್ ತಸ್ಲೀಮ್, ಮೊಹಮ್ಮದ್ ಆರಿಫ್, ಶಾಹಬ್ ಆಲಂ ಮತ್ತು ಗುಡ್ಡೂ ಅಲಿಯಾಸ್ ಅಹ್ಮದ್ ಅಲಿಯನ್ನು ಬಂಧಿಸಿದ್ದಾರೆ. ಸದ್ಯ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.
ಘಟನೆಯ ಸಮಯದಲ್ಲಿ ಕೆಲವು ಕಾವಡ್ ಯಾತ್ರಾರ್ಥಿಗಳನ್ನು ಕತ್ತಿ ತೋರಿಸಿ ಬೆದರಿಸಲಾಯಿತು, ಮತ್ತು ಅನೇಕರಿಗೆ ಥಳಿಸಲಾಯಿತು. ಇದರಲ್ಲಿ ಕೆಲವು ಕಾವಡ್ ಯಾತ್ರಾರ್ಥಿಗಳು ಗಾಯಗೊಂಡರು. ಡಿಜೆಯನ್ನು ಬಲವಂತವಾಗಿ ನಿಲ್ಲಿಸಲಾಯಿತು. ಈ ಗ್ರಾಮದಲ್ಲಿ ಸುಮಾರು 60% ಮುಸ್ಲಿಮರಿದ್ದು, ಅವರು ಯಾವಾಗಲೂ ಸ್ಥಳೀಯ ಹಿಂದೂಗಳ ಮೇಲೆ ಒತ್ತಡ ಹೇರುತ್ತಾರೆ.
ಮುಸ್ಲಿಮರಿಂದ ಯೋಜಿತ ದಾಳಿ!
1. ಗ್ರಾಮಸ್ಥ ರಾಜೇಂದ್ರ ಕುಮಾರ್ ಇವರು, ನಮ್ಮ ಮನೆ ಮುಸ್ಲಿಂ ಬಡಾವಣೆಯಲ್ಲಿದೆ. ನಮ್ಮ ಅಂಗಡಿಯೂ ಅಲ್ಲಿದೆ. ಕಳೆದ ವಾರದಿಂದ ಅಯಾನ್, ಜಿಶಾನ್, ಮೊಹಮ್ಮದ್ ರಾಜು ಮತ್ತು ತೌಫಿಕ್ ನಮಗೆ ಕಾವಡ್ ಯಾತ್ರೆ ಯಾವಾಗ, ಎಷ್ಟು ಗಂಟೆಗೆ ಹೊರಡುತ್ತದೆ ಎಂದು ನಿರಂತರವಾಗಿ ಕೇಳುತ್ತಿದ್ದರು. ನಾವು ಡಿಜೆಯೊಂದಿಗೆ ಯಾತ್ರೆಗೆ ಹೊರಟ ತಕ್ಷಣ ದಾಳಿ ನಡೆಯಿತು. ಇದೆಲ್ಲವೂ ಮೊದಲೇ ಯೋಜಿತವಾಗಿತ್ತು.
2. ಸ್ಥಳೀಯ ಮಹಿಳೆ ಉಶ್ಮಿಲಾ ದೇವಿ ಇವರು, ಈ ಸಂಪೂರ್ಣ ಘಟನೆ ಮೊದಲೇ ಯೋಜಿಸಲಾಗಿತ್ತು. ಅದಕ್ಕಾಗಿಯೇ ಅವರು ಮೊದಲೇ ಕತ್ತಿಗಳು ಮತ್ತು ದೊಣ್ಣೆಗಳೊಂದಿಗೆ ಸಿದ್ಧರಾಗಿದ್ದರು. ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಯಾವಾಗಲೂ ಅಡ್ಡಿಪಡಿಸಲಾಗುತ್ತದೆ.
3. ಸುನಿತಾ ದೇವಿ ಇವರು, ವಿದ್ಯುತ್ ದುರಸ್ತಿ ನೆಪದಲ್ಲಿಯೂ ಅವರು ಜಗಳವಾಡಿದರು. ಒಮ್ಮೆ ನನ್ನ ಮಗಳನ್ನು ಬಲವಂತವಾಗಿ ಎತ್ತಿಕೊಂಡು ಹೋಗಿ ಥಳಿಸಿದರು.
4. ಸೋನು ಪಾಸಿ ಇವರು, ಮೊಹರಂಗೆ 4-5 ದಿನಗಳ ಕಾಲ ನಿರಂತರವಾಗಿ ಡಿಜೆ ನುಡಿಸಲಾಗುತ್ತದೆ, ಶಾಲೆಗಳು ಮುಚ್ಚುತ್ತವೆ; ಆದರೆ ಹಿಂದೂ ಹಬ್ಬಗಳು ಬಂದಾಗ, ಅವರು ಯಾವಾಗಲೂ ಗಲಾಟೆ ಮಾಡುತ್ತಾರೆ, ಎಂದು ಹೇಳಿದರು.
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!