15 ಇರಾನಿ ಯುದ್ಧ ವಿಮಾನಗಳು ಮತ್ತು ಅನೇಕ ಹೆಲಿಕಾಪ್ಟರ್‌ಗಳು ನಾಶ
ತೆಲಅವಿವ್ (ಇಸ್ರೇಲ್) – ಅಮೆರಿಕ ಇರಾನಿನ ಪರಮಾಣು ಕೇಂದ್ರಗಳ ಮೇಲೆ ಮುಂಜಾನೆ ದಾಳಿ ನಡೆಸಿದ ನಂತರ, ಅದೇ ರಾತ್ರಿ ಇಸ್ರೇಲ್ ಇರಾನಿನ ಶಾರುದ್‌ನಲ್ಲಿರುವ ಬ್ಯಾಲಿಸ್ಟಿಕ್ ಕ್ಷಿಪಣಿ ಎಂಜಿನ್ ಉತ್ಪಾದನಾ ಕಾರ್ಖಾನೆಯ ಮೇಲೆ ದಾಳಿ ನಡೆಸಿತು. ಇದರಲ್ಲಿ ಅನೇಕ ಎಂಜಿನ್ ಉತ್ಪಾದನಾ ಯಂತ್ರಗಳು ಮತ್ತು ಅಗತ್ಯ ಉಪಕರಣಗಳು ನಾಶವಾದವು. ಇದರೊಂದಿಗೆ ತೇಹರಾನ್, ಕೆರಮಾನಶಾ ಮತ್ತು ಹಮಾದಾನ ಮೇಲೂ ದಾಳಿಗಳು ನಡೆದವು.
ಇದರಲ್ಲಿ 15 ಇರಾನಿ ಯುದ್ಧ ವಿಮಾನಗಳು, ಅನೇಕ ಹೆಲಿಕಾಪ್ಟರ್‌ಗಳು ಮತ್ತು ಇತರ ಪ್ರಮುಖ ಸೌಲಭ್ಯಗಳು ನಾಶವಾಗಿವೆ. ಇಸ್ರೇಲ್ ಡ್ರೋನ್‌ಗಳ ಮೂಲಕ ದಾಳಿಗಳನ್ನು ನಡೆಸಿತು. ಇದರಲ್ಲಿ ಇರಾನಿನ ವಾಯುಪಡೆ ನೆಲೆಗಳಿಗೆ ಭಾರಿ ಹಾನಿಯಾಗಿದೆ. ಇದರಿಂದ ಇರಾನಿನ ಯುದ್ಧ ವಿಮಾನಗಳ ಹಾರಾಟಕ್ಕೆ ತೊಂದರೆಗಳು ಉಂಟಾಗಿವೆ. ಈ ದಾಳಿಗಳ ಬಗ್ಗೆ ಇರಾನನಿಂದ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಮೊಸಾದ ಜೊತೆಗಿನ ಸಂಬಂಧದ ಆರೋಪದ ಮೇಲೆ ಇರಾನದಲ್ಲಿ ಒಬ್ಬನಿಗೆ ಮರಣದಂಡನೆ
ಇಸ್ರೇಲಿ ಗುಪ್ತಚರ ಸಂಸ್ಥೆ ‘ಮೊಸಾದ್’ಗೆ ಸಹಾಯ ಮಾಡಿದ ಆರೋಪದ ಮೇಲೆ ಇರಾನ್ ಮಹಮ್ಮದ್ ಅಮೀನ್ ಶಾಯೆಸ್ತೆಹ್ ಎಂಬ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಅವರನ್ನು 2023 ರ ಕೊನೆಯಲ್ಲಿ ಬಂಧಿಸಲಾಗಿತ್ತು. ಶಾಯೆಸ್ತೆಹ್ ಇರಾನಿನ ಭದ್ರತೆಯ ವಿರುದ್ಧ ಆನ್‌ಲೈನ್ ಬೇಹುಗಾರಿಕೆ ಮತ್ತು ಸೈಬರ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದನು.
ಇರಾನಿನಲ್ಲಿ ಅಧಿಕಾರ ಬದಲಾವಣೆ ಏಕೆ ಆಗಬಾರದು? – ಟ್ರಂಪ್ ಪ್ರಶ್ನೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿ, “ಪ್ರಸ್ತುತ ಇರಾನಿ ಸರಕಾರ ಇರಾನ್ ಅನ್ನು ‘ಮತ್ತೆ ಶ್ರೇಷ್ಠ’ವನ್ನಾಗಿ ಮಾಡಲು ಸಾಧ್ಯವಾಗದಿದ್ದರೆ, ಅಧಿಕಾರ ಬದಲಾವಣೆ ಏಕೆ ಆಗಬಾರದು? ‘ಮೇಕ್ ಇರಾನ್ ಗ್ರೇಟ್ ಅಗೇನ್’.” ಎಂದು ಹೇಳಿದ್ದಾರೆ.(ಇರಾನನ್ನು ಮತ್ತೆ ಮಹಾನಗೊಳಿಸಿ.)
ಸಂಪಾದಕೀಯ ನಿಲುವುಶತ್ರುವನ್ನು ಹೇಗೆ ಕೊಲ್ಲಬೇಕೆಂದು ಇಸ್ರೇಲ್‌ನಿಂದ ಕಲಿಯಬೇಕು! |