Sant Mahaparishad : ಬೆಂಗಳೂರಿನಲ್ಲಿ 1 ಸಾವಿರಕ್ಕೂ ಹೆಚ್ಚು ಸಂತರ ಉಪಸ್ಥಿತಿಯಲ್ಲಿ ಭಾರತೀಯ ಸಂತ ಮಹಾಪರಿಷತ್!

ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ವಿಜಯೇಂದ್ರ ಸರಸ್ವತಿ ಸ್ವಾಮಿ, ಪೂಜ್ಯ ಗೋವಿಂದದೇವ ಗಿರಿ, ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂಜ್ಯ ರಾಮಾನಂದ ಗೌಡ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿ.

ಸಭೆಯಲ್ಲಿ ಉಪಸ್ಥಿತ ಸಂತರು

ಬೆಂಗಳೂರು – ಜೂನ್ 16 ರಂದು ಇಲ್ಲಿ ಭಾರತೀಯ ಸಂತ ಮಹಾಪರಿಷತ್ ವತಿಯಿಂದ ಸಾಧು-ಸಂತರ ಸಭೆ ನಡೆಯಿತು. ಹಿಂದೂ ಧರ್ಮದ ಮೇಲಿನ ಆಕ್ರಮಣಗಳನ್ನು ತಡೆಯಲು ಮತ್ತು ಹಿಂದೂ ಮಕ್ಕಳಿಗೆ ಹಿಂದೂ ಧರ್ಮದ ಶಿಕ್ಷಣ ನೀಡಲು ಭಾರತದಾದ್ಯಂತ 1 ಸಾವಿರಕ್ಕೂ ಹೆಚ್ಚು ಸಂತರು ಈ ಸಭೆಯಲ್ಲಿ ಒಗ್ಗೂಡಿದ್ದರು.

(1) ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂಜ್ಯ ರಾಮಾನಂದ ಗೌಡ

ಈ ಸಭೆಯಲ್ಲಿ ಚಿತ್ರಕೂಟದ ಸ್ವಾಮಿ ರಾಮಭದ್ರಾಚಾರ್ಯ, ಕಾಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ಸ್ವಾಮಿ ವಿಜಯೇಂದ್ರ ಸರಸ್ವತಿ ಸ್ವಾಮಿ, ಪೂಜ್ಯ ಗೋವಿಂದದೇವ ಗಿರಿ, ರಾಮಚಂದ್ರಪುರ ಮಠದ ರಾಘವೇಶ್ವರ ಸ್ವಾಮಿ, ಸುತ್ತೂರಿನ ದೇಶಿಕೇಂದ್ರ ಸ್ವಾಮಿ, ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮಿ, ಕೈಲಾಸ ಆಶ್ರಮದ ಜಯೇಂದ್ರಪುರಿ ಮಹಾಸ್ವಾಮಿ, ಆದಿಚುಂಚನಗಿರಿಯ ನಿರ್ಮಲಾನಂದ ಮಹಾಸ್ವಾಮಿ ಮತ್ತು ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತ ಪೂಜ್ಯ ರಾಮಾನಂದ ಗೌಡ ಅವರು ಭಾಗವಹಿಸಿದ್ದರು. ಇದರ ಜೊತೆಗೆ ಜಪಾನ್ ಮತ್ತು ಅಮೆರಿಕ ದೇಶಗಳ ಬೌದ್ಧ ಹಾಗೂ ಜೈನ ಸಂತರು ಕೂಡ ಇದರಲ್ಲಿ ಭಾಗವಹಿಸಿದ್ದರು.