|

ಬೆಂಗಳೂರು – ‘ಇಂಡಿಯನ್ ಪ್ರೀಮಿಯರ್ ಕ್ರಿಕೆಟ್ ಲೀಗ್’ ಸ್ಪರ್ಧೆ ಗೆದ್ದ ನಂತರ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (ಆರ್‌ಸಿಬಿ) ತಂಡ ಹಾಗೂ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲು ಯಾವುದೇ ಅನುಮತಿ ಪಡೆದಿರಲಿಲ್ಲ ಮತ್ತು ಆಯೋಜಕರು ಸಾಮಾಜಿಕ ಮಾಧ್ಯಮಗಳ ಮೂಲಕ ಇಡೀ ಜಗತ್ತಿಗೆ ಈ ವಿಜಯೋತ್ಸವವನ್ನು ಆಚರಿಸಲು ಆಹ್ವಾನಿಸಿದ್ದರು ಎಂದು ರಾಜ್ಯ ಸರಕಾರವು ಕರ್ನಾಟಕ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ಈ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಯ ವಿಚಾರಣೆಯ ವೇಳೆ ಸರಕಾರ ತನ್ನ ಹೇಳಿಕೆಯನ್ನು ಮಂಡಿಸಿತು.

ಸರಕಾರದ ಹಿರಿಯ ನ್ಯಾಯವಾದಿ ಶಶಿ ಕಿರಣ್ ಶೆಟ್ಟಿ ಅವರು, ಆರ್‌ಸಿಬಿ ಎಲ್ಲಾ ಅಭಿಮಾನಿಗಳಿಗೆ ಟಿಕೆಟ್ ಬೆಲೆ ಎಷ್ಟು ಅಥವಾ ಪ್ರವೇಶಕ್ಕೆ ಯಾವ ನಿಯಮಗಳು ಇರುತ್ತವೆ ಎಂಬುದನ್ನು ಸ್ಪಷ್ಟಪಡಿಸದೆ ವಿಜಯೋತ್ಸವದಲ್ಲಿ ಭಾಗವಹಿಸಲು ಆಹ್ವಾನ ನೀಡಿತ್ತು, ಮೈದಾನದ ಸಾಮರ್ಥ್ಯ ಕೇವಲ 33 ಸಾವಿರ ಜನರದ್ದಾಗಿತ್ತು; ಆದರೆ ಮೂರೂವರೆ ಲಕ್ಷದಿಂದ ನಾಲ್ಕು ಲಕ್ಷದಷ್ಟು ಜನರು ಮೈದಾನದ ಪ್ರವೇಶ ದ್ವಾರದ ಹೊರಗೆ ಸೇರಿದ್ದರು. ‘ಎಲ್ಲಾ ಅಭಿಮಾನಿಗಳನ್ನು ಸಂಭ್ರಮಿಸಲು ಆಹ್ವಾನಿಸಲಾಗಿದೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗಿತ್ತು. ಇದರಿಂದಲೇ ದೊಡ್ಡ ಪ್ರಮಾಣದ ಗೊಂದಲ ಉಂಟಾಯಿತು ಮತ್ತು ಜನರು ಸಾವನ್ನಪ್ಪಿದರು, ಅಲ್ಲದೆ ಅನೇಕರು ಗಾಯಗೊಂಡರು. ಆಯೋಜಕರು ಕನಿಷ್ಠ 7 ದಿನಗಳ ಮುಂಚಿತವಾಗಿ ಮೆರವಣಿಗೆ ಮತ್ತು ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಪರವಾನಗಿಗಳಿಗಾಗಿ ಅರ್ಜಿ ಸಲ್ಲಿಸದೆ ಕಾನೂನನ್ನು ಉಲ್ಲಂಘಿಸಿದ್ದಾರೆ, ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವುಇವರಿಬ್ಬರೂ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸಿದಾಗ ರಾಜ್ಯ ಸರಕಾರ ಏನು ಮಾಡಿದೆ ?, ಎಂಬುದಕ್ಕೂ ಜನರಿಗೆ ಉತ್ತರ ಸಿಗಬೇಕು! ಅಲ್ಲದೆ, ಈ ಕಾರ್ಯಕ್ರಮದ ವೇಳೆ ಹೊರಗೆ ಜನರು ಸಾವನ್ನಪ್ಪಿದ್ದರೂ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಏಕೆ ಹಾಜರಿದ್ದರು ಎಂಬುದನ್ನೂ ಹೇಳಬೇಕು! |
ಆಮೀರ್ ಖಾನ್ಗೆ ಜೀವ ಬೆದರಿಕೆ; ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಸಂದೇಶ : Love Jihad
ವಿಠ್ಠಲ-ರುಕ್ಮಿಣಿ ಮೂರ್ತಿಗೆ ರಾಸಾಯನಿಕ ಲೇಪನಕ್ಕೆ ಗ್ರೀನ್ ಸಿಗ್ನಲ್ : Pandharpur Temple News
ಪ್ರೇಮದ ನೆಪದಲ್ಲಿ ಕಿರುಕುಳ ಆರೋಪ; ಸುಫಿಯಾನ್ ಖಾನ್ ವಿರುದ್ಧ ದೂರು : Sufiyan Khan Case
Vande Mataram : ‘ವಂದೇ ಮಾತರಂ’ಗೆ ಅವಮಾನ ಮಾಡಿದರೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ !
ಹೆರಿಗೆಯಾದ ಮಹಿಳೆಗೆ ತಪ್ಪು ರಕ್ತ; ಜೀವದೊಂದಿಗೆ ಆಸ್ಪತ್ರೆಯ ಚೆಲ್ಲಾಟ! : Hospital Blood Error
ಪ್ಲಾಸ್ಟಿಕ್ ನೋಟುಗಳನ್ನು ಚಲಾವಣೆಗೆ ತರುವ ವಿಚಾರದಲ್ಲಿದೆ ರಿಸರ್ವ್ ಬ್ಯಾಂಕ್