ಅಸ್ಸಾಂನಲ್ಲಿ ಕಾಳಿಮಾತೆಯ ದೇವಸ್ಥಾನದ ಬಳಿ ಮುಸಲ್ಮಾನರಿಂದ ಹೇಯ ಕೃತ್ಯ !

೫ ಮುಸಲ್ಮಾನರ ಬಂಧನ

ಗೌಹತ್ತಿ (ಅಸ್ಸಾಂ) – ಜೂನ್ 14 ರಂದು ಅಸ್ಸಾಂನ ಲಖಿಂಪುರದಲ್ಲಿ ಕಾಳಿಮಾತೆಯ ದೇವಸ್ಥಾನದ ಆವರಣದಲ್ಲಿ ಮುಸಲ್ಮಾನರು ಹಸುವಿನ ಕತ್ತರಿಸಿದ ತಲೆಯನ್ನು ಎಸೆದಿದ್ದರಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೂ ಮೊದಲು ಧುಬರಿಯಲ್ಲಿ ಇಂತಹದೇ ಘಟನೆ ನಡೆದು ಹಿಂಸಾಚಾರಕ್ಕೆ ಕಾರಣವಾಗಿತ್ತು. ಲಖಿಂಪುರದ ಪ್ರಕರಣದಲ್ಲಿ ಪೊಲೀಸರು ಐವರು ಮುಸಲ್ಮಾನರನ್ನು ಬಂಧಿಸಿದ್ದಾರೆ. ಬೊದಿರ ಅಲಿ, ಹಜರತ ಅಲಿ, ತಾರಾ ಮಿಯಾ, ಶಜಾಮಲ ಮಿಯಾ ಮತ್ತು ಜಹಾಂಗೀರ ಆಲಂ ಇವರು ಬಂಧಿತ ಆರೋಪಿಗಳ ಹೆಸರು. ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು ಈ ಬಗ್ಗೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಸ್ಥಳೀಯ ಹಿಂದೂಗಳ ಪ್ರಕಾರ, ಈ ಹಿಂದೆಯೂ ಮುಸಲ್ಮಾನರು ಇದೇ ರೀತಿಯ ಕೃತ್ಯ ಎಸಗಿದ್ದರು. ಇಲ್ಲಿನ ವಾರ್ಡ್ ನಂಬರ್ 10 ರಲ್ಲಿರುವ ದೇವಸ್ಥಾನದ ಆವರಣದಲ್ಲಿ ಗೋಮಾಂಸ ಎಸೆಯಲಾಗಿತ್ತು. ಆಗ ಜನರು ದೂರು ನೀಡಿದ ನಂತರ ಪೊಲೀಸರು ತನಿಖೆ ಆರಂಭಿಸಿದ್ದರು.

ಸಂಪಾದಕೀಯ ನಿಲುವು

  • ಇದರ ಬದಲು ಮಸೀದಿಯ ಎದುರು ಯಾರಾದರೂ ನಿಷಿದ್ಧ ಪ್ರಾಣಿಯ ಅವಶೇಷಗಳನ್ನು ಯಾರಾದರೂ ಇಟ್ಟಿದ್ದರೆ ಇಷ್ಟೊತ್ತಿಗೆ ಕೇವಲ ಅಸ್ಸಾಂನಲ್ಲಿ ಮಾತ್ರವಲ್ಲದೆ, ದೇಶಾದ್ಯಂತ ಜ್ವಾಲಾಮುಖಿ ಹೊರಹೊಮ್ಮುತ್ತಿತ್ತು !
  • ಕೆಲವು ದಿನಗಳ ಹಿಂದೆ ಧುಬರಿಯಲ್ಲಿ ದೇವಸ್ಥಾನದ ಎದುರು ಗೋಮಾಂಸ ಎಸೆದಿರುವ ಘಟನೆಯಿಂದ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾರವರು, ಗೋಮಾಂಸ ಎಸೆಯುವವರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಆದೇಶ ನೀಡಿದ್ದರು. ಇದರ ಹಿನ್ನೆಲೆಯಲ್ಲಿ ಲಖಿಪುರನಲ್ಲಿ ಇಂತಹದೇ ಘಟನೆ ಘಟಿಸುತ್ತದೆ, ಇದರಿಂದ ಮುಸಲ್ಮಾನರು ಎಷ್ಟು ಉದ್ಧಟರಾಗಿದ್ದಾರೆ ? ಎಂಬುದೇ ಕಂಡುಬರುತ್ತಿದೆ !