|

ಮಥುರಾ (ಉತ್ತರಪ್ರದೇಶ) – ಇಲ್ಲಿನ ಜಗತ್ಪ್ರಸಿದ್ಧ ಸಂತ ಪ್ರೇಮಾನಂದ ಮಹಾರಾಜರ ಕೃತಕ ಬುದ್ಧಿಮತ್ತೆಯಿಂದ (AI) ರಚಿಸಲಾದ ಒಂದು ವಿವಾದಾತ್ಮಕ ಚಿತ್ರ ಇತ್ತೀಚೆಗೆ ಪ್ರಸಾರವಾಗಿದ್ದು, ಅದರಲ್ಲಿ ಮಲಗಿರುವ ಸಂತ ಪ್ರೇಮಾನಂದ ಮಹಾರಾಜರ ಪಾದಗಳನ್ನು ರಾಧಾರಾಣಿ ಒತ್ತುವುದು ಮತ್ತು ಶ್ರೀಕೃಷ್ಣ ಕಿಟಕಿಯಿಂದ ರಾಧಾರಾಣಿಯನ್ನು ನೋಡುತ್ತಿರುವಂತೆ ತೋರಿಸಲಾಗಿದೆ. ಇದರ ವಿರುದ್ಧ ಆಕ್ರೋಶದ ಅಲೆ ಎದ್ದಿದ್ದು, ಮಹಾರಾಜರ ಭಕ್ತರು ಅಜ್ಞಾತ ವ್ಯಕ್ತಿಗಳ ವಿರುದ್ಧ ದೂರು ನೀಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಂಬಂಧಪಟ್ಟ ವ್ಯಕ್ತಿಗಳ ಪತ್ತೆಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಮಹಾರಾಜರ ಭಕ್ತರಾದ ಗೌತಮ ಚಿಲಾನಾ ಅವರು ಮಾತನಾಡಿ, “ನಮ್ಮ ಪೂಜ್ಯ ರಾಧಾರಾಣಿ ಮತ್ತು ಪೂಜ್ಯ ಗುರುದೇವ ಸಂತ ಪ್ರೇಮಾನಂದ ಗೋವಿಂದ ಶರಣ ಮಹಾರಾಜರ ಇಂತಹ ಚಿತ್ರವನ್ನು ಸಹಿಸಲು ಸಾಧ್ಯವಿಲ್ಲ. ಇದರಿಂದ ಸಂತ ಪ್ರೇಮಾನಂದ ಮಹಾರಾಜ ಮತ್ತು ಇತರ ಸಂತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ” ಎಂದು ತಿಳಿಸಿದ್ದಾರೆ.
ಸಂಪಾದಕೀಯ ನಿಲುವುಹಿಂದೂಗಳ ಶ್ರದ್ಧಾ ಕೇಂದ್ರಗಳ ಇಂತಹ ಚಿತ್ರಗಳನ್ನು ಮಾಡಿದವರ ವಿರುದ್ಧ ಹೆಚ್ಚಾಗಿ ಪ್ರಕರಣಗಳು ದಾಖಲಾಗುತ್ತವೆ, ಆದರೆ ಇಸ್ಲಾಂಗೆ ಅಗೌರವ ತೋರಿಸಿದರೆ ಅದು ಜೀವಕ್ಕೆ ಅಪಾಯಕಾರಿ ಎಂದು ತಿಳಿದಿರುವಾಗ, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಮಾತ್ರ ಧಕ್ಕೆ ಉಂಟಾಗುತ್ತದೆ ಇದರಲ್ಲಿ ಆಶ್ಚರ್ಯವೇನಿದೆ? |
ಅಮರಕಂಟಕ (ಮಧ್ಯಪ್ರದೇಶ)ಇಲ್ಲಿನ ನರ್ಮದಾ ಉಗಮ ದೇವಸ್ಥಾನದ ಚಿನ್ನ ಮತ್ತು ಬೆಳ್ಳಿ ನಾಪತ್ತೆ! : Amarkantak Temple Donation Scam
ಬೆಂಗಳೂರಿನಲ್ಲಿ ದೇಶದ ಮೊದಲ ‘ಎಐ’ ವಿಶ್ವವಿದ್ಯಾಲಯ ಆರಂಭ ! : Karnataka AI University
ಗುಜರಾತ್ ನ ಪ್ರಸಿದ್ಧ ಶಕ್ತಿಪೀಠ ಅಂಬಾಜಿ ದೇವಸ್ಥಾನದಲ್ಲೂ ನೋಟು ಎಣಿಕೆಯ ಸಮಯದಲ್ಲಿ ೨ ತಿಂಗಳ ಹಿಂದೆ ಕಳ್ಳತನ ನಡೆದಿರುವುದು ಬಹಿರಂಗ ! : Ambaji Temple Donation Theft
ಸಮಾಜವಾದಿ ಪಕ್ಷದ ಅಧಿಕಾರಾವಧಿಯಲ್ಲಿ ‘ವಕ್ಫ್ ಮಂಡಳಿ’ಯ ಶತಕೋಟಿ ರೂಪಾಯಿಗಳ ಹಗರಣ! – ಮೌಲಾನಾ ಶಹಾಬುದ್ದೀನ ರಿಜ್ವಿ ಬರೇಲವಿ
“ನಾನು ಛತ್ರಪತಿ ಶಿವಾಜಿ ಮಹಾರಾಜರ ಅನುಯಾಯಿಯಾಗಿದ್ದು ರಣರಂಗ ಬಿಟ್ಟು ಓಡಿಹೋಗುವವನಲ್ಲ!”
ಭೋಜಶಾಲೆಯ ಪ್ರಕರಣದಲ್ಲಿ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆ ನೀಡಲು ಸರ್ವೋಚ್ಚ ನ್ಯಾಯಾಲಯದ ನಿರಾಕರಣೆ