ಭಾಗ್ಯನಗರ (ತೆಲಂಗಾಣ): ಮಕ್ಕಳ ಲೈಂಗಿಕ ಶೋಷಣೆಯಲ್ಲಿ ತೊಡಗಿದ್ದ ಗ್ಯಾಂಗ್ ಸೆರೆ!

ಭಾಗ್ಯನಗರ (ತೆಲಂಗಾಣ) – ಸಾಮಾಜಿಕ ಮಾಧ್ಯಮಗಳಲ್ಲಿ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಶ್ಲೀಲ ವೀಡಿಯೊಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ, ಜೂನ್ 18, 2025 ರಂದು ಭಾಗ್ಯನಗರದಲ್ಲಿ 15 ಜನರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಐಐಟಿ ಖರಗಪುರದಿಂದ ಪದವಿ ಪಡೆದು ಪ್ರಸ್ತುತ ಭಾಗ್ಯನಗರದ ಒಂದು ಸಾಫ್ಟವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ಇಂಜಿನಿಯರ್ ಸಹ ಸೇರಿದ್ದಾನೆ. ಈ ಆರೋಪಿಗಳು ಪ್ರಸಾರ ಮಾಡಿದ ಅಶ್ಲೀಲ ವೀಡಿಯೊಗಳಲ್ಲಿ ವಿದೇಶಿ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ.

1. ರಾಜ್ಯ ಮಕ್ಕಳ ಸಂರಕ್ಷಣಾ ಬ್ಯೂರೋದ ನಿರ್ದೇಶಕಿ ಶಿಖಾ ಗೋಯಲ್ ಅವರ ಪ್ರಕಾರ, ಆನಲೈನ್ ಬಳಕೆದಾರರು ಅಪ್ಲಿಕೇಶನಗಳ ಮೂಲಕ ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ವಿಡಿಯೋ ಗಳನ್ನು ಪ್ರಸಾರ ಮಾಡುತ್ತಾರೆ. ಸದ್ಯ ಈ ಆರೋಪಿಗಳು ಯಾವುದಾದರೂ ಅಂತರರಾಷ್ಟ್ರೀಯ ಗುಂಪಿನ ಭಾಗವಾಗಿದ್ದಾರೆಯೇ ಎಂಬುದರ ತನಿಖೆ ಮಾಡಲಾಗುತ್ತಿದೆ.

2. ಪೊಲೀಸರು ಭಾಗ್ಯನಗರ, ಯಾದಾದ್ರಿಗುಟ್ಟಾ, ವರಂಗಲ್, ಜಗಿತ್ಯಾಲ, ಕರೀಂನಗರ, ಜಗದ್ಗಿರಿಗುಟ್ಟಾ ಮುಂತಾದೆಡೆ ಏಕಕಾಲದಲ್ಲಿ ದಾಳಿ ನಡೆಸಿ 15 ಜನರನ್ನು ಬಂಧಿಸಿದರು.

3. ಶಿಖಾ ಗೋಯಲ್ ಅವರು ನೀಡಿದ ಮಾಹಿತಿಯ ಪ್ರಕಾರ, ಕಳೆದ 4 ತಿಂಗಳಲ್ಲಿ 294 ಪ್ರಕರಣಗಳನ್ನು ದಾಖಲಿಸಲಾಗಿದ್ದು, 110 ಜನರನ್ನು ಬಂಧಿಸಲಾಗಿದೆ.

4. ಈ ಗುಂಪು ಆದಿವಾಸಿ ಮಹಿಳೆಯರನ್ನೂ ಗುರಿಯಾಗಿಸಿಕೊಂಡಿತ್ತು. ಅವರು ದುರ್ಗಮ ಪ್ರದೇಶಗಳ ಮಹಿಳೆಯರನ್ನು ನಗರಕ್ಕೆ ಕರೆತಂದು ಮಾರಾಟ ಮಾಡುತ್ತಿದ್ದರು.

5. ಈ ಪ್ರಕರಣದ ತನಿಖೆ ವೇಳೆ, ಓರ್ವ ಸಂತ್ರಸ್ತ ಮಹಿಳೆ ಪೊಲೀಸರನ್ನು ಸಂಪರ್ಕಿಸಿ, ತನ್ನನ್ನು ಮಧ್ಯಪ್ರದೇಶದ ವೇಶ್ಯಾವಾಟಿಕೆ ಗೃಹವೊಂದರಲ್ಲಿ 1 ಲಕ್ಷ 10 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿತ್ತು ಎಂದು ತಿಳಿಸಿದರು. ಆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಕಳೆದ ತಿಂಗಳು ತನ್ನ ಮನೆಗೆ ಮರಳಿದ್ದಾಳೆ.

6. ಈ ಪ್ರಕರಣದಲ್ಲಿ ಪೊಲೀಸರ ಕೈವಾಡವೂ ಇದೆ ಎಂಬುದು ಬೆಳಕಿಗೆ ಬಂದಿದೆ.