CIC Uday Mahurkar Statement : ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಹುಟ್ಟುವುದಾದರೆ, ಅದು ಸನಾತನ ಸಂಸ್ಥೆಯ ಮೂಲಕವೇ ಆಗುತ್ತದೆ!

ಕೇಂದ್ರ ಮಾಹಿತಿ ಆಯುಕ್ತರಾದ ಉದಯ ಮಾಹೂರ್ಕರ್ ಅವರು ಸನಾತನ ಸಂಸ್ಥೆಯ ಗೋವಾದ ರಾಮನಾಥಿಯಲ್ಲಿರುವ ಆಶ್ರಮಕ್ಕೆ ಭೇಟಿ ನೀಡಿದ ನಂತರ ಪೋಸ್ಟ್

ಮುಂಬಯಿ – “ದೇವರ ಕೃಪೆಯಿಂದ ನಮ್ಮ ಪವಿತ್ರ ಭೂಮಿಯಲ್ಲಿ ಮಹಾರಾಣಾ ಪ್ರತಾಪ್ ಅಥವಾ ಛತ್ರಪತಿ ಶಿವಾಜಿ ಮಹಾರಾಜರು ಮತ್ತೆ ಹುಟ್ಟುವುದಾದರೆ, ಅದು ಸನಾತನ ಸಂಸ್ಥೆಯ ಮೂಲಕವೇ ಆಗುತ್ತದೆ” ಎಂದು ಮಾಜಿ ಕೇಂದ್ರ ಮಾಹಿತಿ ಆಯುಕ್ತರು ಮತ್ತು ‘ಸೇವ್ ಕಲ್ಚರ್ ಸೇವ್ ನೇಷನ್’ ಚಳುವಳಿಯ ಸಂಸ್ಥಾಪಕ ಶ್ರೀ. ಉದಯ ಮಾಹೂರ್ಕರ್ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ. ಗೋವಾದ ರಾಮನಾಥಿಯಲ್ಲಿರುವ ಸನಾತನ ಸಂಸ್ಥೆಯ ಆಶ್ರಮಕ್ಕೆ ಭೇಟಿ ನೀಡಿದ ನಂತರ ಅವರು ಈ ಪೋಸ್ಟ್ ಮಾಡಿದ್ದಾರೆ.

ಹಿಂದೂತ್ವದ ಆದರ್ಶ ಮತ್ತು ಸಾತ್ವಿಕತೆಯ ಬಗೆಗಿನ ದೃಢ ಬದ್ಧತೆಯು ಪ್ರಮುಖ ಕಾರಣಗಳಾಗಿವೆ, ಇದರಿಂದಾಗಿ ವಿಭಜಿತ ಭಾರತದಲ್ಲಿ ಅಸ್ತಿತ್ವದಲ್ಲಿರುವ ಪ್ರತಿಯೊಂದು ಪಕ್ಷ ಅಥವಾ ಸಂಘಟನೆಯು (ಪ್ಯಾನ್-ಇಸ್ಲಾಮಿಸ್ಟ್‌ಗಳು ಮತ್ತು ಕಮ್ಯುನಿಸ್ಟ್‌ಗಳು ಸೇರಿದಂತೆ) ಸಂಸ್ಥೆಯನ್ನು ನಿಷೇಧಿಸಲು ಬಯಸುತ್ತವೆ ಎಂದು ಶ್ರೀ. ಮಾಹೂರ್ಕರ್ ಅವರು ಮುಂದೆ ಬರೆದಿದ್ದಾರೆ.