ಕಾಂದಳಿ(ಪುಣೆ ಜಿಲ್ಲೆ)ಇಲ್ಲಿನ ಪ.ಪೂ. ಭಕ್ತರಾಜ ಮಹಾರಾಜರ ಸಮಾಧಿ ಸ್ಥಳಕ್ಕೆ ಸರಸಂಘಚಾಲಕರು ಭೇಟಿ ನೀಡಿದರು!

ಕಾಂದಳಿ (ಪುಣೆ ಜಿಲ್ಲೆ) – ಸನಾತನ ಸಂಸ್ಥೆಯ ಶ್ರದ್ಧಾಸ್ಥಾನವಾದ ಪ.ಪೂ. ಭಕ್ತರಾಜ ಮಹಾರಾಜರ ಕಾಂದಳಿ (ಪುಣೆ ಜಿಲ್ಲೆ) ಆಶ್ರಮದಲ್ಲಿ ಮೌಂಜಿಬಂಧನ ಸಮಾರಂಭದ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಪ.ಪೂ. ಡಾ. ಮೋಹನಜಿ ಭಾಗವತ ಅವರು ಆಗಮಿಸಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಅವರು ಸೌಹಾರ್ದ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸರಸಂಘಚಾಲಕರಿಗೆ ಸನಾತನ ಆಶ್ರಮಕ್ಕೆ ಭೇಟಿ ನೀಡಲು ಆಹ್ವಾನ ನೀಡಿದಾಗ, ಅವರು ಆಶ್ರಮಕ್ಕೆ ಭೇಟಿ ನೀಡಲು ಸಮ್ಮತಿ ಸೂಚಿಸಿದರು.
ಸನಾತನದ ಅಕೋಲಾದ ಸಾಧಕಿ ಸೌ. ಮೇಘಾ ವಸಂತ ಜೋಶಿ (ಆಧ್ಯಾತ್ಮಿಕ ಮಟ್ಟ ಶೇ.62) ಅವರ ಮೊಮ್ಮಕ್ಕಳಾದ ಚಿ. ಶ್ರೀಪಾದ (ಆಧ್ಯಾತ್ಮಿಕ ಮಟ್ಟ ಶೇ. 52) ಮತ್ತು ಚಿ. ಯಶೋಧನ (ಆಧ್ಯಾತ್ಮಿಕ ಮಟ್ಟ ಶೇ. 51) ಅವರ ಮೌಂಜಿಬಂಧನ ಕಾರ್ಯಕ್ರಮವು ಕಾಂದಳಿಯಲ್ಲಿರುವ ಪ.ಪೂ. ಭಕ್ತರಾಜ ಮಹಾರಾಜರ ಆಶ್ರಮದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸರಸಂಘಚಾಲಕರೊಂದಿಗೆ ಸಂಘದ ಕಾರ್ಯಕರ್ತರು ಹಾಗೂ ಪ.ಪೂ. ಭಕ್ತರಾಜ ಮಹಾರಾಜರ ಭಕ್ತರು ಉಪಸ್ಥಿತರಿದ್ದರು. ಈ ವೇಳೆ ಸರಸಂಘಚಾಲಕರು ಪ.ಪೂ. ಭಕ್ತರಾಜ ಮಹಾರಾಜರ ಪವಿತ್ರ ಸಮಾಧಿ ಸ್ಥಳಕ್ಕೆ ಹಾಗೂ ಶ್ರೀರಾಮ ಮಂದಿರಕ್ಕೆ ಭಕ್ತಿಪೂರ್ವಕ ದರ್ಶನ ಪಡೆದರು.
ಮೌಂಜಿಬಂಧನ ಕಾರ್ಯಕ್ರಮದ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರು, “ಮೌಂಜಿಬಂಧನ ಸಂಸ್ಕಾರದ ನಂತರ ಬಟುಗಳು ವಿದ್ಯಾಭ್ಯಾಸಕ್ಕೆ ಸಿದ್ಧರಾಗುತ್ತಾರೆ. ವಿದ್ಯಾಭ್ಯಾಸದ ಅವಧಿಯಲ್ಲಿ ವಿಶ್ವದಲ್ಲಿ ಯಾವುದು ಉತ್ತಮವೋ ಅದನ್ನು ಕಲಿಯಲು ಪ್ರಯತ್ನಿಸುತ್ತಾರೆ ಮತ್ತು ನಂತರ ಗೃಹಸ್ಥಾಶ್ರಮದಲ್ಲಿ ತಾವು ಪಡೆದ ಉತ್ತಮವಾದದ್ದನ್ನು ಸಮಾಜಕ್ಕೆ ನೀಡಲು ಪ್ರಯತ್ನಿಸುತ್ತಾರೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ವಕ್ತಾರ ಶ್ರೀ. ಅಭಯ ವರ್ತಕ ಅವರು ಇತ್ತೀಚೆಗೆ ಗೋವಾದಲ್ಲಿ ನಡೆದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ದ ಛಾಯಾಚಿತ್ರಗಳನ್ನು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರಿಗೆ ತೋರಿಸಿದರು ಹಾಗೂ ಮಹೋತ್ಸವದ ಬಗ್ಗೆ ಮಾಹಿತಿ ನೀಡಿದರು. ಈ ಮಹೋತ್ಸವದ ಸಮಯದಲ್ಲಿ ನಡೆದ ಯಜ್ಞಗಳ ಪ್ರಸಾದ, ಶ್ರೀ ವೆಂಕಟೇಶ್ ಬಾಲಾಜಿ ಅವರ ಬೆಳ್ಳಿ ಮೂರ್ತಿ ಮತ್ತು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಸಂಕ್ಷಿಪ್ತ ಚರಿತ್ರೆ’ ಎಂಬ ಗ್ರಂಥವನ್ನು ಸರಸಂಘಚಾಲಕರಿಗೆ ಉಡುಗೋರೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಪುತ್ರ ಪೂ. ನಂದುಭಯ್ಯಾ ಅಲಿಯಾಸ್ ಹೇಮಂತ ಕಸರೇಕರ ಅವರು ಪ.ಪೂ. ಸರಸಂಘಚಾಲಕ ಡಾ. ಮೋಹನಜಿ ಭಾಗವತ ಅವರನ್ನು ಸ್ವಾಗತಿಸಿದರು. ಈ ಹಿಂದೆ ನಾಗಪುರದಲ್ಲಿ ನಡೆದ ಭೇಟಿಯಲ್ಲಿ ಪೂ. ನಂದುಭಯ್ಯಾ ಕಸರೇಕರ ಅವರು ಸರಸಂಘಚಾಲಕರಿಗೆ ಪ.ಪೂ. ಭಕ್ತರಾಜ ಮಹಾರಾಜರ ಶ್ರೇಷ್ಠತೆಯನ್ನು ತಿಳಿಸಿದ್ದರು ಹಾಗೂ ಕಾಂದಳಿಯಲ್ಲಿರುವ ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಆಹ್ವಾನ ನೀಡಿದ್ದರು. ಮೌಂಜಿಬಂಧನ ಕಾರ್ಯಕ್ರಮದ ಸಂದರ್ಭದಲ್ಲಿ ಸರಸಂಘಚಾಲಕರು ಇಲ್ಲಿಗೆ ಭೇಟಿ ನೀಡಿದರು. ಶ್ರೀರಾಮಚಂದ್ರ ದೇವ ಟ್ರಸ್ಟ ಹಾಗೂ ಪ.ಪೂ. ಭಕ್ತರಾಜ ಮಹಾರಾಜ ಸಮಾಧಿ ಟ್ರಸ್ಟ್, ಕಾಂದಳಿಯ ಕಾರ್ಯದರ್ಶೀ ಶ್ರೀ. ಶರದ ಕಸರೇಕರ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪುತ್ರ ರವೀಂದ್ರ ಕಸರೇಕರ ಅವರು ಸರಸಂಘಚಾಲಕರಿಗೆ ಸಮಾಧಿ ಸ್ಥಳ ಮತ್ತು ಆಶ್ರಮದ ಆವರಣದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸರಸಂಘಚಾಲಕರ ಸ್ನೇಹಿತರು ಮತ್ತು ವನವಾಸಿ ಕಲ್ಯಾಣ ಆಶ್ರಮದ ಪ್ರಾಂತ ಉಪಾಧ್ಯಕ್ಷ ಶ್ರೀ. ಶರದ ಕಿಟಕರು ಮತ್ತು ಸನಾತನದ ನಾಗಪುರದ ಸಾಧಕಿ ಸೌ. ಉಷಾ ಕಿಟಕರು (ಶ್ರೀ. ಮತ್ತು ಸೌ. ಕಿಟಕರು ಅವರು ಬಟು ಚಿ. ಯಶೋಧನ ಅವರ ಅಜ್ಜಿ-ಅಜ್ಜ ಆಗಿದ್ದಾರೆ) ಹಾಗೂ ‘ಅಲ್ಟ್ರಾಟೆಕ್ ಸಿಮೆಂಟ್’ ಸಂಸ್ಥೆಯ ಅಧ್ಯಕ್ಷ ಶ್ರೀ. ಮಂಗೇಶ ವಾಘ, ಸೇಲ್ಸ್ ಪ್ರೊಮೋಟರ್ ಶ್ರೀ. ನಿತಿನ ವಾಘ ಉಪಸ್ಥಿತರಿದ್ದರು.
ಮಹಿಳೆಯ ಎದೆಗೆ ಸ್ಪರ್ಶಿಸುವುದು ಅತ್ಯಾಚಾರದ ಪ್ರಯತ್ನವಲ್ಲ! – ಉಚ್ಚ ನ್ಯಾಯಾಲಯ : Attempt to Rape
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”