|

ನವದೆಹಲಿ – ಕೊರೊನಾ ನಿರೋಧಕ ಲಸಿಕೆ ಪಡೆದ ನಂತರ ಹೃದಯಾಘಾತದಿಂದ ಸಾವನ್ನಪ್ಪುವ ಪ್ರಮಾಣ ಹೆಚ್ಚಾಗಿದೆ ಎಂಬ ವಾದವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಯುವಜನರಲ್ಲಿಯೂ ಹಠಾತ್ ಹೃದಯಾಘಾತಕ್ಕೆ ಕರೋನಾ ನಿರೋಧಕ ಲಸಿಕೆ ಕಾರಣ ಎಂದು ಆರೋಪಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಕೋವಿಡ್ ನಂತರ ವಯಸ್ಕರಲ್ಲಿ ಸಂಭವಿಸುವ ಆಕಸ್ಮಿಕ ಸಾವುಗಳ ಕುರಿತು ಅಧ್ಯಯನ ಮಾಡಲಾಗಿದೆ. ಅಧ್ಯಯನದ ನಂತರ, ಕೋವಿಡ್ ನಿರೋಧಕ ಲಸಿಕೆ ಮತ್ತು ಆಕಸ್ಮಿಕ ಸಾವುಗಳಿಗೆ ಯಾವುದೇ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದೆ.
Govt Clarifies: No Link Between COVID Vaccines & Sudden Heart Deaths! 💉🫀
ICMR & AIIMS studies find no evidence connecting vaccines to sudden fatalities. ✅
India's COVID-19 vaccines remain safe, effective, with rare serious side effects. 🇮🇳
pic.twitter.com/O9CmIIgdYc— Sanatan Prabhat (@SanatanPrabhat) July 2, 2025
ಭಾರತದಲ್ಲಿ COVID-19 ನಿರೋಧಕ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ!
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ನಡೆಸಿದ ಅಧ್ಯಯನಗಳಿಂದ, ಭಾರತದಲ್ಲಿ ಕೋವಿಡ್-19 ನಿರೋಧಕ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ತಿಳಿದುಬಂದಿದೆ. ಅವುಗಳ ಗಂಭೀರ ಅಡ್ಡ ಪರಿಣಾಮಗಳು ಅತ್ಯಂತ ವಿರಳವಾಗಿವೆ. ಮೇ ನಿಂದ ಆಗಸ್ಟ್ 2023 ರ ಅವಧಿಯಲ್ಲಿ ದೇಶದ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 47 ಆಸ್ಪತ್ರೆಗಳಲ್ಲಿ ಈ ಅಧ್ಯಯನವನ್ನು ನಡೆಸಲಾಯಿತು. ಈ ಅಧ್ಯಯನವನ್ನು ಅಕ್ಟೋಬರ್ 2021 ರಿಂದ ಮಾರ್ಚ್ 2023 ರ ಅವಧಿಯಲ್ಲಿ ಸಂಪೂರ್ಣವಾಗಿ ಆರೋಗ್ಯವಂತರಾಗಿದ್ದು, ಆದರೆ ದಿಢೀರನೆ ಸಾವನ್ನಪ್ಪಿದ ಜನರ ಮೇಲೆ ನಡೆಸಲಾಯಿತು.
ವಿವಿಧ ಕಾರಣಗಳಿಂದ ಹಠಾತ್ ಹೃದಯಾಘಾತ ಸಂಭವಿಸಬಹುದು!

ತಜ್ಞರು ಸ್ಪಷ್ಟಪಡಿಸಿರುವಂತೆ, ಆನುವಂಶಿಕತೆ, ಜೀವನಶೈಲಿ, ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ಆರೋಗ್ಯ ಸಮಸ್ಯೆಗಳು ಮತ್ತು ಕೋವಿಡ್ ಸೋಂಕಿನ ನಂತರ ಉಂಟಾಗುವ ತೊಡಕುಗಳು ಸೇರಿದಂತೆ ವಿವಿಧ ಅಂಶಗಳಿಂದ ಹಠಾತ್ ಹೃದಯಾಘಾತ ಮತ್ತು ಸಾವು ಸಂಭವಿಸಬಹುದು. ವಿವಿಧ ಕಾರಣಗಳಿಂದ ಹಠಾತ್ ಹೃದಯಾಘಾತ ಸಂಭವಿಸಬಹುದು. ಕೋವಿಡ್ ಲಸಿಕೆ ಮತ್ತು ಹೃದಯಾಘಾತದಿಂದ ಸಂಭವಿಸುವ ದಿಢೀರ್ ಸಾವುಗಳಿಗೆ ನೇರ ಸಂಬಂಧ ಕಲ್ಪಿಸುವುದು ತಪ್ಪು. ಆದ್ದರಿಂದ, ಈ ಸಾವುಗಳ ಬಗ್ಗೆ ಮಾಡಲಾಗುವ ಹೇಳಿಕೆಗಳು ಸುಳ್ಳು ಮತ್ತು ದಾರಿ ತಪ್ಪಿಸುವಂತಹವು.
ಕರ್ನಾಟಕದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದ್ದರು!

ಕರ್ನಾಟಕದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋವಿಡ್ ಲಸಿಕೆಗೆ ಆತುರದಿಂದ ಅನುಮೋದನೆ ನೀಡಿ ಅದನ್ನು ಜನರಿಗೆ ವಿತರಿಸಿದ್ದು, ಹೃದಯಾಘಾತದಿಂದ ಸಂಭವಿಸುವ ಸಾವುಗಳಿಗೆ ಕಾರಣವಾಗಿರಬಹುದು ಎಂದು ಆರೋಪಿಸಿದ್ದರು. ಆ ನಂತರ ಕೇಂದ್ರ ಸರಕಾರದಿಂದ ಈ ಮೇಲಿನ ಸ್ಪಷ್ಟೀಕರಣ ನೀಡಲಾಗಿದೆ. ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆಯಲ್ಲಿ ಕನಿಷ್ಠ 22 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಲ್ಲಿ 5 ಜನರು 19 ರಿಂದ 25 ವರ್ಷ ವಯಸ್ಸಿನವರಾಗಿದ್ದರು. ಹೆಚ್ಚಿನ ಸಾವುಗಳು ಯಾವುದೇ ರೋಗಲಕ್ಷಣಗಳಿಲ್ಲದೆ ಸಂಭವಿಸಿವೆ. ಅನೇಕ ಜನರು ಮನೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ದಿಢೀರನೆ ಕುಸಿದು ಬಿದ್ದಿದ್ದಾರೆ.
ಸಂಪಾದಕೀಯ ನಿಲುವುಸರಕಾರದ ಈ ಸ್ಪಷ್ಟೀಕರಣವನ್ನು ನಾಗರಿಕರು ನಂಬುತ್ತಾರೆಯೇ ಎಂಬುದು ಪ್ರಶ್ನೆ! |
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”