ಯಾರಾದರೂ ಇಸ್ಲಾಂನ ನಾಯಕನ ಅವಮಾನಿಸುವ ಪ್ರಯತ್ನ ಮಾಡಬಹುದೇ? – ಭಾಜಪದ ಸಂಸದ ನಿಶಿಕಾಂತ್ ದುಬೆ ಅವರ ಪ್ರಶ್ನೆ

ಮಹಮ್ಮದ್ ಜುಬೆನು ಆರ್ಯ ಚಾಣಕ್ಯರನ್ನು ಅವಮಾನಿಸಿದ ಪ್ರಕರಣ

(ಮೇಲೆ ಪ್ರಕಾಶಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜಸ್ಥಿತಿ ತಿಳಿಸುವುದಾಗಿದೆ ! – ಸಂಪಾದಕರು)

ನವದೆಹಲಿ – ಕಟ್ಟರ ಹಿಂದೂ ದ್ವೇಷಿ ಮತ್ತು ‘ಆಲ್ಟ್ ನ್ಯೂಸ್’ ಎಂಬ ಮುಸ್ಲಿಂ ಪರ ವೆಬ್‌ಸೈಟ್‌ನ ಸಹ-ಸಂಸ್ಥಾಪಕ ಮಹಮ್ಮದ್ ಜುಬೆರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಭಾಜಪದ ಜಾರ್ಖಂಡ್ ನಲ್ಲಿನ ಸಂಸದ ಮತ್ತು ಹಿರಿಯ ನಾಯಕ ಡಾ. ನಿಶಿಕಾಂತ್ ದುಬೆ ಅವರು ಒತ್ತಾಯಿಸಿದ್ದಾರೆ. ಡಾ. ದುಬೆ ಅವರು ತಮ್ಮ ‘ಎಕ್ಸ್’ ನಲ್ಲಿನ ಪೋಸ್ಟ್‌ನಲ್ಲಿ, “ಜುಬೆರ್ ಅವರು ಆರ್ಯ ಚಾಣಕ್ಯರ ಜುಟ್ಟನ್ನು ಕತ್ತರಿಸಿದ ಚಿತ್ರವನ್ನು’ ಪೋಸ್ಟ್ ಮಾಡಿದ್ದಾರೆ. ಇದು ಕೇವಲ ಹಿಂದೂ ಧರ್ಮಕ್ಕೆ ಮಾತ್ರವಲ್ಲದೆ, ನಮ್ಮ ಶ್ರದ್ಧೆ ಮತ್ತು ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನವಾಗಿದೆ” ಎಂದು ಹೇಳಿದ್ದಾರೆ. “ಭಾರತದ ಸಂವಿಧಾನ ಇಂತಹವರನ್ನು ಜೈಲಿಗೆ ಕಳುಹಿಸುತ್ತದೆ. ಆದ್ದರಿಂದ ದೆಹಲಿ ಪೊಲೀಸರು ಮತ್ತು ಕೇಂದ್ರೀಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಅವರು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ದುಬೆ ಅವರು, “ಯಾರಾದರೂ ಇಸ್ಲಾಂ ಧರ್ಮದ ಪವಿತ್ರ ಗ್ರಂಥಗಳಲ್ಲಿರುವ ಯಾವುದೇ ನಾಯಕರನ್ನು ಇದೇ ರೀತಿ ಅವಮಾನಿಸಲು ಪ್ರಯತ್ನಿಸಬಹುದೇ?” ಎಂದು ಪ್ರಶ್ನಿಸಿದ್ದಾರೆ.