ಆದರ್ಶ ಹಿಂದೂ ರಾಷ್ಟ್ರದಲ್ಲಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮ ಅಭ್ಯಾಸಗಳನ್ನು ಇಟ್ಟುಕೊಳ್ಳಿರಿ !

ಆದರ್ಶ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ನಾವು ನಮ್ಮ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಸಾಧಿಸಬೇಕು. ಅದರಲ್ಲಿನ ಒಂದೆಂದರೆ ಆರೋಗ್ಯ ! ಶರೀರ ಮತ್ತು ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ, ಸಾಧನೆಯನ್ನು ಮಾಡಿ ಮನುಷ್ಯಜನ್ಮದ ಗುರಿಯನ್ನು ನಾವು ಪೂರ್ಣಗೊಳಿಸಲು ಸಾಧ್ಯವಿದೆ. ಆಂಗ್ಲ ಭಾಷೆಯಲ್ಲಿ ಒಂದು ನಾಣ್ನುಡಿ ಇದೆ ‘ಅಟಎಚಿಟಿಟೈಟಿಎಸ್ಸ್ ಇಸ್ ಟಿಎ ಣಒ ಉಒಜಟೈಟಿಎಸ್ಸ್’ ಅಂದರೆ ‘ಎಲ್ಲಿ ಸ್ವಚ್ಛತೆ ಇರುತ್ತದೆಯೋ, ಅಲ್ಲಿಯೇ ದೇವರ ವಾಸವಿರುತ್ತದೆ.’ ಭಾರತೀಯ ಸಂಸ್ಕೃತಿಯಲ್ಲಿಯೂ ಇದೇ ಇದೆ. ಇದಕ್ಕಾಗಿ ಭಾರತೀಯರು ಮತ್ತು ವಿಶೇಷವಾಗಿ ಸಾಧಕರು ಸ್ವಚ್ಛತೆಯ ನಿಯಮಗಳನ್ನು ಪಾಲಿಸಬೇಕು. ಆ ಬಗ್ಗೆ ಗೊತ್ತಿಲ್ಲದವರಿಗೆ ಅದನ್ನು ಕಲಿಸಬೇಕು. ಅಯೋಗ್ಯ ಅಭ್ಯಾಸಗಳನ್ನು ಬಿಟ್ಟು ಆರೋಗ್ಯ ಶಾಸ್ತ್ರದ ಪ್ರಕಾರ ಯಾವುದು ಸರಿ ಇದೆಯೋ ಅದನ್ನು ಮಾಡಬೇಕು. ಇದುವೇ ಈ ಲೇಖನ ಬರೆಯುವುದರ ಹಿಂದಿನ ಉದ್ದೇಶವಾಗಿದೆ. ಈ ಲೇಖನದ ಮೂಲಕ ನಾವು ಅಯೋಗ್ಯ ಕೃತಿ ಮತ್ತು ಯೋಗ್ಯ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.

ಡಾ. ರೂಪಾಲಿ ಭಾಟಕರ

೧. ಬೆಳಗ್ಗೆ ಎದ್ದ ನಂತರ ಏನು ಮಾಡಬೇಕು ?

ಅ. ಪ್ರತಿದಿನ ಬೆಳಗ್ಗೆ ಎದ್ದ ನಂತರ ಕಣ್ಣುಗಳ ಮೇಲೆ ತಣ್ಣೀರು ಸಿಂಪಡಿಸಿ ನಂತರ ತೋರುಬೆರಳಿನಿಂದ ಕಣ್ಣುಗಳಲ್ಲಿನ ಕೊಳೆ ಯನ್ನು ತೆಗೆಯಬೇಕು.

ಆ. ತೋರುಬೆರಳಿನಿಂದ ಮೂಗಿನ ಹೊಳ್ಳೆಗಳನ್ನು ಸ್ವಚ್ಛಗೊಳಿಸ ಬೇಕು. ಅಗತ್ಯವಿದ್ದಲ್ಲಿ ಮೂಗನ್ನು ಸಿಂಡರಿಸಿ ಸ್ವಚ್ಛಗೊಳಿಸಬಹುದು. ಎಂದಿಗೂ ಇತರÀರ ಮುಂದೆ ಮೂಗಿನಲ್ಲಿ ಬೆರಳು ಹಾಕಬಾರದು. ಹಾಕಿದರೆ ತಕ್ಷಣ ಸಾಬೂನು ಹಚ್ಚಿ ಕೈ ತೊಳೆಯಬೇಕು.

ಇ. ಬೆರಳುಗಳಿಂದ ಅಥವಾ ನಾಲಿಗೆಯನ್ನು ಉಜ್ಜುವ ಸಾಧನದಿಂದ ನಾಲಿಗೆಯನ್ನು ಉಜ್ಜಬೇಕು. ಇದರಿಂದ ಬಾಯಿಯಿಂದ ಬರುವ ದುರ್ವಾಸನೆಯನ್ನು ತಪ್ಪಿಸಬಹುದು. ಇದನ್ನು ಮಾಡುವಾಗ ಜೋರಾಗಿ ಸದ್ದು ಮಾಡಬಾರದು, ಇಲ್ಲದಿದ್ದರೆ ಜೊತೆಗಿರುವವರಿಗೆ ತೊಂದರೆಯಾಗಬಹುದು.

ಈ. ಕೆಲವರ ಬಾಯಿಗೆ ದುರ್ವಾಸನೆ ಬರುತ್ತದೆ. ಆದ್ದರಿಂದ ಮಾತನಾಡುವಾಗ ಇತರರಿಗೆ ಅದರಿಂದ ತೊಂದರೆಯಾಗುತ್ತದೆ. ಮನೆಮದ್ದಾಗಿ ಟೂಥಪೆಸ್ಟ್ ಅಥವಾ ದಂತಮಂಜನವನ್ನು ಬಳಸಿದ ನಂತರ ಕಲ್ಲು ಉಪ್ಪಿನಿಂದ ಒಸಡು ಮತ್ತು ಹಲ್ಲುಗಳನ್ನು ಬೆರಳುಗಳಿಂದ ಉಜ್ಜಬೇಕು. ಆದರೂ ದುರ್ವಾಸನೆ ಹೋಗದಿದ್ದರೆ ದಂತವೈದ್ಯರ ಬಳಿ ಹೋಗಬೇಕು. ಕೆಲವೊಮ್ಮೆ ಹಲ್ಲುಗಳು ಸರಿಯಾಗಿದ್ದರೂ ಹೊಟ್ಟೆಯಲ್ಲಿ ಹುಳಗಳು (ಬ್ಯಾಕ್ಟೇರಿಯಾ) ಅಥವಾ ಬೇರೆ ಕೆಲವು ಕಾಯಿಲೆಗಳಿಂದ ದುರ್ವಾಸನೆಯ ತೊಂದರೆಯಾಗಬಹುದು.

ಉ. ಟೂಥಪೇಸ್ಟ್ ಅಥವಾ ದಂತಮಂಜನವನ್ನು ಬಳಸಿ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮೊದಲು ಹೀಗೆ ೨ ಬಾರಿ ಹಲ್ಲುಗಳನ್ನು ಸ್ವಚ್ಛಗೊಳಿಸಬೇಕು. ರಾತ್ರಿ ಹಲ್ಲುಜ್ಜಿದ ನಂತರ ಮತ್ತೆ ಏನನ್ನೂ ತಿನ್ನಬಾರದು. ಹಾಲಿನ ಹಲ್ಲುಗಳಿರುವಾಗಲೇ ಮಕ್ಕಳಿಗೆ ಎರಡು ಬಾರಿ ಹಲ್ಲುಜ್ಜುವ ಅಭ್ಯಾಸವನ್ನು ಮಾಡಿದರೆ ನಂತರ ಹಲ್ಲು ಹುಳುಕಾಗುವುದು ಕಡಿಮೆಯಾಗುತ್ತದೆ ಮತ್ತು ಹೊಸ ಹಲ್ಲುಗಳೂ ಚೆನ್ನಾಗಿ ಬರುತ್ತವೆ. ಹಲ್ಲುಗಳಲ್ಲಿ ಆಹಾರಕಣಗಳು ಸಿಲುಕಿದರೆ ‘ಟೂಥ್‌ಪಿಕ್‌ (ಕಡ್ಡಿ) ತೆಗೆದುಕೊಂಡು ತೆಗೆಯಬೇಕು. ‘ಡೆಂಟಲ್‌ ಪ್ಲಾಸ್’ (ಹಲ್ಲುಗಳಲ್ಲಿ ಸಿಕ್ಕಿಕೊಂಡಿರುವ ಆಹಾರದ ಕಣಗಳನ್ನು ತೆಗೆಯಲು ದಾರದ ಸ್ವರೂಪದ ಉಪಕರಣ) ಅನ್ನು ಬಳಸಿದರೆ ಹಲ್ಲುಗಳು ಸ್ವಚ್ಛವಾಗಿರುತ್ತವೆ. ಕಾರಣವಿಲ್ಲದೇ ಬಾಯಿಯಲ್ಲಿ ಬೆರಳು ಹಾಕಬಾರದು ಮತ್ತು ಹಾಕಿದರೆ ಕೈ ತೊಳೆದುಕೊಳ್ಳಬೇಕು.

ಊ. ಸ್ನಾನ ಮಾಡುವಾಗ ಪ್ರತಿದಿನ ಬೆರಳಿನಿಂದ ಹೊಕ್ಕುಳಿನ ಕೊಳೆಯನ್ನು ನಿಧಾನವಾಗಿ ತೆಗೆಯಬೇಕು.

ಎ. ಒಳಉಡುಪುಗಳು ಸ್ವಚ್ಛ ಮತ್ತು ಒಣಗಿರಬೇಕು. ಒದ್ದೆ ಬಟ್ಟೆ ಗಳನ್ನು ಧರಿಸಿದರೆ ಸೋಂಕು(ಫಂಗಲ್‌ ಇನಫೆಕ್ಶನ) ಉಂಟಾಗ ಬಹುದು. ಸಾಧ್ಯವಾದಷ್ಟು ಒಳಉಡುಪುಗಳು ಹತ್ತಿಯ(ಕಾಟನ್‌)ದ್ದಾಗಿರಬೇಕು. ನೈಲಾನ್‌ದ್ದಾಗಿರಬಾರದು; ಏಕೆಂದರೆ ಅದರಲ್ಲಿ ಬೆವರು ಹೀರಲ್ಪಡುವುದಿಲ್ಲ. ಸಾಧ್ಯವಿದ್ದರೆ ಸ್ನಾನದ ನಂತರ ಕಂಕುಳದಲ್ಲಿ, ಹೊಟ್ಟೆಯ ಮೇಲೆ, ಬೆನ್ನಿನ ಮೇಲೆ, ಮಹಿಳೆಯರು ಸ್ತನಗಳ ಕೆಳಗೆ ಮತ್ತು ತೊಡೆಯ ಪಕ್ಕದಲ್ಲಿ ‘ಟಾಲ್ಕಮ್‌ ಪೌಡರ್’ ಹಚ್ಚಿಕೊಳ್ಳಬೇಕು, ಅಂದರೆ ಆ ಜಾಗ ಒಣಗಿರುತ್ತದೆ.

ಏ. ಪ್ರತಿದಿನ ತೊಳೆದ ಬಟ್ಟೆಗಳನ್ನು ಧರಿಸಬೇಕು. ಬೆವರು ಬಂದ ಬಟ್ಟೆಗಳನ್ನು ತೊಳೆಯದೇ ಪುನಃ ಧರಿಸಿದರೆ ಅವುಗಳ ದುರ್ವಾಸನೆ ಬೇರೆ ಬಟ್ಟೆಗಳಿಗೂ ಬರುತ್ತದೆ. ಪ್ರತಿದಿನ ಪ್ರಯಾಣಿಸುವವರು ಅಥವಾ ಆಸ್ಪತ್ರೆಯಲ್ಲಿ ಕೆಲಸ ಮಾಡುವವರು ಪ್ರತಿದಿನ ಬಟ್ಟೆಗಳನ್ನು ತೊಳೆಯಬೇಕು.

೨. ಕೂದಲುಗಳ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು ?

ಅ. ಹಿಂದೆ ಕೂದಲುಗಳಿಗೆ ಪ್ರತಿದಿನ ಕೊಬ್ಬರಿಎಣ್ಣೆಯನ್ನು ಹಚ್ಚಿ ಕೊಳ್ಳುತ್ತಿದ್ದರು. ಅದರಿಂದ ಕೂದಲುಗಳಿಗೆ ಪೋಷಣೆ ದೊರೆತು ಅವು ಚೆನ್ನಾಗಿ ಬೆಳೆಯುತ್ತಿದ್ದವು. ಸದ್ಯ ಆಧುನಿಕ ವಿಚಾರಸರಣಿ ಯಿಂದಾಗಿ ಎಣ್ಣೆ ಹಚ್ಚಿಕೊಳ್ಳುವ ರೂಢಿಯೇ ಇಲ್ಲದಾಗಿದೆ. ಕೂದಲು ಗಳಿಗೆ ಪ್ರತಿದಿನ ಎಣ್ಣೆ ಹಚ್ಚುವುದು ಲಾಭದಾಯಕವಾಗಿದೆ. ಆದುದರಿಂದ ಕೂದಲು ಚೆನ್ನಾಗಿರುತ್ತವೆ. ಕೂದಲುಗಳ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣ ಕಡಿಮೆಯಾಗುತ್ತದೆ. ಕೂದಲುಗಳನ್ನು ಮುಕ್ತವಾಗಿ ಬಿಟ್ಟರೆ ಅವು ಹೆಚ್ಚು ಉದುರುತ್ತವೆ ಮತ್ತು ಅವುಗಳ ಮೇಲೆ ಕೆಟ್ಟ ಶಕ್ತಿಗಳ ಆಕ್ರಮಣವೂ ಆಗುತ್ತದೆ. ಕೂದಲು ಕೆಳಗೆ ಬಿದ್ದರೆ ಪರಿಸರ ಕಲುಷಿತಗೊಳ್ಳುತ್ತದೆ. ಕೂದಲುಗಳಿಗೆ ಕಾರಣವಿಲ್ಲದೇ ಕೈ ಹಚ್ಚಬಾರದು ಅಥವಾ ಕೂದಲುಗಳನ್ನು ಸುಮ್ಮನೆ ಮುಕ್ತವಾಗಿ ಬಿಡಬಾರದು ಅಥವಾ ಗಟ್ಟಿಯಾಗಿ ಕಟ್ಟಬಾರದು.

ಆ. ಪ್ರತಿಯೊಬ್ಬರ ಬಾಚಣಿಗೆ ಪ್ರತ್ಯೇಕ ಇರಬೇಕು. ವಾರಕ್ಕೊಮ್ಮೆ ಅದನ್ನು ಹಳೆಯ ಟೂಥಬ್ರಶ್‌ನ ಸಹಾಯದಿಂದ ಸಾಬೂನಿನಿಂದ ಸ್ವಚ್ಛಗೊಳಿಸಬೇಕು. ಬಾಚಣಿಗೆಗಾಗಿ ಇಟ್ಟಿರುವ ಬ್ರಶ್‌ ಮೇಲೆ ‘ಬಾಚಣಿಗೆಗಾಗಿ’ ಎಂಬ ಚೀಟಿ ಅಂಟಿಸಬೇಕು.

ಇ. ಪುರುಷರು ಪ್ರತಿದಿನ ಕೂದಲುಗಳನ್ನು ತೊಳೆಯಬಹುದು. ಮಹಿಳೆಯರು ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಕೂದಲು ಗಳನ್ನು ತೊಳೆಯಬಹುದು. ಕೂದಲುಗಳನ್ನು ತೆಳುವಾದ ಪಂಚೆಯಿಂದ ಒರೆಸಿ ಒಣಗಿಸಬೇಕು. ಕೂದಲು ಹೆಚ್ಚು ಉದುರು ತ್ತಿದ್ದರೆ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇರಬಹುದು. ಇದಕ್ಕಾಗಿ ರಕ್ತದಲ್ಲಿನ ಹೆಮೊಗ್ಲೋಬಿನ್‌ನ ಪರೀಕ್ಷೆ ಮಾಡಿಸಿಕೊಳ್ಳಬೇಕು.

೩. ಕಿವಿ ಮತ್ತು ಉಗುರುಗಳ ಆರೈಕೆ ಹೇಗೆ ಮಾಡುವಿರಿ ?

ಅ. ವಾರಕ್ಕೊಮ್ಮೆ ಕಿವಿಯಲ್ಲಿ ‘ಇಯರಬಡ್’ (ಕಿವಿಯಲ್ಲಿನ ಕೊಳೆ ಯನ್ನು ತೆಗೆಯಲು ಬಳಸಲಾಗುವ ಹತ್ತಿಯ ಕಡ್ಡಿ) ಬಳಸಿ ಕೊಳೆಯನ್ನು ತೆಗೆಯಬೇಕು. ಕೆಲವರು ಕಿವಿಯಲ್ಲಿನ ಕೊಳೆಯನ್ನು ಬೀಗದ ಕೈ, ಕೂದಲುಗಳ ಪಿನ್‌ ಅಥವಾ ಬೆರಳುಗಳ ಸಹಾಯದಿಂದ ತೆಗೆಯುತ್ತಾರೆ. ಇದರಿಂದ ಕಿವಿಗಳಿಗೆ ಗಾಯವಾಗಬಹುದು. ಕೊಳೆ ತೆಗೆದ ನಂತರ ಕೈಗಳನ್ನು ತೊಳೆದುಕೊಳ್ಳಬೇಕು.

ಆ. ಉಗುರುಗಳನ್ನು ಕಾಲಕಾಲಕ್ಕೆ ಕತ್ತರಿಸಬೇಕು. ಬೆಳೆದ ಉಗುರು ಗಳಲ್ಲಿ ಕೊಳೆ ಸಂಗ್ರಹವಾದರೆ ಅದು ರೋಗಕ್ಕೆ ಕಾರಣವಾಗಬಹುದು.

೪. ಕೈಗಳನ್ನು ಯಾವಾಗ ತೊಳೆಯಬೇಕು ?

ಅ. ಸಾರ್ವಜನಿಕ ಶೌಚಾಲಯವನ್ನು ಬಳಸಿದರೆ ಸಾಬೂನಿನಿಂದ ಕೈ ತೊಳೆಯಬೇಕು ಅಥವಾ ‘ಸ್ಯಾನಿಟೈಸರ್‌’ನಿಂದ (ಕೈ ತೊಳೆ ಯುವದಕ್ಕಾಗಿ ಬಳಸುವ ದ್ರವ) ಕೈಗಳನ್ನು ಸ್ವಚ್ಛಗೊಳಿಸಬೇಕು. ಹಾಗೆ ಮಾಡದಿದ್ದರೆ ‘ಟೈಫೈಡ್’ (ವಿಷಮಜ್ವರ) ಅಥವಾ ಭೇದಿಯಾಗಬಹುದು.

ಆ. ಸದ್ಯ ವಿಮಾನನಿಲ್ದಾಣ ಮತ್ತು ಮಾಲ್ಸ್‌ಗಳಲ್ಲಿ ಲೆಝರ್‌ನ ನಲ್ಲಿಗಳಿರುತ್ತವೆ (ಪೈಪ್) ಇರುತ್ತವೆ. ಅವುಗಳನ್ನು ಸ್ಪರ್ಶಿಸುವ ಆವಶ್ಯಕತೆ ಇರುವುದಿಲ್ಲ. ನಲ್ಲಿಯ ಕೆಳಗೆ ಕೈ ಹಿಡಿದರೆ ಅದರಿಂದ ತಾನಾಗಿಯೇ ನೀರು ಬರುತ್ತದೆ. ಕೈ ಒಣಗಿಸಿಕೊಳ್ಳಲು ‘ಡ್ರಾಯರ್‌’ನ ಯಂತ್ರ ಇರುತ್ತದೆ.

೫. ಚರ್ಮದ ಆರೈಕೆಯನ್ನು ಹೇಗೆ ಮಾಡಿಕೊಳ್ಳಬೇಕು ?

ಅ. ಚರ್ಮವನ್ನು ಕೆರೆದಾಗ ಆ ಭಾಗದ ಜೀವಕೋಶಗಳು ಉಗುರಿನಲ್ಲಿ ಬರುತ್ತವೆ. ಚರ್ಮದ ಸೋಂಕು ಇದ್ದರೆ ಕೆರೆದಾಗ ಉಗುರುಗಳಲ್ಲಿ ಸತ್ತ ಜೀವಕೋಶಗಳು ಬರುತ್ತವೆ; ಆದುದರಿಂದ ಕೆರೆದ ನಂತರ ಸಾಬೂನಿನಿಂದ ಕೈ ತೊಳೆಯಬೇಕು.

ಆ. ನಿಮ್ಮ ಅಂಗಾಲುಗಳಲ್ಲಿರುವ ಗಟ್ಟಿಯಾದ (ವಿಶೇಷವಾಗಿ ವಯಸ್ಸಾದವರ ಅಂಗಾಲುಗಳ ಮೇಲಿರುವ) ಚರ್ಮವನ್ನು ತೆಗೆಯಲು ಉಗುರುಬೆಚ್ಚಗಿನ ನೀರಿನಲ್ಲಿ ಕೂದಲುಗಳ ಶ್ಯಾಂಪು ಹಾಕಿ ಪಾದಗಳನ್ನು ೧೦ ರಿಂದ ೧೫ ನಿಮಿಷಗಳ ಕಾಲ ಮುಳುಗಿಸಿಡಬೇಕು. ನಂತರ ‘ಲುಫಾ ಸ್ಪಂಜ್‌'(ಸೀಗೆ) ಬಳಸಿ ಆ ಚರ್ಮವನ್ನು ತೆಗೆಯಬೇಕು. ಚರ್ಮ ಬಹಳ ಗಟ್ಟಿಯಾಗಿದ್ದರೆ ಪುನಃ ಮರುದಿನ ಈ ಪ್ರಕ್ರಿಯೆಯನ್ನು ಮಾಡಬೇಕು; ಆದರೆ ಬಹಳ ಜೋರಾಗಿ ಮಾಡಬಾರದು. ರಕ್ತ ಬಂದರೆ ಸ್ವಲ್ಪ ಸಮಯ ಅಲ್ಲಿ ಕೈಯಿಂದ ಗಟ್ಟಿಯಾಗಿ ಹಿಡಿದು ಆ ಭಾಗಕ್ಕೆ ‘ಸೋಫ್ರಾಮೈಸಿನ್’ ಈ ಮುಲಾಮ್‌ ಹಚ್ಚಬೇಕು.

ಇ. ಮಲಗುವ ಮೊದಲು ಕಾಲುಗಳನ್ನು ತೊಳೆಯಬೇಕು. ತೋಟದಲ್ಲಿ ಅಥವಾ ಹೊಲದಲ್ಲಿ ಬರಿಗಾಲಿನಲ್ಲಿ ಹೋದರೂ ಮಲಗುವ ಮೊದಲು ಕಾಲುಗಳನ್ನು ತೊಳೆದು ಒರೆಸಿ ನಂತರವೇ ಮಲಗಬೇಕು. ಮಣ್ಣಿನಲ್ಲಿನಲ್ಲಿರುವ ಸೂಕ್ಷ್ಮ ಜೀವಿಗಳು ಚರ್ಮದ ಮೂಲಕ ದೇಹದಲ್ಲಿ ಪ್ರವೇಶಿಸಿ ರೋಗವನ್ನು ಉಂಟುಮಾಡಬಹುದು.

ಈ. ಮನೆಯಲ್ಲಿ ಸಾಧ್ಯವಾದಷ್ಟು ವಾರಕ್ಕೊಮ್ಮೆ ಅಥವಾ ೧೫ ದಿನಗಳಿಗೊಮ್ಮೆ ಮಂಚದ ಮೇಲಿನ ಹೊದಿಕೆಯನ್ನು ಬದಲಾಯಿಸಬೇಕು. ಅದರಿಂದ ದಿನನಿತ್ಯದ ಧೂಳಿನಿಂದ ಬರುವ ರೋಗಗಳು, ಉದಾ. ‘ಡಸ್ಟ್ ಮೈಟ್’ ಅಥವಾ ಚರ್ಮದ ಅಲರ್ಜಿಯಾಗುವುದನ್ನು ತಪ್ಪಿಸಬಹುದು. ಕೆಳಗೆ ನೂಲಿನ ಬಟ್ಟೆಯ ಹೊದಿಕೆ ಮತ್ತು ಮೇಲೆ ದಪ್ಪನೆಯ ಹೊದಿಕೆಯನ್ನು ಹಾಕಬೇಕು. ರಾತ್ರಿ ಮಲಗುವಾಗ ಮೇಲಿನ ಹೊದಿಕೆಯನ್ನು ತೆಗೆಯಬೇಕು. ಇದು ಸಾಧ್ಯವಾಗದಿದ್ದರೆ ಒಂದೇ ಹೊದಿಕೆಯನ್ನು ಹಾಕಬೇಕು; ಆದರೆ ಅದು ಸ್ವಚ್ಛವಾಗಿರಬೇಕು.

ಉ. ಭಾರತದ ಹೆಚ್ಚಿನ ಸ್ಥಳಗಳಲ್ಲಿ ಗಾಳಿಯು ತೇವಾಂಶದಿಂದ

ಕೂಡಿರುವುದರಿಂದ ಟರ್ಕಿಶ್‌ ಟವೆಲ್‌ ಬದಲು ನೂಲಿನ ಬೈರಾಸುಗಳನ್ನು ಬಳಸಬೇಕು; ಏಕೆಂದರೆ ಟರ್ಕಿಶ್‌ ಟವೆಲ್‌ಗಳು ಒದ್ದೆಯಾಗಿರುತ್ತವೆ. ಇದು ಕೆಟ್ಟ ವಾಸನೆಯನ್ನು ಉಂಟು ಮಾಡಬಹುದು ಮತ್ತು ಸೋಂಕಿಗೂ ಕಾರಣವಾಗಬಹುದು. ಆ ‘ಟವೆಲ್ನ್ನು ಬಿಸಿಲಿನಲ್ಲಿ ಒಣಗಿಸಿದರೆ ಅದು ಬಳಸಲು ಯೋಗ್ಯವಾಗುತ್ತದೆ. ನಿಮ್ಮ ಟವೆಲ್ನ್ನು ವಾರಕ್ಕೊಮ್ಮೆಯಾದರೂ ತೊಳೆಯಬೇಕು. ಪ್ರತಿಯೊಬ್ಬ ವ್ಯಕ್ತಿಯು ತನ್ನದೇ ಆದ ವೈಯಕ್ತಿಕ ಟವೆಲ್‌ ಅನ್ನು ಇಟ್ಟುಕೊಂಡಿರÀಬೇಕು.

೬. ಔಷಧಿಗಳ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕಾಳಜಿ !

ಅ. ಆಯುರ್ವೇದ ಅಥವಾ ಆಲೋಪಥಿ, ಯಾವುದೇ ಔಷಧವನ್ನು ಆಧುನಿಕ ವೈದ್ಯರು ಅಥವಾ ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು. ಸಮಾಜದಲ್ಲಿ, ‘ಆಯುರ್ವೇದಿಕ ಔಷಧಿಗಳನ್ನು ಅನೇಕ ವರ್ಷಗಳ ಕಾಲ ನಿರಂತರ ತೆಗೆದುಕೊಂಡರೂ ಅವು ಯಾವುದೇ ಅಡ್ಡಪರಿಣಾಮಗಳನ್ನು ಉಂಟುಮಾಡುವುದಿಲ್ಲ ಎಂಬ ತಪ್ಪು ತಿಳುವಳಿಕೆ ಇದೆ; ಆದರೆ ಇದು ತಪ್ಪು. ಕೆಲವು ಪ್ರದೇಶಗಳಲ್ಲಿ ಜನರು ವೈದ್ಯರನ್ನು ಸಂಪರ್ಕಿಸದೇ ‘ಪಚನಕ್ಕಾಗಿ ಅರಿಷ್ಟ’ ಔಷಧಿಯನ್ನು ತೆಗೆದುಕೊಳ್ಳುತ್ತಾರೆ. ಇದರಿಂದ ಸಾಮಾನ್ಯ ವಾಗಿ ಸರಾಯಿ ಸೇವನೆಯಿಂದÀ ಬರುವ ಕಾಯಿಲೆಗಳು ಈ ರೀತಿ ಮಾಡುವುದರಿಂದ ಸರಾಯಿ ಕುಡಿಯದೇ ಬರುತ್ತವೆ.

ಆ. ಬೇಗ ಗುಣಮುಖರಾಗಲು ಅಥವಾ ಶಕ್ತಿವರ್ಧಕವೆಂದು ಕೆಲವು ಆಧುನಿಕ ವೈದ್ಯರು ಸ್ಟಿರಾಯಡ್‌ ಇಂಜೆಕ್ಷನ್‌ ಕೊಡುತ್ತಾರೆ. ಅದರಿಂದ ರೋಗಿಗೆ ತಕ್ಷಣ ಆರಾಮ ಅನಿಸುತ್ತದೆ. ಕೆಲವೊಮ್ಮೆ ರೋಗಿಯು ತಾನಾಗಿಯೇ ಪದೇ ಪದೇ ಅದನ್ನು ಕೇಳುತ್ತಾನೆ. ಸ್ಟಿರಾಯಡ್ನ್ನು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಳ್ಳುವುದು ಅನೇಕ ಅವಯವಗಳಿಗೆ ಹಾನಿಕರÀವಾಗಿದೆ. ಮಾತ್ರೆಗಳಿಗಿಂತ ಇಂಜೆಕ್ಷನ್‌ ತೆಗೆದುಕೊಳ್ಳುವುದು ಹೆಚ್ಚು ಲಾಭದಾಯಕವಾಗಿದೆ ಎಂಬುದು ತಪ್ಪು ಕಲ್ಪನೆ. ರೋಗಿಯು ಗಂಭೀರ ಸ್ಥಿತಿಯಲ್ಲಿರುವಾಗ ಇಂಜೆಕ್ಷನ್‌ ನೀಡುವುದು ಬೇರೆ ವಿಷಯ.

ಇ. ೧-೨ ದಿನ ಪ್ರಥಮ ಚಿಕಿತ್ಸೆಯೆಂದು ಔಷಧಿಗಳನ್ನು ತೆಗೆದುಕೊಳ್ಳಬಹುದು; ಆದರೆ ಆಧುನಿಕ ವೈದ್ಯರು ಅಥವಾ ವೈದ್ಯರ ಸಲಹೆಯ ಹೊರತು ಸುಮ್ಮನೆ ಯಾರೋ ಹೇಳಿದರೆಂದು ಔಷಧಗಳನ್ನು ತೆಗೆದುಕೊಳ್ಳಬಾರದು.

ಈ. ಅಡುಗೆ ಮಾಡುವಾಗ ಪದಾರ್ಥದ ರುಚಿ ನೋಡಲು ಕೆಲವರು ಅಂಗೈಯಲ್ಲಿ ಪದಾರ್ಥಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಸಮಯದಲ್ಲಿ ಕೈ ತೊಳೆದು ಪುನಃ ಅಡುಗೆ ಮಾಡಬೇಕು. ಇಲ್ಲವಾದರೆ ಚಮಚದಿಂದ ಅಥವಾ ಬಟ್ಟಲಲ್ಲಿ ತೆಗೆದುಕೊಂಡು ರುಚಿ ನೋಡಬಹುದು. ಸೀನುವಾಗ ಅಥವಾ ಕೆಮ್ಮುವಾಗ ಕೈ ಯನ್ನು ಬಾಯಿಗೆ ಅಡ್ಡ ಹಿಡಿದಾಗ ಕೈ ತೊಳೆಯದೇ ಹಾಗೆಯೇ ಅಡುಗೆ ಮಾಡುವುದು ಅಥವಾ ಅಡುಗೆಯ ಪಾತ್ರೆಗಳು, ಟವೆಲ್‌ ಇತ್ಯಾದಿ ಸ್ಪರ್ಶಿಸುವುದನ್ನು ತಪ್ಪಿಸಬೇಕು; ಏಕೆಂದರೆ ಇನ್ನೊಬ್ಬ ವ್ಯಕ್ತಿ ಅದನ್ನು ಬಳಸಿದಾಗ ಕ್ರಿಮಿಗಳು (ಬ್ಯಾಕ್ಟೇರಿಯಾ) ಹರಡುವ ಸಾಧ್ಯತೆ ಇರುತ್ತದೆ.

೭. ಇತರ

ಅ. ಸೀನುವಾಗ ಬಾಯಿಯ ಮುಂದೆ ಕರವಸ್ತ್ರ ಇಟ್ಟುಕೊಳ್ಳಬೇಕು. ಕರವಸ್ತ್ರ ಇರದಿದ್ದರೆ ಬಾಯಿಯ ಮುಂದೆ ಅಂಗೈಯನ್ನು ಅಡ್ಡ ಹಿಡಿದು ನಂತರ ಕೈ ತೊಳೆಯಬೇಕು ಅಥವಾ ನಿಮ್ಮ ಬಟ್ಟೆಯ ತೋಳಿನ ಮೇಲೆ ಸೀನಬೇಕು. ಕೈತೊಳೆಯಲು ಅನುಕೂಲವಿಲ್ಲದಿದ್ದರೆ, ಉದಾ, ರೈಲು ಪ್ರಯಾಣದಲ್ಲಿರುವಾಗ, ಶಾಲೆಯಲ್ಲಿರುವಾಗ ಇಂತಹ ಸಮಯದಲ್ಲಿ ‘ಸ್ಯಾನಿಟೈಸರ್‌’ನಿಂದ ಕೈಯನ್ನು ಸ್ವಚ್ಛ ತೊಳೆಯ ಬೇಕು. ತಮ್ಮ ಬಳಿ ‘ಸ್ಯಾನಿಟೈಸರ್‌’ನ ಚಿಕ್ಕ ಬಾಟಲಿಯನ್ನು ಅಥವಾ ‘ವೆಟ್‌ ವೈಪ್‌’ಅನ್ನು (ಒದ್ದೆ ಟಿಶ್ಯು) ಯಾವಾಗಲೂ ಇಟ್ಟುಕೊಳ್ಳಬೇಕು.

ಆ. ಕಲುಷಿತ ನೀರನ್ನು ಕುಡಿಯುವುದರಿಂದ ಅತಿಸಾರ, ಅಮೀಬಾಯೆಸಿಸ್, ಭೇದಿ, ಕಾಲರಾ ಮುಂತಾದ ರೋಗಗಳು ಬರಬಹುದು; ಆದುದರಿಂದ ‘ಫಿಲ್ಟರ್’ ಮಾಡಿದ (ಯಂತ್ರದಿಂದ ಶುದ್ಧಿಗೊಳಿಸಿದ) ನೀರನ್ನು ಕುಡಿಯಬೇಕು ಅಥವಾ ಕುದಿಸಿದ ನೀರನ್ನು ಕುಡಿಯಬೇಕು. ನೀರನ್ನು ಕೇವಲ ಬಿಸಿ ಮಾಡುವುದರಿಂದ ಕ್ರಿಮಿಗಳು ಸಾಯುವುದಿಲ್ಲ. ಅದಕ್ಕಾಗಿ ನೀರನ್ನು ಕನಿಷ್ಠ ೧೦ ನಿಮಿಷಗಳ ಕಾಲ ಕುದಿಸುವುದು ಆವಶ್ಯಕವಾಗಿದೆ.

ಇ. ಕೆಲವು ಕಾರಣಗಳಿಂದ ಹೊರಗಿನ ಆಹಾರಪದಾರ್ಥಗಳನ್ನು ತಿನ್ನುವ ಪ್ರಸಂಗ ಬಂದರೆ ಆ ಆಹಾರ ಬಿಸಿಯಾಗಿದೆಯೇ, ಎಂಬುದನ್ನು ಖಚಿತಪಡಿಸಿಕೊಳ್ಳಿರಿ. ನೊಣಗಳು ಕುಳಿತ ಖಾದ್ಯಪದಾರ್ಥಗಳನ್ನು ತಿನ್ನಬಾರದು, ಹಾಗೆಯೇ ಸ್ವಲ್ಪ ಸಮಯ ಮೊದಲೇ ಕತ್ತರಿಸಿಟ್ಟ ಹಣ್ಣುಗಳನ್ನು ತಿನ್ನಬಾರದು.

ಈ. ಯಂತ್ರಗಳಿಂದ (‘ಜ್ಯೂಸರ್‌’ನಿಂದ) ತೆಗೆದ ಹಣ್ಣುಗಳ ರಸವನ್ನು ಸಾಧ್ಯವಾದಷ್ಟು ಕುಡಿಯಬಾರದು; ಏಕೆಂದರೆ ಹಣ್ಣುಗಳ ರಸವನ್ನು ತೆಗೆಯುವ ಯಂತ್ರಗಳನ್ನು ಮೇಲಿಂದ ಮೇಲೆ ಸ್ವಚ್ಛ ಮಾಡುವುದಿಲ್ಲ. ಆದುದರಿಂದ ‘ಟೈಫೈಡ್‌’, ಕಾಮಾಲೆ ಮುಂತಾದ ರೋಗಗಳು ಬರಬಹುದು.

ಉ. ಪ್ರತಿದಿನ ಧರಿಸುವ ಚಿನ್ನದ ಆಭರಣಗಳನ್ನು ಹದಿನೈದು ದಿನಗಳಿಗೊಮ್ಮೆ ತೊಳೆಯಬೇಕು. ಬಟ್ಟಲಿನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಬಟ್ಟೆ ತೊಳೆಯುವ ಸಾಬೂನು ಪುಡಿ ಮತ್ತು ಚಿಟಿಕೆಯಷ್ಟು ಅರಿಶಿಣವನ್ನು ಹಾಕಬೇಕು. ಹೀಗೆ ಮಾಡುವುದರಿಂದ ನೀರು ಕೆಂಪಾಗುತ್ತದೆ. ಆಧ್ಯಾತ್ಮಿಕ ಲಾಭಕ್ಕಾಗಿ ನೀರಿನಲ್ಲಿ ಒಂದು ಚಿಟಿಕೆಯಷ್ಟು ವಿಭೂತಿ ಹಾಕಬಹುದು. ಆಭರಣಗಳನ್ನು ೧೦ ರಿಂದ ೧೫ ನಿಮಿಷಗಳ ಕಾಲ ಅದರಲ್ಲಿ ನೆನೆಸಿಡಬೇಕು. ಹಳೆಯ ಟೂಥ್‌ ಬ್ರಶ್‌ ಬಳಸಿ ಆಭರಣಗಳನ್ನು ಸ್ವಚ್ಛಗೊಳಿಸಿ ನಲ್ಲಿಯ ತಣ್ಣೀರಿನಿಂದ ತೊಳೆಯಬೇಕು. ಆಭರಣ ಗಳಿಗಾಗಿ ಬೇರೆ ಬ್ರಶ್‌ ಬಳಸಬೇಕು.

– ಡಾ. ರೂಪಾಲಿ ಭಾಟಕರ, ಫೋಂಡಾ, ಗೋವಾ. (೧೨.೨.೨೦೨೫)