ಜಾಹೀರಾತಿನಲ್ಲಿ ‘ಡಾಬರ್’ ಚ್ಯವನಪ್ರಾಶ್ ಅನ್ನು ಕೀಳಾಗಿ ತೋರಿಸಿದ್ದಕ್ಕಾಗಿ ಕ್ರಮ

ನವದೆಹಲಿ – ಚ್ಯವನಪ್ರಾಶ್ ಒಂದು ಸಾಂಪ್ರದಾಯಿಕ ಆಯುರ್ವೇದ ಔಷಧವಾಗಿದೆ. ಇದು ಔಷಧಗಳು ಮತ್ತು ಸೌಂದರ್ಯ ವರ್ಧಕಗಳ ಕಾಯಿದೆಯ ನಿಯಮಗಳ ಪ್ರಕಾರ ಸಾಬೀತುಪಡಿಸಬೇಕು. ಇತರೆ ಕಂಪನಿಗಳ ಚ್ಯವನಪ್ರಾಶ್ ಗಳನ್ನು ಸಾಮಾನ್ಯ ಎಂದು ಕರೆಯುವುದು ತಪ್ಪು ಮತ್ತು ದಾರಿತಪ್ಪಿಸುವಂತದ್ದು ಎಂದು ದೆಹಲಿ ಉಚ್ಚನ್ಯಾಯಾಲಯವು ಯೋಗಋಷಿ ರಾಮದೇವ್ ಬಾಬಾ ಅವರ ‘ಪತಂಜಲಿ’ ಚ್ಯವನಪ್ರಾಶ್ ನ ಜಾಹೀರಾತಿಗೆ ತಡೆ ನೀಡಿದೆ. ‘ಪತಂಜಲಿ’ ಕಂಪನಿಯು ‘ಡಾಬರ್’ ಚ್ಯವನಪ್ರಾಶ್ ವಿರುದ್ಧ ಯಾವುದೇ ನಕಾರಾತ್ಮಕ ಅಥವಾ ದಾರಿತಪ್ಪಿಸುವ ಜಾಹೀರಾತುಗಳನ್ನು ಪ್ರದರ್ಶಿಸಬಾರದು ಎಂದು ನ್ಯಾಯಾಲಯ ನಿರ್ದೇಶಿಸಿದೆ. ‘ಡಾಬರ್’ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತಡೆಯಾಜ್ಞೆ ಹೇರಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 14 ರಂದು ನಡೆಯಲಿದೆ.
ಜಾಹೀರಾತಿನಲ್ಲಿ ಏನಿದೆ?
ಯೋಗಋಷಿ ರಾಮದೇವ್ ಬಾಬಾ ಅವರು ಸ್ವತಃ ಈ ಜಾಹೀರಾತಿನಲ್ಲಿ, “ಆಯುರ್ವೇದ ಮತ್ತು ವೇದಗಳ ಜ್ಞಾನವಿಲ್ಲದವರು ಸಾಂಪ್ರದಾಯಿಕ ಚ್ಯವನಪ್ರಾಶ್ ಅನ್ನು ಹೇಗೆ ತಯಾರಿಸಬಹುದು?” ಎಂದು ಹೇಳುತ್ತಿರುವುದು ಕಾಣುತ್ತದೆ.
ಡಾಬರ್ ಈ ಜಾಹೀರಾತಿನ ಬಗ್ಗೆ, “‘ಪತಂಜಲಿ’ಯ ಜಾಹೀರಾತಿನಲ್ಲಿ ಇತರ ಕಂಪನಿಗಳ ಉತ್ಪನ್ನಗಳಿಂದ ಆರೋಗ್ಯಕ್ಕೆ ಅಪಾಯ ಉಂಟಾಗಬಹುದು ಎಂದು ಹೇಳಲಾಗಿದೆ. ಇಂತಹ ವಿವಾದಾತ್ಮಕ ಜಾಹೀರಾತುಗಳಿಗಾಗಿ ‘ಪತಂಜಲಿ’ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೊಕದ್ದಮೆಗಳು ಈಗಾಗಲೇ ನಡೆಯುತ್ತಿವೆ. ಪದೇ-ಪದೇ ಅವರು ಇಂತಹ ಜಾಹೀರಾತುಗಳನ್ನು ತರುತ್ತಿದ್ದಾರೆ ಎಂಬುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಹೇಳಿದೆ.
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ
ಮೇವು ಹಗರಣ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಅವರಿಗೆ ಮಂಜೂರಾದ ಜಾಮೀನು ರದ್ದುಗೊಳಿಸಲು ಸುಪ್ರೀಂ ಕೋರ್ಟ್ ನ ನಿರಾಕರಣೆ
ಭಗವಾನ್ ಜಗನ್ನಾಥರ ರಥಯಾತ್ರೆಗೂ ಮುನ್ನ ಗುಜರಾತ್ನಲ್ಲಿ ೫ ಭಯೋತ್ಪಾದಕರ ಬಂಧನ
ನ್ಯಾಯಾಧೀಶರ ಕುರ್ಚಿಯ ಮೇಲೆ ಮಾಟಮಂತ್ರ ಮಾಡಿದ ಆರೋಪದಡಿ ಮಹಿಳೆಯ ಬಂಧನ