Pakistan Deputy PM Admission : ಭಾರತದಿಂದ ಪಾಕಿಸ್ತಾನದ ವಾಯುಪಡೆಯ ನೆಲೆಗಳು ಧ್ವಂಸಗೊಂಡಿದ್ದು ಸತ್ಯ! – ಪಾಕಿಸ್ತಾನದ ಉಪಪ್ರಧಾನಿಯಿಂದ ಸ್ವೀಕೃತಿ

ಪಾಕಿಸ್ತಾನದ ಉಪಪ್ರಧಾನಿಯಿಂದ ಮೊದಲ ಬಾರಿಗೆ ಸ್ವೀಕಾರ

ಇಸ್ಲಾಮಾಬಾದ (ಪಾಕಿಸ್ತಾನ) – ನಾವು ಪ್ರಧಾನಿ ಶೆಹಬಾಜ ಷರೀಫ ಅವರೊಂದಿಗೆ ಮಾತನಾಡಿದ್ದೆವು. ಅವರು ಸೇನೆಗೆ ಸಿದ್ಧವಾಗಿರಲು ಹೇಳಿದ್ದರು. ನಾವು ಏನು ಮಾಡಬೇಕು ಎಂಬುದರ ಬಗ್ಗೆ ಎಲ್ಲವನ್ನೂ ನಿರ್ಧರಿಸಲಾಗಿತ್ತು. ಮೇ 6-7 ರ ರಾತ್ರಿ ನಾವು ಭಾರತಕ್ಕೆ ಪ್ರತ್ಯುತ್ತರ ನೀಡಲು ಸಿದ್ಧತೆ ನಡೆಸುತ್ತಿದ್ದೆವು. ಅದೇ ಸಮಯದಲ್ಲಿ ಭಾರತ ಮತ್ತೆ ದಾಳಿ ಮಾಡಿತು. ನೂರ ಖಾನ್ ಹಾಗೂ ಶೋರಕೋಟನಲ್ಲಿರುವ ವಾಯುಪಡೆಯ ನೆಲೆಗಳನ್ನು ಧ್ವಂಸಗೊಳಿಸಿತು ಎಂದು ಪಾಕಿಸ್ತಾನದ ಉಪಪ್ರಧಾನಿ ಇಶಾಕ ದಾರ್ ಅವರು ಇದೇ ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ. ಅವರು ‘ಜಿಯೋ ನ್ಯೂಸ್’ ವಾಹಿನಿಯಲ್ಲಿ ಮಾತನಾಡುತ್ತಿದ್ದರು. ಈ ಹಿಂದೆ ಪಾಕಿಸ್ತಾನ ಸರಕಾರ ಮತ್ತು ಪಾಕಿಸ್ತಾನ ಸೇನೆ ಭಾರತದ ದಾಳಿಯ ವರದಿಗಳನ್ನು ಅಲ್ಲಗಳೆದಿದ್ದವು.

ಇಸಾಕ ದಾರ್ ಮಾತು ಮುಂದುವರೆಸಿ, “ಮೇ 6-7 ರ ರಾತ್ರಿ ದಾಳಿಯ 45 ನಿಮಿಷಗಳ ನಂತರ ಸೌದಿ ಅರೇಬಿಯಾದ ರಾಜಕುಮಾರ ಸಲ್ಮಾನ್ ಅವರು ದೂರವಾಣಿ ಕರೆ ಮಾಡಿ, ‘ನೀವು ಒಪ್ಪಿದರೆ, ನಾನು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರೊಂದಿಗೆ ಮಾತನಾಡಿ, ಪಾಕಿಸ್ತಾನ ಕದನ ವಿರಾಮಕ್ಕೆ ಸಿದ್ಧವಾಗಿದೆ ಮತ್ತು ನೀವು ಸಹ ನಿಲ್ಲಿಸಬೇಕು ಎಂದು ಹೇಳುತ್ತೇನೆ’ ಎಂದರು. ಅದಕ್ಕೆ ನಾನು ‘ಹೌದು, ನೀವು ಖಂಡಿತವಾಗಿಯೂ ಅವರೊಂದಿಗೆ ಮಾತನಾಡಿ’ ಎಂದು ಹೇಳಿದೆ. ಇದರ ನಂತರ ಪ್ರಿನ್ಸ್ ಜೈಶಂಕರ್ ಅವರೊಂದಿಗೆ ಮಾತನಾಡಿ ನನಗೆ ಕರೆ ಮಾಡಿದರು,” ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಸೌದಿ ಅರೇಬಿಯಾದ ರಾಜಕುಮಾರ ಭಾರತದೊಂದಿಗೆ ಮಾತನಾಡಿ ಕದನ ವಿರಾಮಕ್ಕೆ ಸಹಾಯ ಮಾಡಿರುವ ಬಗ್ಗೆ ಮಾಹಿತಿ