ಅಂಬಾಲಾ (ಹರಿಯಾಣ) ಇಲ್ಲಿನ ಚರ್ಚ್‌ನಲ್ಲಿ ಬೇಸಿಗೆ ಶಿಬಿರದ ಹೆಸರಿನಲ್ಲಿ ಹಿಂದೂ ವಿದ್ಯಾರ್ಥಿಗಳ ಮತಾಂತರ ! : Haryana Conversion Racket

ಬಜರಂಗದಳದ ದೂರಿನ ನಂತರ ಪೊಲೀಸರಿಂದ ತನಿಖೆ

ಅಂಬಾಲಾ (ಹರಿಯಾಣ) – ಅಂಬಾಲಾ ಕಂಟೋನ್ಮೆಂಟ್‌ನ ಹಿಮಂತಪುರಾ ಪ್ರದೇಶದಲ್ಲಿರುವ ಚರ್ಚ್‌ವೊಂದರಲ್ಲಿ ಬೇಸಿಗೆ ಶಿಬಿರದ ಹೆಸರಿನಲ್ಲಿ ಹಿಂದೂ ಮಕ್ಕಳನ್ನು ಮತಾಂತರ ಮಾಡಲಾಗುತ್ತಿದೆ ಎಂದು ಬಜರಂಗದಳ ಆರೋಪಿಸಿದೆ. ಬಜರಂಗದಳದ ಕಾರ್ಯಕರ್ತರು ಚರ್ಚ್‌ಗೆ ಹೋಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರ ನಂತರ, ಪೊಲೀಸರು ಸ್ಥಳಕ್ಕೆ ಬಂದು ಮಕ್ಕಳನ್ನು ವಿಚಾರಿಸಿದಾಗ, ತಾವು ಶಿಬಿರಕ್ಕಾಗಿ ಬಂದಿದ್ದೆವು; ಆದರೆ ಅವರಿಗೆ ಯೇಸುಕ್ರಿಸ್ತನ ಬಗ್ಗೆ ಮಾಹಿತಿ ನೀಡಲಾಗುತ್ತಿತ್ತು ಎಂದು ಅವರು ಹೇಳಿದ್ದಾರೆ.

ಮತ್ತೊಂದೆಡೆ, ಚರ್ಚ್‌ನ ಪಾದ್ರಿ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನಾವು ಪ್ರತಿ ವರ್ಷ ಇಂತಹ ಶಿಬಿರಗಳನ್ನು ಆಯೋಜಿಸುತ್ತೇವೆ ಎಂದು ಪಾದ್ರಿ ಹೇಳಿದರು. ಬಜರಂಗದಳದವರು ಬಲವಂತವಾಗಿ ಚರ್ಚ್‌ಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಮತಾಂತರದ ಆರೋಪಗಳು ಸುಳ್ಳು ಎಂದು ಅವರು ತಿಳಿಸಿದ್ದಾರೆ.

ಪೊಲೀಸರು ಮೂರು ಗಂಟೆಗಳ ಕಾಲ ಎರಡೂ ಗುಂಪುಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಚರ್ಚ್‌ನಲ್ಲಿ ಮಾತ್ರವಲ್ಲದೆ, ಪೊಲೀಸ್ ಠಾಣೆಯಲ್ಲಿಯೂ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದೆ. ಸದ್ಯ ಎರಡೂ ಗುಂಪುಗಳ ದೂರುಗಳ ಆಧಾರದ ಮೇಲೆ ತನಿಖೆ ನಡೆಯುತ್ತಿದೆ.

ಸಂಪಾದಕೀಯ ನಿಲುವು

ದೇಶದಲ್ಲಿ ಮತಾಂತರ-ವಿರೋಧಿ ಕಾನೂನು ಇಲ್ಲದಿರುವುದರಿಂದ ಕ್ರೈಸ್ತ ಮಿಷನರಿಗಳಿಗೆ ಅನುಕೂಲಕರವಾಗಿದೆ, ಇದು ಹಿಂದೂಗಳಿಗೆ ನಾಚಿಕೆಗೇಡು!