‘ಪನೂನ್ ಕಾಶ್ಮೀರ್’ಗಾಗಿ ಜಮ್ಮುವಿನಲ್ಲಿ ಜುಲೈ 13 ರಂದು ರಾಷ್ಟ್ರೀಯ ಕಾಶ್ಮೀರಿ ಹಿಂದೂ ಅಧಿವೇಶನ!

‘ಯೂತ್ ಫಾರ್ ಪನೂನ್ ಕಾಶ್ಮೀರ್’ನಿಂದ ‘ಹಿಂದೂ ರಾಷ್ಟ್ರ ಕಿ ಹುಂಕಾರ, ಪನೂನ್ ಕಾಶ್ಮೀರ್ ಹೋ ಸಾಕಾರ’ ಘೋಷಣೆಯೊಂದಿಗೆ ಆಯೋಜನೆ!

(ಪನೂನ್ ಕಾಶ್ಮೀರ್ ಎಂದರೆ ನಮ್ಮದು, ಹಿಂದೂಗಳ ಕಾಶ್ಮೀರ್)

ಜಮ್ಮು (ಜಮ್ಮು-ಕಾಶ್ಮೀರ) – ಜುಲೈ 13 ರಂದು ಇಲ್ಲಿ ‘ರಾಷ್ಟ್ರೀಯ ಕಾಶ್ಮೀರಿ ಹಿಂದೂ ಅಧಿವೇಶನ’ ನಡೆಯಲಿದೆ. ‘ಯೂತ್ ಫಾರ್ ಪನೂನ್ ಕಾಶ್ಮೀರ್’ ಸಂಘಟನೆಯು ಈ ಅಧಿವೇಶನವನ್ನು ಆಯೋಜಿಸಿದೆ ಮತ್ತು ಹಿಂದೂ ಜನಜಾಗೃತಿ ಸಮಿತಿಯೂ ಇದರಲ್ಲಿ ಭಾಗವಹಿಸಲಿದೆ. ಭಾರತದಾದ್ಯಂತದ ಹಿಂದುತ್ವನಿಷ್ಠ ನಾಯಕರು, ಸಂತರು, ಚಿಂತಕರು, ಕಾರ್ಯಕರ್ತರು ಇಲ್ಲಿ ಒಟ್ಟುಗೂಡಲಿದ್ದಾರೆ. ಈ ಅಧಿವೇಶನವು ಕೇವಲ ಭಾಷಣಗಳಿಗಾಗಿ ಅಲ್ಲ, ಬದಲಿಗೆ ಏಕತೆಗಾಗಿ ನಡೆಯುತ್ತಿದೆ. ಕಾಶ್ಮೀರಿ ಹಿಂದೂಗಳ ನರಮೇಧದ ಸತ್ಯವನ್ನು ಎದುರಿಸಲು ಸಿದ್ಧತೆಗಾಗಿ ಮತ್ತು ನಮ್ಮ ಮಾತೃಭೂಮಿಯಲ್ಲಿ ‘ಪನೂನ್ ಕಾಶ್ಮೀರ್’ ಅನ್ನು ಪುನಃಸ್ಥಾಪಿಸಲು ಈ ಅಧಿವೇಶನದ ಮೂಲಕ ರಾಷ್ಟ್ರವನ್ನು ಸಂಘಟಿಸಲಾಗುವುದು ಎಂದು ‘ಯೂತ್ ಫಾರ್ ಪನೂನ್ ಕಾಶ್ಮೀರ್’ನ ಶಿಖರ ಸಮಿತಿಯ ಅಧ್ಯಕ್ಷರಾದ ಶ್ರೀ. ರಾಹುಲ ಕೌಲ್ ಅವರು ‘ಸನಾತನ ಪ್ರಭಾತ’ಗೆ ಮಾಹಿತಿ ನೀಡಿದರು.

ಅಧಿವೇಶನದಲ್ಲಿ ಅನೇಕ ಪ್ರಖ್ಯಾತ ಹಿಂದೂ ಚಿಂತಕರೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು ಡಾ. ಚಾರುದತ್ತ ಪಿಂಗಳೆ ಸಹ ಭಾಷಣ ಮಾಡಲಿದ್ದಾರೆ.

ಈ ಅಧಿವೇಶನದ ಘೋಷಣಾ ವಾಕ್ಯ – “ಹಿಂದೂ ರಾಷ್ಟ್ರ ಕಿ ಹುಂಕಾರ, ಪನೂನ್ ಕಾಶ್ಮೀರ್ ಹೋ ಸಾಕಾರ!”

ಜಿಹಾದ್‌ನ ಮೊದಲ ಬಲಿಪಶುಗಳನ್ನು ಮರೆಯುವ ರಾಷ್ಟ್ರವು ನೈತಿಕ ಸ್ಪಷ್ಟತೆಯ ದಾವೆ ಮಾಡಲು ಸಾಧ್ಯವಿಲ್ಲ!

ಈ ಅಧಿವೇಶನವು ಒಂದು ಸಭ್ಯತೆಯ ಪ್ರಮುಖ ಚಿಹ್ನೆಯಾಗಿದೆ. ‘ಪನೂನ್ ಕಾಶ್ಮೀರ್’ನ ನಿರ್ಮಾಣವು ಭಾರತದ ಅಪೂರ್ಣ ‘ಹಿಂದೂ ನ್ಯಾಯ ಯೋಜನೆ’ಯ ಆಧಾರವಾಗಿದೆ. ಜಿಹಾದ್‌ನ ಮೊದಲ ಬಲಿಪಶುಗಳನ್ನು ಮರೆಯುವ ರಾಷ್ಟ್ರವು ನೈತಿಕ ಸ್ಪಷ್ಟತೆಯ ದಾವೆ ಮಾಡಲು ಸಾಧ್ಯವಿಲ್ಲ. ‘ಪನೂನ್ ಕಾಶ್ಮೀರ್ ಒಂದು ರಾಷ್ಟ್ರೀಯ ಅವಶ್ಯಕತೆ’ ಎಂದು ಆಯೋಜನಾ ಸಮಿತಿ ಹೇಳಿದೆ.