
ಪ್ರಯಾಗರಾಜ್ (ಉತ್ತರಪ್ರದೇಶ) – ಮಥುರಾದ ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಶಾಹಿ ಈದ್ಗಾ ಮಸೀದಿಯನ್ನು ‘ವಿವಾದಿತ ಕಟ್ಟಡ’ವೆಂದು ಘೋಷಿಸುವಂತೆ ವಕೀಲ ಮಹೇಂದ್ರ ಪ್ರತಾಪ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಾಲಯವು ಮೇ 23 ರಂದು ವಿಚಾರಣೆಯನ್ನು ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು. ಈ ಅರ್ಜಿಯನ್ನು ವಜಾಗೊಳಿಸಿದ್ದರೂ, ಶ್ರೀಕೃಷ್ಣ ಜನ್ಮಭೂಮಿಗೆ ಸಂಬಂಧಿಸಿದಂತೆ ಹಿಂದೂಗಳ 18 ಅರ್ಜಿಗಳ ವಿಚಾರಣೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ.
ಈ ವರ್ಷ ಮಾರ್ಚ್ 5 ರಂದು ವಕೀಲ ಮಹೇಂದ್ರ ಪ್ರತಾಪ ಸಿಂಗ್ ಈ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ ಈ ವಿಷಯಗಳನ್ನು ಮಂಡಿಸಲಾಗಿತ್ತು:
1. ಶಾಹಿ ಈದ್ಗಾ ಮಸೀದಿ ಇರುವ ಸ್ಥಳದಲ್ಲಿ ಹಿಂದೆ ದೇವಾಲಯವಿತ್ತು. ಇದುವರೆಗೆ ಮುಸ್ಲಿಂ ಪಕ್ಷವು ಮಸೀದಿಯ ಅಸ್ತಿತ್ವಕ್ಕೆ ಯಾವುದೇ ಪುರಾವೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಸಾಧ್ಯವಾಗಿಲ್ಲ. ಮಸೀದಿ ಎಂದು ಗುರುತಿಸಲಾದ ಗೋಡೆಗಳ ಮೇಲೆ ಹಿಂದೂ ದೇವತೆಗಳ ಸಾಂಕೇತಿಕ ಚಿತ್ರಗಳಿವೆ.
2. ಭೂಮಿಯನ್ನು ಅತಿಕ್ರಮಣ ಮಾಡುವುದರಿಂದ ಆ ಭೂಮಿ ಅವರದ್ದಾಗುವುದಿಲ್ಲ. ಸರಕಾರಿ ದಾಖಲೆಗಳಲ್ಲಿ ನಮೂದಿಸಲಾದ ಮಸೀದಿಯ ಹೆಸರು ಭೂಮಿಗೆ ಸಂಬಂಧಿಸಿಲ್ಲ. ಮಹಾನಗರ ಪಾಲಿಕೆಯಲ್ಲಿ ಯಾವುದೇ ನೋಂದಣಿ ಇಲ್ಲ ಅಥವಾ ತೆರಿಗೆ ಪಾವತಿಸಲಾಗುತ್ತಿಲ್ಲ. ಶಾಹಿ ಈದ್ಗಾ ನಿರ್ವಹಣಾ ಸಮಿತಿಯ ವಿರುದ್ಧ ವಿದ್ಯುತ್ ಕಳ್ಳತನದ ಪ್ರಕರಣವೂ ದಾಖಲಾಗಿದೆ. ಹಾಗಾದರೆ ಅದನ್ನು ಮಸೀದಿ ಎಂದು ಏಕೆ ಕರೆಯಬೇಕು?
3. ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡುವ ಮೊದಲು ನ್ಯಾಯಾಲಯವು ಬಾಬರಿ ರಚನೆಯನ್ನು ‘ವಿವಾದಿತ’ ಎಂದು ಘೋಷಿಸಿತ್ತು; ಆದ್ದರಿಂದ ಈ ಮಸೀದಿಯನ್ನೂ ‘ವಿವಾದಿತ ಕಟ್ಟಡ’ವೆಂದು ಘೋಷಿಸಬೇಕು.
ಮುಸ್ಲಿಂ ಪಕ್ಷದಿಂದ ವಿರೋಧ!
ಮುಸ್ಲಿಂ ಪಕ್ಷವು ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿ, ವಕೀಲ ಸಿಂಗ್ ಅವರ ಬೇಡಿಕೆ ಸಂಪೂರ್ಣವಾಗಿ ತಪ್ಪಾಗಿದೆ ಎಂದು ಹೇಳಿತ್ತು. ಇಲ್ಲಿ 400 ವರ್ಷಗಳಿಂದ ಶಾಹಿ ಈದ್ಗಾ ಇದೆ, ಆದ್ದರಿಂದ ಅದನ್ನು ವಿವಾದಿತ ಕಟ್ಟಡವೆಂದು ಘೋಷಿಸುವ ಬೇಡಿಕೆಯನ್ನು ಕಠಿಣ ಶಿಕ್ಷೆಯೊಂದಿಗೆ ವಜಾಗೊಳಿಸಬೇಕು ಎಂದು ಕೋರಿತ್ತು.
ಯುರೋಪಿಯನ್ ದೇಶಗಳಂತೆ ಭಾರತದ ಮಕ್ಕಳಲ್ಲೂ ಸ್ಥೂಲಕಾಯದ ಅಪಾಯ ಹೆಚ್ಚುತ್ತಿದೆ!
ದೇವಸ್ಥಾನದ ಹಣವನ್ನು ಧಾರ್ಮಿಕ ಕಾರ್ಯಗಳಿಗಾಗಿಯೇ ಖರ್ಚು ಮಾಡುವ ತಮಿಳುನಾಡು ಸರಕಾರದ ನೀತಿಯನ್ನು ಟೀಕಿಸಿದ ಹಿಂದೂದ್ವೇಷಿ ಉದಯನಿಧಿ ಸ್ಟಾಲಿನ್
ಮುಂಬಯಿ ಲೋಕಲ್ ರೈಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಹತ್ಯೆ; ಆರೋಪಿ ಬಂಧನ
ಮಹಾರಾಷ್ಟ್ರ : ಅಕೋಲಾ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣಕ್ಕೆ ನೀಡಲಾದ ‘ಟಿಪ್ಪು ಸುಲ್ತಾನ್’ ಹೆಸರು ಅಕ್ರಮ!
ಮಹಾರಾಷ್ಟ್ರ : ದೇವಸ್ಥಾನ ಭೂಮಿಗೆ ಸಂಬಂಧಿಸಿದಂತೆ ಸರಕಾರಿ ದೇವಸ್ಥಾನ ಸಮಿತಿಯ ಮೊದಲ ಸಭೆ ಮುಕ್ತಾಯ!
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad