ಗೋವಾ: ಆನಂದಿಬಾಯಿ ನಾಯಕ ಪ್ರೌಢಶಾಲೆಯ 10ನೇ ತರಗತಿಯ ಉತ್ತೀರ್ಣ ವಿದ್ಯಾರ್ಥಿಗಳಿಗೆ ಗೌರವ

ಮಡಕಯಿ (ಗೋವಾ) – ಸಂಸ್ಕೃತ ಭಾಷೆಯು ಎಲ್ಲಾ ಭಾಷೆಗಳ ಜನನಿಯಾಗಿದೆ. ಸಂಸ್ಕೃತದ ಅಧ್ಯಯನದಿಂದ ವ್ಯಕ್ತಿಯ ಆಚಾರ, ವಿಚಾರ ಮತ್ತು ಉಚ್ಚಾರ ಶುದ್ಧವಾಗುತ್ತದೆ. ಆದ್ದರಿಂದ, ಶಾಲೆಗಳಲ್ಲಿ ಸಂಸ್ಕೃತ ಭಾಷೆಯನ್ನು ಕಲಿಸಬೇಕು ಎಂದು ಗೋವಾ ರಾಜ್ಯದ ವಿದ್ಯುತ್ ಸಚಿವ ಶ್ರೀ ಸುದಿನ್ ಢವಳೀಕರ್ ಕರೆ ನೀಡಿದರು. ಮಡಕಯಿಯ ಶ್ರೀಮತಿ ಆನಂದಿಬಾಯಿ ಮಹಾನಂದ ನಾಯಕ ಪ್ರೌಢಶಾಲೆಯ ಪೋಷಕ-ಶಿಕ್ಷಕರ ಸಂಘ ಆಯೋಜಿಸಿದ್ದ 10ನೇ ತರಗತಿಯ ಎಲ್ಲ ಉತ್ತೀರ್ಣ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಗೋವಾ ಶಾಲಾ ಮಂಡಳಿಯು ನಡೆಸುವ 10ನೇ ತರಗತಿಯ ಪರೀಕ್ಷೆಯಲ್ಲಿ ಸತತ 10 ವರ್ಷಗಳ ಕಾಲ 100% ಫಲಿತಾಂಶ ಪಡೆದಿದ್ದಕ್ಕಾಗಿ, ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಮತ್ತು ಎಲ್ಲ ಶಿಕ್ಷಕರಿಗೆ ಸಚಿವ ಶ್ರೀ ಢವಳೀಕರ್ ಅವರು ಸನ್ಮಾನ ಮಾಡಿದರು.
📍 Goa | Sanskrit Should Be Taught in Schools: Power Minister Dhavalikar
At a felicitation ceremony for SSC toppers at Anandibai M Naik High School, Madkai, Goa Power Minister Sudin Dhavalikar @SudinDhavalikar urged schools to teach Sanskrit, calling it the mother of all… pic.twitter.com/MiAJiXPTQO
— Sanatan Prabhat (@SanatanPrabhat) July 5, 2025
ಸಚಿವ ಶ್ರೀ. ಸುದಿನ್ ಢವಳೀಕರ್ ಅವರು,
“ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಸಮರ್ಪಣೆ, ಪ್ರಯತ್ನ, ಕಷ್ಟಪಟ್ಟು ಕೆಲಸ ಮಾಡುವಿಕೆ ಮತ್ತು ಸ್ಥಿರತೆ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು” ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ. ದಾಮೋದರ ನಾಯಕ ಮತ್ತು ಮಡಕಯಿ ಗ್ರಾಮದ ಸರಪಂಚರಾದ ಶ್ರೀ.ವಿಶಾಂತ್ ನಾಯಕ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು. ಅದೇ ರೀತಿ, ಶಾಲೆಯ ಅಧ್ಯಕ್ಷರಾದ ಶ್ರೀ. ಉಮೇಶ ನಾಯಕ, ವ್ಯವಸ್ಥಾಪಕರಾದ ಶ್ರೀ. ದಿನೇಶ ನಾಯಕ ಮತ್ತು ಪೋಷಕ-ಶಿಕ್ಷಕರ ಸಂಘದ ಅಧ್ಯಕ್ಷರಾದ ಶ್ರೀ. ನಿಲೇಶ ನಾಯಕ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ವಿದ್ಯಾರ್ಥಿಗಳು ಹಾಡಿದ ಸ್ವಾಗತ ಗೀತೆಯೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು. ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ. ಉಮಾಕಾಂತ ನಾಯಕ ಅವರು ಸ್ವಾಗತ ಭಾಷಣ ಮಾಡಿದರು. ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು, ಮತ್ತು ಪಸಾಯದಾನದೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಕೊನೆಯಲ್ಲಿ ಪೋಷಕ-ಶಿಕ್ಷಕರ ಸಂಘದ ಕಾರ್ಯದರ್ಶಿ ಶ್ರೀ. ನರೇಶ ನಾಯಕ ಅವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹಡಪ್ಸರ್ನಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತನ ಮೇಲೆ ಸಾಹಿಲ್ ಶೇಖ್ ಮತ್ತು ಆತನ ಗ್ಯಾಂಗ್ನಿಂದ ಹಿಂಸಾತ್ಮಕ ಹಲ್ಲೆ!
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ