|
ನವದೆಹಲಿ – ಇಸ್ರೇಲ್ ಸ್ವತಃ ಅಣ್ವಸ್ತ್ರ ಹೊಂದಿರುವ ದೇಶವಾಗಿದೆ; ಆದರೆ ಇರಾನ್ ಬಳಿ ಅಣ್ವಸ್ತ್ರಗಳಿಲ್ಲದಿದ್ದರೂ ಇರಾನ್ ಅನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ. ಇದು ಇಸ್ರೇಲ್‌ನ ದ್ವಿಮುಖಿತನ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ‘ದಿ ಹಿಂದೂ’ ದಿನಪತ್ರಿಕೆಯಲ್ಲಿ ಬರೆದ ಲೇಖನದ ಮೂಲಕ ಟೀಕಿಸಿದ್ದಾರೆ.
‘ಇರಾನ್ ಭಾರತದ ಹಳೆಯ ಸ್ನೇಹಿತ ಮತ್ತು ಇಂತಹ ಪರಿಸ್ಥಿತಿಯಲ್ಲಿ ಭಾರತದ ಮೌನ ಕಳವಳಕಾರಿಯಾಗಿದೆ. ಗಾಜಾದಲ್ಲಿ ನಡೆಯುತ್ತಿರುವ ವಿನಾಶ ಮತ್ತು ಇರಾನ್ ಮೇಲಿನ ದಾಳಿಯ ಬಗ್ಗೆ ಭಾರತವು ಸ್ಪಷ್ಟವಾಗಿ, ಜವಾಬ್ದಾರಿಯುತವಾಗಿ ಮತ್ತು ಬಲವಾದ ಧ್ವನಿಯಲ್ಲಿ ಮಾತನಾಡಬೇಕು. ಇನ್ನೂ ಬಹಳ ತಡವಾಗಿಲ್ಲ’ ಎಂದು ಸೋನಿಯಾ ಗಾಂಧಿ ಹೇಳಿದರು.
ಇಸ್ರೇಲ್ ಶಾಂತಿಯನ್ನು ಕದಡುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ!
ಈ ಲೇಖನದಲ್ಲಿ ಸೋನಿಯಾ ಗಾಂಧಿ ಅವರು, ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಾಯಕತ್ವದಲ್ಲಿ ಇಸ್ರೇಲ್ ನಿರಂತರವಾಗಿ ಶಾಂತಿಯನ್ನು ಕದಡುವ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಿದೆ. (ಸೋನಿಯಾ ಗಾಂಧಿ ಎಂದಾದರೂ ಪಾಕಿಸ್ತಾನದ ಬಗ್ಗೆ ಭಾರತದ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡಿದ್ದಾರೆಯೇ? ಅಥವಾ ಲೇಖನ ಬರೆದಿದ್ದಾರೆಯೇ? – ಸಂಪಾದಕರು) ಇದು ಅತ್ಯಂತ ದುರದೃಷ್ಟಕರವಾಗಿದೆ. ಅವರ ಸರಕಾರ ನಿರಂತರವಾಗಿ ಅಕ್ರಮ ವಸಾಹತುಗಳನ್ನು ಹೆಚ್ಚಿಸುತ್ತಿದೆ, ಉಗ್ರಗಾಮಿ ರಾಷ್ಟ್ರೀಯವಾದಿಗಳೊಂದಿಗೆ ಕೆಲಸ ಮಾಡುತ್ತಿದೆ ಮತ್ತು ದ್ವಿ-ರಾಜ್ಯ ಆಯ್ಕೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತಿದೆ. ಇದರಿಂದ ಪ್ಯಾಲೆಸ್ಟೀನಿಯನ್ನರ ದುಃಖ ಹೆಚ್ಚಾಗಿದೆಯಲ್ಲದೆ; ಸಂಪೂರ್ಣ ಪ್ರದೇಶವು ದೀರ್ಘಕಾಲದ ಸಂಘರ್ಷದತ್ತ ತಳ್ಳಲ್ಪಟ್ಟಿದೆ. (ಸೋನಿಯಾ ಗಾಂಧಿಯವರಿಗೆ ಪ್ಯಾಲೆಸ್ಟೀನಿಯಾ ಮುಸಲ್ಮಾನರ ದುಃಖ ಕಾಣುತ್ತದೆ; ಆದರೆ ಹಿಂದೂಗಳದ್ದು ಕಾಣುವುದಿಲ್ಲ! – ಸಂಪಾದಕರು)
ಸಂಪಾದಕೀಯ ನಿಲುವು
|