UP Love Jihad : ಮಹಮ್ಮದ್ ನಝಿಲನಿಂದ ಹಿಂದೂ ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ, ಮತಾಂತರಕ್ಕೆ ಬಲವಂತ ಹಾಗೂ ಗೋಮಾಂಸ ತಿನ್ನಲು ಅನಿವಾರ್ಯಗೊಳಿಸಿದ

ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ನ ಹೊಸ ಪ್ರಕರಣ ಬೆಳಕಿಗೆ!

ಬಲಿಯಾದ ಹುಡುಗಿ ಮತ್ತು ಆರೋಪಿ ಮೊಹಮ್ಮದ್ ನಜಿಲ್

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಇಲ್ಲಿ ‘ಲವ್ ಜಿಹಾದ್’ನ ಹೊಸ ಪ್ರಕರಣವೊಂದು ಬೆಳಕಿಗೆ ಬಂದಿದೆ. ಓರ್ವ ಹಿಂದೂ ಅಪ್ರಾಪ್ತ ಬಾಲಕಿಯು ತನ್ನ ಅತ್ತೆಯ ಮನೆಯ ಮುಸ್ಲಿಂ ಕುಟುಂಬದ ವಿರುದ್ಧ ‘ಲವ್ ಜಿಹಾದ್’ ಸೇರಿದಂತೆ ಅನೇಕ ಬೆಚ್ಚಿ ಬೀಳಿಸುವ ಆರೋಪಗಳನ್ನು ಮಾಡಿದ್ದಾರೆ. ಪತಿ ಮಹಮ್ಮದ್ ನಝಿಲ್ ಮತ್ತು ಆತನ ಕುಟುಂಬದವರು ತನಗೆ ಬಲವಂತವಾಗಿ ಗೋಮಾಂಸ ತಿನ್ನಿಸಿದ್ದಾರೆ, ಹಲ್ಲೆ ಮಾಡಿದ್ದಾರೆ ಮತ್ತು ತನ್ನ ಮೇಲೆ ಬಲಾತ್ಕಾರ ಮಾಡಿದ್ದಾರೆ ಎಂದು ಸಂತ್ರಸ್ತ ಅಪ್ರಾಪ್ತ ಬಾಲಕಿ ಆರೋಪಿಸಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡುತ್ತಾ ಮನವಿ ಮಾಡಿದ್ದಾರೆ.

1. ಸಂತ್ರಸ್ತ ಬಾಲಕಿ ತನ್ನ ದೂರಿನಲ್ಲಿ, ಶಾಲೆಯಲ್ಲಿರುವಾಗ ತನಗೆ ನಝಿಲ್ ಪರಿಚಯವಾಯಿತು ಮತ್ತು ಅಂದಿನಿಂದ ಆತ ತನ್ನ ಮೇಲೆ ಬಲಾತ್ಕಾರ ಮಾಡಲು ಪ್ರಾರಂಭಿಸಿದ. ನಝಿಲ್ ಕುಟುಂಬದವರು ಹಲವು ಬಾರಿ ತನ್ನ ಮೇಲೆ ಹಲ್ಲೆ ಮಾಡಿ ಬಲಾತ್ಕಾರ ಮಾಡಿದ್ದಾರೆ ಮತ್ತು ಕೊಲೆ ಬೆದರಿಕೆ ಹಾಕಿದ್ದಾರೆ.

2. ಶಾಲೆಯಲ್ಲಿ ಓದುತ್ತಿರುವಾಗ ನಝಿಲ್ ತನ್ನ ಮೇಲೆ ಬಲಾತ್ಕಾರ ಮಾಡಿ, ನನ್ನ ನಗ್ನ ವಿಡಿಯೋ ಮಾಡಿಕೊಂಡಿದ್ದಾನೆ. ನಂತರ ಆ ವಿಡಿಯೋವನ್ನು ಪ್ರಸಾರ ಮಾಡುವುದಾಗಿ ಬೆದರಿಸಿ ಮದುವೆಯಾಗಲು ಒತ್ತಾಯಿಸಿದ್ದಾನೆ. ಮದುವೆಯಾಗುವ ಮೊದಲು ಇಸ್ಲಾಂ ಧರ್ಮವನ್ನು ಸ್ವೀಕರಿಸಲು ಒತ್ತಡ ಹೇರಲಾಯಿತು. ಇದರಿಂದಾಗಿ ಆಗಸ್ಟ್ 18, 2020 ರಂದು ತಾನು ಇಸ್ಲಾಂ ಧರ್ಮವನ್ನು ಸ್ವೀಕರಿಸಿದೆ.

3. ಮದುವೆಯ ನಂತರವೂ ನಝಿಲ್ ತನ್ನ ಮೇಲೆ ಬಲಾತ್ಕಾರ ಮಾಡುವುದನ್ನು ಮುಂದುವರಿಸಿದನು. ನಝಿಲ್ ಸಹೋದರರಾದ ಆದಿಲ್ ಮತ್ತು ಖಾದಿರ್ ಕೂಡ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸುತ್ತಿದ್ದರು.

4. ಜನವರಿ 21, 2022 ರಂದು ಸಂತ್ರಸ್ತ ಬಾಲಕಿ ಒಂದು ಮಗುವಿಗೆ ಜನ್ಮ ನೀಡಿದಳು; ಆದರೆ ಮಗುವಿನ ಪೋಷಣೆಗಾಗಿ ನಝಿಲ್ ಆರ್ಥಿಕ ಸಹಾಯ ನೀಡುತ್ತಿರಲಿಲ್ಲ.

5. ನಝಿಲ್ ಬಲವಂತವಾಗಿ ತನಗೆ ಗೋಮಾಂಸ ತಿನ್ನಿಸಿದ್ದಾನೆ. ಅಲ್ಲದೆ ಆತ ತನಗೆ ಮತ್ತು ತನ್ನ ಮಗುವಿಗೆ ಮದ್ಯ ಮತ್ತು ಕೋರೆಕ್ಸ್ ಸಿರಪ್ ಕುಡಿಯಲು ಒತ್ತಾಯಿಸುತ್ತಿದ್ದನು. ಆರೋಪಿಯ ಕುಟುಂಬದವರು ತನ್ನ ಮೇಲೆ ನಮಾಜ್ ಪಠಿಸಲು ಒತ್ತಡ ಹೇರುತ್ತಿದ್ದರು.

6. ಈ ಬಲಾತ್ಕಾರದ ಬಗ್ಗೆ ಹೊರಗೆ ಹೇಳಬಾರದೆಂದು ನಝಿಲ್ ಮತ್ತು ಆತನ ಕುಟುಂಬದವರು ನನ್ನನ್ನು ಮನೆಯಲ್ಲಿ ಕೂಡಿಹಾಕಿದ್ದರು.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ ಸರಕಾರ ಇರುವಾಗ ಇಂತಹ ಘಟನೆಗಳು ನಡೆಯಬಾರದು ಎಂಬುದು ಹಿಂದೂಗಳ ಅಪೇಕ್ಷೆಯಾಗಿದೆ!