Israel Iran War : ಇಸ್ರೇಲ್ ನಿಂದ ಸತತ ನಾಲ್ಕನೇ ದಿನವೂ ಇರಾನ್ ಮೇಲೆ ದಾಳಿ

  • ಇರಾನ್ ದಾಳಿಯಿಂದ ಇಸ್ರೇಲ್‌ನಲ್ಲಿ 22 ನಾಗರಿಕರ ಸಾವು

  • ಇರಾನ್ ನಲ್ಲಿ ಇಲ್ಲಿಯವರೆಗೆ 224 ನಾಗರಿಕರ ಸಾವು

ಟೆಲ್ ಅವಿವ್ (ಇಸ್ರೇಲ) – ಇಸ್ರೇಲ್ ಸತತ ನಾಲ್ಕನೇ ದಿನ, ಅಂದರೆ ಜೂನ್ 16 ರಂದು ಬೆಳಗ್ಗೆ ಇರಾನ್ ಮೇಲೆ ಕ್ಷಿಪಣಿಗಳ ಮೂಲಕ ಆಕ್ರಮಣ ಮಾಡಿದೆ. ಇದರಲ್ಲಿ 8 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇನ್ನೊಂದೆಡೆ, ಇರಾನ್ ಪ್ರತ್ಯುತ್ತರವಾಗಿ ಇಸ್ರೇಲ್ ಮೇಲೆ ನಡೆಸಿದ ದಾಳಿಯಲ್ಲಿ 22 ಮಂದಿ ಸಾವನ್ನಪ್ಪಿದ್ದು, 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್ ಆಕ್ರಮಣದಲ್ಲಿ ಇರಾನ್ ನಲ್ಲಿ ಇಲ್ಲಿಯವರೆಗೆ 224 ಮಂದಿ ಸಾವನ್ನಪ್ಪಿದ್ದು, 1 ಸಾವಿರ 277 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅದೇ ಸಮಯದಲ್ಲಿ, ಅಮೆರಿಕಾ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಗುಂಪು ಇರಾನ್ ನಲ್ಲಿ 406 ಮಂದಿ ಸಾವನ್ನಪ್ಪಿದ್ದಾರೆ ಎಂದು ದಾವೆ ಮಾಡಿದೆ.

ಇಸ್ರೇಲ್ ಮೇಲೆ ಅಣುಬಾಂಬ್ ಹಾಕುವ ಇರಾನಿನ ಹೇಳಿಕೆಯನ್ನು ನಿರಾಕರಿಸಿದ ಪಾಕಿಸ್ತಾನ

ಇರಾನಿನ ರೆವಲ್ಯೂಷನರಿ ಗಾರ್ಡ್ ಕಮಾಂಡರ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಜನರಲ್ ಮೊಹ್ಸೆನ್ ರಾಜಾಯಿ ಅವರು, ಇಸ್ರೇಲ್ ಇರಾನ್ ಮೇಲೆ ಅಣುಬಾಂಬ್ ಹಾಕಿದರೆ, ಪಾಕಿಸ್ತಾನವೂ ಇಸ್ರೇಲ್ ಮೇಲೆ ಅಣುಬಾಂಬ್ ಹಾಕಿ ಪ್ರತಿದಾಳಿ ನಡೆಸುತ್ತದೆ ಎಂದು ದಾವೆ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಈ ದಾವೆಯನ್ನು ನಿರಾಕರಿಸಿದರು. ಪಾಕಿಸ್ತಾನ ಈ ರೀತಿ ಏನನ್ನೂ ಹೇಳಿಲ್ಲ ಎಂದು ಅವರು ಹೇಳಿದರು. ಆದಾಗ್ಯೂ, ಪಾಕಿಸ್ತಾನವು ಇರಾನ್ ನೊಂದಿಗಿದೆ ಎಂದು ಅವರು ತಿಳಿಸಿದರು.

‘ಮೊಸಾದ್’ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇರಾನ್ ನಲ್ಲಿ ಒಬ್ಬ ವ್ಯಕ್ತಿಗೆ ಗಲ್ಲು ಶಿಕ್ಷೆ!

ಇಸ್ರೇಲ್ ನ ಗುಪ್ತಚರ ಸಂಸ್ಥೆ ‘ಮೊಸಾದ್’ಗಾಗಿ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಇರಾನ್ ಇಸ್ಮಾಯಿಲ್ ಫೇಕ್ರಿ ಹೆಸರಿನ ಒಬ್ಬ ವ್ಯಕ್ತಿಗೆ ಗಲ್ಲು ಶಿಕ್ಷೆ ವಿಧಿಸಿದೆ. ಇರಾನ್ ಈ ವಾರ ಬೇಹುಗಾರಿಕೆಯ ಆರೋಪದ ಮೇಲೆ 9 ಜನರನ್ನು ಬಂಧಿಸಿದೆ.

ಭಾರತವು ಇರಾನ್‌ಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಿದೆ

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ನಂತರ ಭಾರತೀಯ ವಿದೇಶಾಂಗ ಸಚಿವಾಲಯವು ಒಂದು ಮನವಿಯನ್ನು ಜಾರಿ ಮಾಡಿ, ಇರಾನ್ ನಲ್ಲಿ ಸುಮಾರು 10 ಸಾವಿರ ಭಾರತೀಯರಿದ್ದು, ಅವರಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಈ ಭಾರತೀಯರನ್ನು ಇರಾನ್ ನಿಂದ ಸುರಕ್ಷಿತವಾಗಿ ಇತರ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದೆ.